ದೇಶ

ThinkEdu Conclave: ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ- ಖುಷ್ಬು

Lingaraj Badiger

ಚೆನ್ನೈ: ರಾಮ ಮಂದಿರದ ಉದ್ಘಾಟನೆಯನ್ನು ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಖುಷ್ಬು ಸುಂದರ್ ಅವರು  ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಇಂದು ಚೆನ್ನೈನಲ್ಲಿ SASTRA ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ ಎರಡು ದಿನಗಳ ThinkEdu ಕಾನ್ಕ್ಲೇವ್ 2024ರಲ್ಲಿ ಮಾತನಾಡಿದ ಖುಷ್ಬು, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಒಂದು ಹೆಜ್ಜೆ ಹಿಂದೆ ಇದ್ದರೂ ರಾಮ ಮಂದಿರ ಉದ್ಘಾಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ ಎಂದು ಹೇಳಿದರು.

ಈ ಎರಡು ರಾಜ್ಯಗಳಲ್ಲಿ ನಾವು ಇಲ್ಲಿಯವರೆಗೆ ದೊಡ್ಡ ನೆಲೆ ಕಂಡುಕೊಂಡಿಲ್ಲ. ಆದರೆ, ಮುಂದಿನ ಆರರಿಂದ ಏಳು ವರ್ಷಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಚುನಾವಣೆಯು ನಮಗೆ ಸವಾಲಿನದ್ದಾಗಿದೆ. 2024ರ ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇವೆ ಎಂದರು.

ತಮ್ಮ ಸರ್ಕಾರ 15 ತಿಂಗಳಲ್ಲಿ ಮಧುರೈನಲ್ಲಿ ನಿರ್ಮಿಸಿದ ಮಹಾನ್ ಗ್ರಂಥಾಲಯದ ಉದಾಹರಣೆಯನ್ನು ಉಲ್ಲೇಖಿಸಿದ ಡಿಎಂಕೆಯ ಅಧಿಕೃತ ವಕ್ತಾರ ಸರವಣನ್ ಅಣ್ಣಾದೊರೈ ಅವರು, ಬಿಜೆಪಿ ದೇವಾಲಯಗಳನ್ನು ನಿರ್ಮಿಸಲು ಬಯಸಿದರೆ ನಾವು ಕಲಿಕೆಯ ದೇವಾಲಯಗಳನ್ನು ನಿರ್ಮಿಸಲು ಬಯಸುತ್ತೇವೆ ಎಂದು ಹೇಳಿದರು.

ರಾಮ ಮಂದಿರ ಉದ್ಘಾಟನೆಯನ್ನು ನೋಡಿದರೆ ಇದೊಂದು ರಾಜಕೀಯ ನಡೆ ಎಂಬುದು ಸ್ಪಷ್ಟವಾಗುತ್ತದೆ. ಬೇರೆ ಯಾವುದೇ ವಿಷಯದ ಬಗ್ಗೆ ಅವರು ಮಾತನಾಡುವುದಿಲ್ಲ. ಆದರೆ ಸಾಮಾನ್ಯ ಜನರ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸುವ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಸರ್ಕಾರ ನಮ್ಮಲ್ಲಿದೆ, ಪ್ರತಿ ಜಿಲ್ಲೆಯಲ್ಲೂ ಗ್ರಂಥಾಲಯಗಳಿವೆ" ಎಂದು ಅವರು ಹೇಳಿದರು.

SCROLL FOR NEXT