ದೇಶ

ನಿತೀಶ್ ಕುಮಾರ್ ಎನ್ ಡಿಎಗೆ ವಾಪಸ್: ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂದ ರವಿಶಂಕರ್ ಪ್ರಸಾದ್!

Nagaraja AB

ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದ್ದು, ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂದು ಮಾಜಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಹಾಗೂ ಬಿಹಾರದ ರಾಜಕೀಯ ಪರಿಸ್ಥಿತಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್, ಇಂಡಿಯಾ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲ ಎಂದು ಅದರ ಹಿಂದಿದ್ದ ನಿತೀಶ್ ಕುಮಾರ್ ಹೇಳುವುದಾದರೆ, ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ಹುದ್ದೆ ಖಾಲಿ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಲಿದ್ದು, ಬಿಹಾರದ ಎಲ್ಲಾ 40 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಹೇಳುವ ಮೂಲಕ  ಆಗಾಗ್ಗೆ ಮೈತ್ರಿ ಬದಲಾಯಿಸುವ ನಿತೀಶ್ ಕುಮಾರ್ ಅವರಿಗೆ  ಸ್ಪಷ್ಟ ಸಂದೇಶ ನೀಡಿದರು. 

ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟ ರಚನೆಯಲ್ಲಿ ನಿತೀಶ್ ಕುಮಾರ್ ಮುಂಚೂಣಿಯಲ್ಲಿದ್ದರು. ಅವರ ನೇತೃತ್ವದಲ್ಲಿ ಜೂನ್ 23, 2023ರಲ್ಲಿ ಪಾಟ್ನಾದಲ್ಲಿ ಮೊದಲ ಸಭೆ ಕೂಡಾ ನಡೆದಿತ್ತು. ಈ ಸಭೆಯಲ್ಲಿ 16 ವಿರೋಧ ಪಕ್ಷಗಳು ಭಾಗವಹಿಸಿದ್ದವು. 

ನಂತರ ಜುಲೈ 18 ರಂದು ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿಯೂ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು. ಆದರೆ, ಡಿಸೆಂಬರ್ 19 ರಂದು ನವದೆಹಲಿಯಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪ್ರಸ್ತಾಪ ನಿತೀಶ್ ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಯಿತು.ಅಲ್ಲಿಂದಾಚೆಗೆ ಇಂಡಿಯಾ ಬಣದಿಂದ ಅಂತರ ಕಾಯ್ದುಕೊಂಡಿದ್ದರು. 

ಈಗ ಬದಲಾದ ಸನ್ನಿವೇಶದಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನ್ ಜೊತೆಗೆ ಸಖ್ಯ ಕಳೆದುಕೊಂಡು ಬಿಜೆಪಿ ಜೊತೆಗೆ ಸರ್ಕಾರ ಹೊಸ ಸರ್ಕಾರ ರಚಿಸುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಅವಮಾನದಿಂದಲೇ ಇಂಡಿಯಾ ಮೈತ್ರಿಕೂಟ ಪತನಕ್ಕೆ ಕಾರಣವಾಗಿದೆ ಎಂದು ಜೆಡಿಯು ವಕ್ತಾರ ಕೆ. ಸಿ.ತ್ಯಾಗಿ ಶನಿವಾರ ಹೇಳಿಕೆ ನೀಡಿದ್ದರು.

SCROLL FOR NEXT