ಜಾಲ್ನಾ: ಮರಾಠರಿಗೆ ಇತರೆ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಮೀಸಲಾತಿ ನೀಡಬಾರದು ಎಂದು, ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಭಾಗವತ್ ಕರಾಡ್ ಅವರು ಸೋಮವಾರ ಹೇಳಿದ್ದಾರೆ.
ಒಬಿಸಿ ಕೋಟಾವನ್ನು ದುರ್ಬಲಗೊಳಿಸದಿರುವ ಭಾರತೀಯ ಜನತಾ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ರಾಜ್ಯಸಭಾ ಸದಸ್ಯ ಕರಾಡ್ ಅವರು ಹೇಳಿದ್ದಾರೆ.
"ಮಹಾರಾಷ್ಟ್ರ ಸರ್ಕಾರವು ಮರಾಠರಿಗೆ ನೀಡಿರುವ ಶೇ. 10 ರಷ್ಟು ಮೀಸಲಾತಿ ಕಾನೂನು ಪರಿಶೀಲನೆಗೆ ಒಳಪಡುತ್ತದೆ. ಒಬಿಸಿಯಾಗಿ, ಒಬಿಸಿ ಕೋಟಾದ ಪ್ರಯೋಜನಗಳನ್ನು ಮರಾಠ ಸಮುದಾಯಕ್ಕೆ ವಿಸ್ತರಿಸುವುದನ್ನು ನಾನು ವಿರೋಧಿಸುತ್ತೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರು ಒಬಿಸಿ ವಿಭಾಗದ ಅಡಿಯಲ್ಲಿ ಮರಾಠರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನು ಒಬಿಸಿ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.