ಡಿಜಿಟಲ್ ಅರೆಸ್ಟ್ (ಸಾಂಕೇತಿಕ ಚಿತ್ರ) online desk
ದೇಶ

Digital Arrest Scam: ಪೋರ್ನ್ ಹಂಚಿದ್ದಕ್ಕೆ ಶಿಕ್ಷೆ ವಿಧಿಸುವ ಬೆದರಿಕೆ; 48 ಗಂಟೆಗಳ ವಿಚಾರಣೆ; 59 ಲಕ್ಷ ರೂ. ಕಳೆದುಕೊಂಡ ವೈದ್ಯೆ!

ಡಿಜಿಟಲ್ ಅರೆಸ್ಟ್ ಎಂಬ ಹೊಸ ವಂಚನೆಯ ಪ್ರಕಾರವನ್ನು ದೆಹಲಿ ಎನ್ ಸಿಆರ್ ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.

ನವದೆಹಲಿ: ಡಿಜಿಟಲ್ ಯುಗದಲ್ಲಿ ವಂಚಕರು ಹಣ ದೋಚುವುದಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಪೈಕಿ digital arrest ಎಂಬ ಬೆದರಿಕೆ ಮಾರುಕಟ್ಟೆಗೆ ಬಂದಿರುವ ಹೊಸ ಸರಕು!

ಈ ಡಿಜಿಟಲ್ ಅರೆಸ್ಟ್ ಎಂಬ ಬೆದರಿಕೆ ಬಲೆಗೆ ಬಿದ್ದ ವೈದ್ಯೆಯೊಬ್ಬರು ಬರೊಬ್ಬರಿ 59 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಡಿಜಿಟಲ್ ಅರೆಸ್ಟ್ ಎಂಬ ಹೊಸ ವಂಚನೆಯ ಪ್ರಕಾರವನ್ನು ದೆಹಲಿ ಎನ್ ಸಿಆರ್ ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.

ನೋಯ್ಡಾ ಸೆಕ್ಟರ್ 77 ರ ನಿವಾಸಿ ಡಾ.ಪೂಜಾ ಗೋಯಲ್ ಗೆ ಜುಲೈ 13 ರಂದು ಬಂದ ಕರೆಯಲ್ಲಿ ವ್ಯಕ್ತಿಯೋರ್ವ ತನ್ನನ್ನು ತಾನು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ವೈದ್ಯೆಯ ಫೋನ್ ಪೋರ್ನ್ ವೀಡಿಯೊಗಳನ್ನು ಪ್ರಸಾರ ಮಾಡಲು ಬಳಕೆಯಾಗುತ್ತಿದೆ ಎಂದು ಹೇಳಿದ್ದ. ವೈದ್ಯೆ ಇದನ್ನು ನಿರಾಕರಿಸಿದ್ದರು. ಆದರೆ ಕರೆ ಮಾಡಿದ ವ್ಯಕ್ತಿ ವಿಡಿಯೋ ಕಾಲ್ ಸ್ವೀಕರಿಸುವಂತೆ ವೈದ್ಯೆಗೆ ಹೇಳಿ, ಪೋರ್ನ್ ಹಂಚಿದ್ದಕ್ಕೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭೀತಿ ಹುಟ್ಟಿಸಿದ್ದ. ಅಷ್ಟೇ ಅಲ್ಲದೇ ಡಿಜಿಟಲ್ ಅರೆಸ್ಟ್ (ಡಿಜಿಟಲ್ ಬಂಧನ) ಗೆ ಒಳಗಾಗಿದ್ದೀರ ಎಂದು ಬೆದರಿಕೆ ಹಾಕಿದ್ದ. ಸಮಸ್ಯೆಯಿಂದ ಪಾರಾಗಬೇಕಾದರೆ 59 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಿ ವೈದ್ಯೆಯನ್ನು ಯಾಮಾರಿಸಿದ್ದ.

