ಪ್ರಧಾನಿ ಮೋದಿ
ಪ್ರಧಾನಿ ಮೋದಿ 
ದೇಶ

ರಾಜ್‌ಕೋಟ್, ಬಟಿಂಡಾ, ರಾಯ್ ಬರೇಲಿ, ಕಲ್ಯಾಣಿ ಮತ್ತು ಮಂಗಳಗಿರಿಯ AIIMS ಉದ್ಘಾಟಿಸಿದ ಪ್ರಧಾನಿ ಮೋದಿ

Lingaraj Badiger

ರಾಜ್‌ಕೋಟ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯನ್ನು ಉದ್ಘಾಟಿಸಿದರು. ಇದೇ ವೇಳೆ ಬಟಿಂಡಾ(ಪಂಜಾಬ್), ರಾಯ್ ಬರೇಲಿ(ಉತ್ತರ ಪ್ರದೇಶ), ಕಲ್ಯಾಣಿ(ಪಶ್ಚಿಮ ಬಂಗಾಳ) ಮತ್ತು ಮಂಗಳಗಿರಿ(ಆಂಧ್ರಪ್ರದೇಶ)ಯ ಇತರ ನಾಲ್ಕು ಏಮ್ಸ್‌ಗಳನ್ನು ದೇಶಕ್ಕೆ ಸಮರ್ಪಿಸಿದರು.

ರಾಜ್‌ಕೋಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು, 48,000 ಕೋಟಿ ರೂಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

"ಬಳಿಕ ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯದ ನಂತರ 50 ವರ್ಷಗಳವರೆಗೆ, ದೇಶದಲ್ಲಿ ಒಂದೇ ಏಮ್ಸ್ ಇತ್ತು. ಅದು ದೆಹಲಿಯಲ್ಲಿ ಮಾತ್ರ. ಸ್ವಾತಂತ್ರ್ಯದ ನಂತರ ಏಳು ದಶಕಗಳಲ್ಲಿ ಕೇವಲ ಏಳು ಏಮ್ಸ್‌ಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ಇವುಗಳು ಪೂರ್ಣಗೊಂಡಿಲ್ಲ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಕೇವಲ 10 ದಿನಗಳಲ್ಲಿ ಏಳು ಹೊಸ ಏಮ್ಸ್‌ಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ನಾವು ಕಳೆದ ಆರರಿಂದ ಏಳು ದಶಕಗಳಲ್ಲಿ ನಡೆದಿದ್ದಕ್ಕಿಂತ ಹೆಚ್ಚು ವೇಗವಾಗಿ ದೇಶವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

SCROLL FOR NEXT