ಸಾಂದರ್ಭಿಕ ಚಿತ್ರ 
ದೇಶ

ಮಧ್ಯ ಪ್ರದೇಶ: ಟ್ರ್ಯಾಕ್ಟರ್-ಟ್ರಾಲಿಗೆ ಟ್ರಕ್ ಡಿಕ್ಕಿ; ಇಬ್ಬರು ಕನ್ವಾರಿಯಾಗಳ ಸಾವು, 14 ಮಂದಿಗೆ ಗಾಯ

ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರಲ್ಲಿ ಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟ್ರಕ್ ಚಾಲಕನನ್ನು ಥಳಿಸಿದ್ದು, ಸ್ವಲ್ಪ ಸಮಯದವರೆಗೆ ರಸ್ತೆ ತಡೆ ನಡೆಸಿದರು.

ಮೊರೆನಾ: ಮಧ್ಯಪ್ರದೇಶದ ಮೊರೆನಾದಲ್ಲಿ ಸೋಮವಾರ ಟ್ರ್ಯಾಕ್ಟರ್-ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು 'ಕನ್ವಾರಿಯಾಗಳು' ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರಲ್ಲಿ ಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟ್ರಕ್ ಚಾಲಕನನ್ನು ಥಳಿಸಿದ್ದು, ಸ್ವಲ್ಪ ಸಮಯದವರೆಗೆ ರಸ್ತೆ ತಡೆ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಕನ್ವಾರಿಯಾಗಳಿಗೆ ನೆರವಾಗಲು ಟ್ರಾಕ್ಟರ್-ಟ್ರಾಲಿ ಮೆರವಣಿಗೆಯಲ್ಲಿ ತೆರಳುತಿತ್ತು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರಿಂದ ರಸ್ತೆ ತಡೆಯನ್ನು ತೆರವುಗೊಳಿಸಲಾಗಿದೆ ಎಂದು ಮೊರೆನಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಮಾಹಿತಿ ನೀಡಿದರು. ಹಿಂದೂ ತಿಂಗಳ ಶ್ರಾವಣದಲ್ಲಿ ಶಿವಲಿಂಗಗಳ 'ಜಲ ಅಭಿಷೇಕ' ಮಾಡಲು ಗಂಗಾ ನದಿಯಿಂದ ನೀರು ತರಲು ಕನ್ವಾರಿಯಾಗಳು ಮೆರವಣಿಗೆಯಲ್ಲಿ ತೆರಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು, ಮೆಟ್ರೋ ಸಂಚಾರ ವ್ಯತ್ಯಯ!

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ತಿರಸ್ಕಾರ: 'ಸುಪ್ರೀಂ' ತೀರ್ಪು ಸ್ವಾಗತಿಸಿದ ಡಿಕೆ ಶಿವಕುಮಾರ್

ಮೂಲಭೂತವಾದಿಗಳ ಒತ್ತಡಕ್ಕೆ ಮಣಿದ ಪಾಕ್ ಸರ್ಕಾರ; ಹಿಂದೂ ಹೆಸರುಗಳ ಮರು ನಾಮಕರಣ ಮುಂದೂಡಿಕೆ!

SCROLL FOR NEXT