ಏರ್ಟೆಲ್ ಮತ್ತು ಕೇರಳ ಭೂಕುಸಿತ 
ದೇಶ

Wayanad landslide: Airtel ಉಚಿತ ಸೇವೆ, ಬಿಲ್ ಗಡುವು ವಿಸ್ತರಣೆ, ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರ ಸ್ಥಾಪನೆ!

ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಪ್ರತಿ ದಿನ ಉಚಿತ 1 ಜಿಬಿ ಡೇಟಾ ನೀಡಲು ಮುಂದಾಗಿದ್ದು, ಅವಧಿ ಮುಗಿದಿರುವ ಪ್ರಿಪೇಯ್ಡ್ ಗ್ರಾಹಕರಿಗೆ ಅನಿಯಮಿತ ಕರೆಯನ್ನು ಒದಗಿಸುವುದಾಗಿ ಘೋಷಿಸಿದೆ.

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಟೆಲಿಕಾಂ ದೈತ್ಯ ಏರ್ಟೆಲ್ ಉಚಿತ ಸೇವೆ ಘೋಷಣೆ ಮಾಡಿದ್ದು, ಮಾತ್ರವಲ್ಲದೇ ಬಿಲ್ ಗಡುವನ್ನು ಕೂಡ ವಿಸ್ತರಣೆ ಮಾಡಿದೆ.

ಹೌದು.. ಮಂಗಳವಾರದ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ 190 ಜನರನ್ನು ಬಲಿ ತೆಗೆದುಕೊಂಡಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 220ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಇತ್ತ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಪ್ರತಿ ದಿನ ಉಚಿತ 1 ಜಿಬಿ ಡೇಟಾ ನೀಡಲು ಮುಂದಾಗಿದ್ದು, ಅವಧಿ ಮುಗಿದಿರುವ ಪ್ರಿಪೇಯ್ಡ್ ಗ್ರಾಹಕರಿಗೆ ಅನಿಯಮಿತ ಕರೆಯನ್ನು ಒದಗಿಸುವುದಾಗಿ ಘೋಷಿಸಿದೆ.

ಏರ್ಟೆಲ್ ಭೂ ಕುಸಿತ ಪೀಡಿತ ಸತ್ರಸ್ಥರಿಗೆ ಸಹಾಯ ಮಾಡುವ ಉದ್ದೇಶದಿಂದ ಪರಿಹಾರ ಕ್ರಮಗಳನ್ನು ಘೋಷಿಸಿದ್ದು, ಪ್ರಿಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಮತ್ತು ಕರೆಗಳ ಜೊತೆಗೆ, ಕಂಪನಿಯು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ಗಡುವನ್ನು ವಿಸ್ತರಿಸಿದೆ. ಅಂತೆಯೇ ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ಬೆಂಬಲಿಸಲು ಕೇರಳದಲ್ಲಿನ ತನ್ನ 52 ಮಳಿಗೆಗಳನ್ನು ಪರಿಹಾರ ಸಂಗ್ರಹಣಾ ಕೇಂದ್ರಗಳಾಗಿ ಪರಿವರ್ತಿಸುವುದಾಗಿ ಹೇಳಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಏರ್ಟೆಲ್, 'ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತ ಜನರೊಂದಿಗೆ ಏರ್ಟೆಲ್ ಬೆಂಬಲವಾಗಿ ನಿಲ್ಲಲಿದೆ. ಸಂಕಷ್ಟದಲ್ಲಿರುವ ಸಂತ್ರಸ್ಥರನ್ನು ಬೆಂಬಲಿಸುವ ಸಣ್ಣ ಸೂಚಕವಾಗಿ, ನಾವು ಈ ಕೆಳಗಿನ ಕ್ರಮಗಳನ್ನು ಘೋಷಿಸುತ್ತಿದ್ದೇವೆ" ಎಂದು ಕಂಪನಿ ಹೇಳಿದೆ.

ಏರ್‌ಟೆಲ್‌ನಿಂದ ಪರಿಹಾರ ಕ್ರಮಗಳು

ಪ್ರಿಪೇಯ್ಡ್ ಗ್ರಾಹಕರಿಗೆ

ವ್ಯಾಲಿಡಿಟಿ ಮುಗಿದು ರೀಚಾರ್ಜ್ ಮಾಡಲು ಸಾಧ್ಯವಾಗದ ಗ್ರಾಹಕರಿಗೆ ದಿನಕ್ಕೆ 1 GB ನಂತೆ ಮೂರು ದಿನಗಳ ಕಾಲ ಉಚಿತ ಮೊಬೈಲ್ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೇವೆ ನೀಡಲಾಗುತ್ತದೆ.

ಪೋಸ್ಟ್ಪೇಯ್ಡ್ ಗ್ರಾಹಕರಿಗೆ

ಮೊಬೈಲ್ ಸೇವೆಗಳಿಗೆ ತಡೆರಹಿತ ಸೇವೆ ಖಚಿತಪಡಿಸಿಕೊಳ್ಳಲು ಎಲ್ಲಾ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕಗಳನ್ನು 30 ದಿನಗಳವರೆಗೆ ವಿಸ್ತರಿಸಲಾಗಿದೆ.

ಪರಿಹಾರ ಸಾಮಗ್ರಿ ಕೇಂದ್ರ ಸ್ಥಾಪನೆ

ಕೇರಳದಲ್ಲಿರುವ ಏರ್‌ಟೆಲ್‌ನ 52 ಚಿಲ್ಲರೆ ಅಂಗಡಿಗಳನ್ನು ಪರಿಹಾರ ಸಂಗ್ರಹಣಾ ಕೇಂದ್ರಗಳಾಗಿ ಪರಿವರ್ತಿಸಲಾಗಿದ್ದು, ಈ ಮಳಿಗೆಗಳು ಸಾರ್ವಜನಿಕರಿಂದ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸುತ್ತವೆ, ವಯನಾಡಿನ ಪೀಡಿತ ಸಮುದಾಯಗಳಿಗೆ ವಿತರಿಸಲು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗುವುದು.

ಏರ್ಟೆಲ್‌ನ ಈ ಉಪಕ್ರಮವು ಭೂಕುಸಿತದಿಂದ ಪ್ರಭಾವಿತರಾದವರಿಗೆ ಅಗತ್ಯ ಸಂವಹನ ಸೇವೆಗಳನ್ನು ಒದಗಿಸಲು ಮತ್ತು ಪರಿಹಾರ ಸಾಮಗ್ರಿಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT