ನಿತಿನ್ ಗಡ್ಕರಿ- ನಿರ್ಮಲಾ ಸೀತಾರಾಮನ್ ಸಾಂದರ್ಭಿಕ ಚಿತ್ರ 
ದೇಶ

ಜೀವ, ವೈದ್ಯಕೀಯ ವಿಮೆ ಮೇಲಿನ GST ತೆಗೆದು ಹಾಕಿ: ನಿರ್ಮಲಾ ಸೀತಾರಾಮನ್ ಗೆ ನಿತಿನ್ ಗಡ್ಕರಿ ಪತ್ರ!

'ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಗಡ್ಕರಿ, ವಿಮೆ ಉದ್ಯಮ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪುರ ವಿಭಾಗೀಯದ ಜೀವ ವಿಮಾ ನಿಗಮ ನೌಕರರ ಒಕ್ಕೂಟ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ'

ನವದೆಹಲಿ: ಜೀವ ಮತ್ತು ವೈದ್ಯಕೀಯ ವಿಮೆ ಪ್ರೀಮಿಯಂ ಮೇಲಿನ ಶೇ. 18 ರಷ್ಟು ಜಿಎಸ್ ಟಿಯನ್ನು ತೆಗೆದು ಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಗಡ್ಕರಿ, ವಿಮೆ ಉದ್ಯಮ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪುರ ವಿಭಾಗೀಯದ ಜೀವ ವಿಮಾ ನಿಗಮ ನೌಕರರ ಒಕ್ಕೂಟ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನಿತಿನ್ ಗಡ್ಕರಿ ಪತ್ರ

ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ಯೋಜನೆಗಳ ಪ್ರೀಮಿಯಂ ಮೇಲೆ ಜಿಎಸ್ ಟಿ ಹೇರುವುದು ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸಿದಂತೆ ಆಗುತ್ತದೆ. ತನ್ನ ಕುಟುಂಬಕ್ಕೆ ಭದ್ರತೆ ಒದಗಿಸುವ ಸಲುವಾಗಿ ಜೀವನದ ಅನಿಶ್ಚಿತತೆಯ ಅಪಾಯದ ವಿರುದ್ಧ ವಿಮೆ ಮಾಡಿಸುವ ಪ್ರೀಮಿಯಂಗೆ ತೆರಿಗೆ ವಿಧಿಸಭಾರದು ಎಂದು ಒಕ್ಕೂಟ ಭಾವಿಸುತ್ತದೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ಹೇಳಿದ್ದಾರೆ.

ಜೀವ ವಿಮೆ ಮೂಲಕ ಉಳಿತಾಯದ ವಿಭಿನ್ನ ಚಿಕಿತ್ಸೆ, ಆರೋಗ್ಯ ವಿಮಾ ಕಂತುಗಳಿಗೆ ಆದಾಯ ತೆರಿಗೆ ವಿನಾಯಿತಿ ಮರು ಪರಿಚಯ ಮತ್ತು ಸಾರ್ವಜನಿಕ, ಪ್ರಾದೇಶಿಕ ಸಾಮಾನ್ಯ ವಿಮಾ ಕಂಪನಿಗಳ ಬಲವರ್ಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಒಕ್ಕೂಟದ ಪತ್ರದಲ್ಲಿ ಪ್ರಸ್ತಾಪಿಸಿದೆ. ಇದೇ ರೀತಿ ವೈದ್ಯಕೀಯ ವಿಮಾ ಕಂತುಗಳ ಮೇಲಿನ ಶೇ. 18ರಷ್ಟು ಜಿಎಸ್‌ಟಿಯು ಸಾಮಾಜಿಕವಾಗಿ ಅಗತ್ಯವಾಗಿರುವ ಈ ವಿಭಾಗದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇವೆಲ್ಲಾ ಕಾರಣದಿಂದ ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವ ಸಲಹೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕೆಂದು ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್