ಡಿಜಿಟಲ್ ಬಂಧನದ ಹಿನ್ನೆಲೆಯಲ್ಲಿ 48 ಗಂಟೆಗಳ ಸತತ ವಿಚಾರಣೆಯ ಹಿನ್ನೆಲೆಯಲ್ಲಿ ವೈದ್ಯೆಗೆ ಭೀತಿ ಉಂಟಾಗಿ, ಆಕೆ ಕರೆ ಮಾಡಿದ್ದ ವ್ಯಕ್ತಿ ಹೇಳಿದಂತೆ ಕೇಳಲು ಆರಂಭಿಸಿದ್ದಾರೆ. ಬಳಿಕ ಆತನ ಬೇಡಿಕೆಯಂತೆ 59 ಲಕ್ಷ 54 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಬಳಿಕ ತನಗೆ ಮೋಸವಾಗಿದೆ ಎಂದು ತಿಳಿದ ವೈದ್ಯೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಂಎಸ್ ಗೋಯಲ್ ಯಾವ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ವಿವರಗಳು ತಮ್ಮ ಬಳಿ ಇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ) ವಿವೇಕ್ ರಂಜನ್ ರೈ ಹೇಳಿದ್ದು ಅವುಗಳನ್ನು ಪರಿಶೀಲಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಜನರನ್ನು ಹೆದರಿಸಲು ಮತ್ತು ನಂತರ ಅವರನ್ನು ವಂಚಿಸಲು ಸ್ಕ್ಯಾಮ್‌ಸ್ಟರ್‌ಗಳು ಡಿಜಿಟಲ್ ಬಂಧನ ಎಂಬ ತಂತ್ರವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಅವರು ನಿಜವಾದ ಅಧಿಕಾರಿಗಳು ಎಂದು ಟಾರ್ಗೆಟ್ ಮಾಡಲಾದ ವ್ಯಕ್ತಿಗಳಿಗೆ ಮನವರಿಕೆ ಮಾಡಲು ನಕಲಿ ಐಡಿಗಳನ್ನು ಹಂಚಿಕೊಳ್ಳುತ್ತಾರೆ. ಇದಕ್ಕೂ ಮುನ್ನ ದೆಹಲಿಯ ಐಷಾರಾಮಿ ಚಿತ್ತರಂಜನ್ ಪಾರ್ಕ್ ಪ್ರದೇಶದ 72 ವರ್ಷದ ಮಹಿಳೆಯೊಬ್ಬರಿಗೆ ₹ 83 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಡಾ ಪೂಜಾ ಗೋಯಲ್ ಅವರಂತೆ, ಕೃಷ್ಣ ದಾಸ್‌ಗುಪ್ತಾ ಅವರ ಫೋನ್ ಅನ್ನು ಅಪರಾಧ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಹೇಳಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

"ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅನುಮಾನಾಸ್ಪದ ಕರೆ ಹೇಳಿಕೊಂಡರೆ ಅಥವಾ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಕೇಳಿದರೆ, ನಾಗರಿಕರು ತಕ್ಷಣ ಅದನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸೆಲ್‌ಗೆ ವರದಿ ಮಾಡಬೇಕು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2027 ರ ವೇಳೆಗೆ ಅಸ್ಸಾಂ ನಲ್ಲಿ ಶೇ.40 ರಷ್ಟು ಬಾಂಗ್ಲಾ ಮೂಲದ ಮುಸ್ಲಿಮರು; ಸ್ಥಳೀಯ ಜನಸಂಖ್ಯೆಗೆ ಕಾದಿದೆ ಆಪತ್ತು- ಹಿಮಂತ ಬಿಸ್ವ ಶರ್ಮ

ಬಿಜೆಪಿಗೆ ನೂತನ ಸಾರಥಿ: ಜನವರಿ 20ರೊಳಗೆ ನಿತಿನ್ ನಬಿನ್ 'ರಾಷ್ಟ್ರೀಯ ಅಧ್ಯಕ್ಷ'ರಾಗಿ ಆಯ್ಕೆ ಸಾಧ್ಯತೆ!

Assam: SIR ನಂತರ 10.56 ಲಕ್ಷ ಮತದಾರರ ಹೆಸರು ಡಿಲೀಟ್

ನವದೆಹಲಿ: 'ದಲಿತ ಸಿಎಂ' ಗಾಗಿ ಒತ್ತಾಯ, ಕಾಂಗ್ರೆಸ್ ಪ್ರದಾನ ಕಚೇರಿ ಬಳಿ ಪರಮೇಶ್ವರ್ ಬೆಂಬಲಿಗರ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಹೊಸ ಆಯಾಮ ಪಡೆದ 'ಮರಾಠಿ ಭಾಷಾ' ವಿವಾದ! ಆರು ವರ್ಷದ ಮಗಳನ್ನೇ ಕೊಂದ ತಾಯಿ!

SCROLL FOR NEXT