ಯಾತ್ರಾರ್ಥಿಗಳು 
ದೇಶ

ಅಮರನಾಥ ಯಾತ್ರೆ: ಜಮ್ಮುನಿಂದ ತೆರಳಿದ 1,800ಕ್ಕೂ ಹೆಚ್ಚು ಯಾತ್ರಾರ್ಥಿಗಳು!

ಈಗಾಗಲೇ 4.55 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇಗುಲದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ಜಮ್ಮು: ಈ ಬಾರಿ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಅಮರನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಸೋಮವಾರ ಜಮ್ಮು ಬೇಸ್ ಕ್ಯಾಂಪ್ ನಿಂದ 1,800 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ತೆರಳಿದ್ದಾರೆ.

1,832 ಯಾತ್ರಾರ್ಥಿಗಳ 32 ನೇ ಬ್ಯಾಚ್ ಭಗವತಿ ನಗರ ಮೂಲ ಶಿಬಿರದಿಂದ ಮುಂಜಾನೆ 3.22 ಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಂಗಾವಲಾಗಿ 62 ವಾಹನಗಳ ಪಡೆಯಲ್ಲಿ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಪಿನಲ್ಲಿ 1,358 ಪುರುಷರು, 363 ಮಹಿಳೆಯರು, ಇಬ್ಬರು ಮಕ್ಕಳು ಮತ್ತು 109 ಸಾಧುಗಳು ಮತ್ತು ಸಾಧ್ವಿಗಳು ಸೇರಿದ್ದಾರೆ. ಈ ಪೈಕಿ 1,263 ಯಾತ್ರಾರ್ಥಿಗಳು ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ ಮಾರ್ಗದ ಪಹಲ್ಗಾಮ್ ತಲುಪಿದರೆ, 569 ಮಂದಿ ಗಂದರ್ಬಾಲ್ ಜಿಲ್ಲೆಯ ಚಿಕ್ಕದಾದ ಆದರೆ ಕಡಿದಾದ 14-ಕಿಮೀ ಬಾಲ್ಟಾಲ್ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ 4.55 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇಗುಲದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಹಿಮಲಿಂಗದ ದರ್ಶನ ಪಡೆದಿದ್ದರು.

ಜೂನ್ 28 ರಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಮ್ಮುವಿನಿಂದ ಯಾತ್ರಿಕರ ಮೊದಲ ಬ್ಯಾಚ್ ಗೆ ಚಾಲನೆ ನೀಡಿದ್ದರು. ಅಲ್ಲಿಂದ ಈವರೆಗೂ ಒಟ್ಟು 1,38,816 ಯಾತ್ರಿಕರು ಇಲ್ಲಿನ ಮೂಲ ಶಿಬಿರದಿಂದ ವಾರ್ಷಿಕ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾರೆ. ಜೂನ್ 29 ರಂದು ಕಾಶ್ಮೀರದ ಬಲ್ಟಾಲ್ ಮತ್ತು ಪಹಲ್ಗಾಮ್ ಮೂಲ ಶಿಬಿರಗಳಿಂದ ಔಪಚಾರಿಕವಾಗಿ ಪ್ರಾರಂಭವಾದ 52 ದಿನಗಳ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡ ಸಿ.ಜೆ ರಾಯ್; ಪೊಲೀಸ್ ಆಯುಕ್ತರು ಹೇಳಿದ್ದೇನು?

ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಎನ್‌ಸಿಪಿ ನಿರ್ಧಾರವನ್ನು ಬೆಂಬಲಿಸುತ್ತೇವೆ: ಫಡ್ನವೀಸ್

12 ರೋಲ್ಸ್ ರಾಯ್ಸ್‌ ಸೇರಿ ಹಲವು ಐಷಾರಾಮಿ ಕಾರು, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಸುನೇತ್ರ ಪವಾರ್ ನಾಳೆ ಪ್ರಮಾಣ ವಚನ ಸ್ವೀಕಾರ: ಭುಜಬಲ್

BIFF ನಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನಕ್ಕೆ ಪ್ರಕಾಶ್ ರಾಜ್ ಒತ್ತಾಯ: ಬಿಜೆಪಿ ವಾಗ್ದಾಳಿ!

SCROLL FOR NEXT