CUET-UG ಫಲಿತಾಂಶ ಪ್ರಕಟ 
ದೇಶ

CUET-UG ಫಲಿತಾಂಶ ಪ್ರಕಟಿಸಿದ NTA

CUET-UG ಪರೀಕ್ಷಾ ಫಲಿತಾಂಶವನ್ನು (CUET UG Result 2024) National Testing Agency (NTA) ಭಾನುವಾರ ಪ್ರಕಟಿಸಿದೆ.

ನವದೆಹಲಿ: CUET-UG ಪರೀಕ್ಷಾ ಫಲಿತಾಂಶವನ್ನು (CUET UG Result 2024) National Testing Agency (NTA) ಭಾನುವಾರ ಪ್ರಕಟಿಸಿದೆ.

ಪದವಿಪೂರ್ವ ಕೋರ್ಸ್​ಗಳಿಗೆ ಸೇರಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು cuetug.ntaonline.in ವೆಬ್​​ಸೈಟ್​ನಲ್ಲಿ ತಮ್ಮ ಫಲಿತಾಂಶ ಮತ್ತು ಅಂಕಗಳನ್ನು ಪರಿಶೀಲಿಸಬಹುದು.

ಸಿಯುಇಟಿ ಯುಜಿ ಪರೀಕ್ಷೆಯನ್ನು ಮೇ 15, 16, 17, 18, 21, 22, 24 ಮತ್ತು 29 ರಂದು ವಿದೇಶದ 26 ನಗರಗಳು ಸೇರಿದಂತೆ 379 ನಗರಗಳಲ್ಲಿರುವ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಜುಲೈ 19, 2024 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 7 ರಂದು ಬಿಡುಗಡೆ ಮಾಡಲಾಗಿತ್ತು. ಅಂತೆಯೇ ಆಕ್ಷೇಪಣೆ ವಿಂಡೋವನ್ನು ಜುಲೈ 9, 2024 ರಂದು ಮುಚ್ಚಲಾಗಿತ್ತು.

ಫಲಿತಾಂಶ ವೀಕ್ಷಣೆಗೆ ಈ ಕೆಳಕಂಡ ವೆಬ್ ಸೈಟ್ ಗೆ ಭೇಟಿ ನೀಡಿ

ಸಿಯುಇಟಿ ಯುಜಿ ಫಲಿತಾಂಶಗಳನ್ನು exams.nta.ac.in/CUET-UG/ ವೆಬ್ ಸೈಟ್ ನಲ್ಲಿ ಲಾಗಿನ್ ಆಗುವ ಮೂಲಕ ಪರಿಶೀಲಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT