ಚೆನ್ನೈ: ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಪರ ತಮಿಳುನಾಡಿನ ಹಳ್ಳಿಯೊಂದು ಪ್ರಚಾರದಲ್ಲಿ ತೊಡಗಿದೆ.
ತುಳಸೇಂದ್ರಪುರಂ ಗ್ರಾಮ ಕಮಲಾ ಹ್ಯಾರೀಸ್ ತಾಯಿ ಶ್ಯಾಮಲಾ ಗೋಪಾಲನ್ ಅವರ ಪೋಷಕರ ಹುಟ್ಟೂರಾಗಿದ್ದು, ಕಮಲಾ ಹ್ಯಾರೀಸ್ ತಮ್ಮ ತಾಯಿ ಡಾ. ಶ್ಯಾಮಲಾ ಗೋಪಾಲನ್ ತಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ.
ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ನವೆಂಬರ್ 5 ರಂದು ಅಮೇರಿಕಾದ 47 ನೇ ಅಧ್ಯಕ್ಷರಾಗಿ ಆಯ್ಕೆಯಾಗಬಹುದೆಂಬ ವಿಶ್ವಾಸ ಈ ಗ್ರಾಮದವರಿಗಿದ್ದು, ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸುತ್ತಿದ್ದಾರೆ.
ಜೋ ಬೈಡನ್ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಕಮಲಾ ಹ್ಯಾರಿಸ್ ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಹಾಲಿ ಅಧ್ಯಕ್ಷ ಜೋ ಬೈಡನ್ ಜು.20 ರಂದು ತಾವು ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಮುಂದಿನ ತಿಂಗಳು ಡೆಮಾಕ್ರೆಟಿಕ್ ಪಕ್ಷ ಕಮಲಾ ಹ್ಯಾರೀಸ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ.