ಸೋನಿಯಾ ಗಾಂಧಿ 
ದೇಶ

ಲೋಕಸಭೆ ಚುನಾವಣಾ ಫಲಿತಾಂಶ; ಪ್ರಧಾನಿ ಮೋದಿಯ ರಾಜಕೀಯ, ನೈತಿಕ ಸೋಲು- ಸೋನಿಯಾ ಗಾಂಧಿ

ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಮತ್ತು ನೈತಿಕ ಸೋಲಾಗಿದೆ, ಅವರು ನಾಯಕತ್ವ ವಹಿಸಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಮತ್ತು ನೈತಿಕ ಸೋಲಾಗಿದೆ, ಅವರು ನಾಯಕತ್ವ ವಹಿಸಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ನೂತನ ಚುನಾಯಿತ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ಹೊಣೆಗಾರಿಕೆ ವೈಫಲ್ಯದ ಹೊರತಾಗಿ, ಪ್ರಧಾನಿಯವರು ಭಾನುವಾರ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವ ಉದ್ದೇಶ ಹೊಂದಿದ್ದಾರೆ

"ಅವರು ತಮ್ಮ ಆಡಳಿತದ ಮೂಲತತ್ವ ಮತ್ತು ಶೈಲಿಯನ್ನು ಬದಲಾಯಿಸುತ್ತಾರೆ ಅಥವಾ ಜನರ ಇಚ್ಛೆಯನ್ನು ಪರಿಗಣಿಸುತ್ತಾರೆ ಎಂಬ ನಿರೀಕ್ಷೆ ಇಲ್ಲ ಎಂದರು.

ಪ್ರಧಾನಮಂತ್ರಿ ತಮ್ಮ ಪಕ್ಷ ಮತ್ತು ಅದರ ಮಿತ್ರಪಕ್ಷಗಳೆರಡನ್ನೂ ಹೊರತುಪಡಿಸಿ ತಮ್ಮ ಹೆಸರಿನಲ್ಲಿ ಮಾತ್ರ ಜನಾದೇಶವನ್ನು ಕೋರಿದರು. ಆದರೆ, ರಾಜಕೀಯ ಮತ್ತು ನೈತಿಕ ಸೋಲನ್ನು ಅನುಭವಿಸಿದ್ದಾರೆ. ವಾಸ್ತವದಲ್ಲಿ ಅವರು ಬಯಸಿದ ಜನಾದೇಶವನ್ನು ಕಳೆದುಕೊಂಡಿದ್ದಾರೆ. ಆ ಮೂಲಕ ನಾಯಕತ್ವದ ಹಕ್ಕನ್ನು ಕಳೆದುಕೊಂಡಿದ್ದಾರೆ. ಆದರೂ, ಹೊಣೆಗಾರಿಕೆ ವೈಫಲ್ಯದ ಹೊರತಾಗಿಯೂ ಅವರು ನಾಳೆ ಮತ್ತೆ ಪ್ರಮಾಣವಚನ ಸ್ವೀಕರಿಸಲು ಉದ್ದೇಶಿಸಿದ್ದಾರೆ. ಅವರ ಆಡಳಿತದಲ್ಲಿ ಬದಲಾವಣೆ ಏನು ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪ್ರಧಾನಿ ಮತ್ತು ಅವರ ಹೊಸ ಎನ್ ಡಿಎ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ನಾವು ವಿಶೇಷ ಹಕ್ಕು ಹೊಂದಿದ್ದೇವೆ. ಇನ್ನು ಮುಂದೆ ಬಿಲ್ ಪಾಸ್ ಮಾಡುವಲ್ಲಿ ಸೂಕ್ತ ಚರ್ಚೆ ಇಲ್ಲದೆ, ಸಂಸದರಿಗೆ ಗೌರವ ಕೊಡದೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದಕ್ಕೆ ಅವಕಾಶವಿರಲ್ಲ.ಸಂಸದೀಯ ಸಮಿತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.ಕಳೆದ 10 ವರ್ಷಗಳಲ್ಲಿ ಇದ್ದ ಉಸಿರುಗಟ್ಟುವಿಕೆ ವಾತಾವರಣ ಇನ್ನು ಮುಂದೆ ಸಂಸತ್ತಿನಲ್ಲಿ ಇರುವುದಿಲ್ಲ ಎಂದು ಹೇಳಿದರು.

ಸರ್ಕಾರದಿಂದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗುವ ಯಾವುದೇ ಪ್ರಯತ್ನಗಳನ್ನು ತಡೆಯಲು ಎಚ್ಚರದಿಂದ ಇರಬೇಕು. ಇಂತಹ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಬೇಕಿದೆ ಇಂಡಿಯಾ ಬಣ ಮಿತ್ರಪಕ್ಷಗಳ ಬಲದಿಂದ ಕಾಂಗ್ರೆಸ್ ಕೂಡ ಬಲಗೊಳ್ಳುತ್ತಿದೆ. ಸಂಸತ್ತಿನಲ್ಲಿ ನಮ್ಮ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕಾಂಗ್ರೆಸ್ ಮಾತ್ರವಲ್ಲ, ಇಂಡಿಯಾ ಬಣದ ಕೆಲ ಪಕ್ಷಗಳು ಪ್ರಭಾವಶಾಲಿಯಾಗಿ ಕಂಬ್ಯಾಕ್ ಮಾಡಿವೆ.

ಭಾರತ್ ಜೋಡೋ ಯಾತ್ರೆಗಳು ಐತಿಹಾಸಿಕ ಚಳುವಳಿಯಾಗಿದ್ದು, ವೈಯಕ್ತಿಕ ಮತ್ತು ರಾಜಕೀಯ ದಾಳಿ ಮೂಲಕ ಹೋರಾಡಿದ ರಾಹುಲ್ ಅವರ ದೃಢತೆ ಮತ್ತು ನಿರ್ಣಯಕ್ಕೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಸಂವಿಧಾನ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಬಹಳ ತೀಕ್ಷ್ಣವಾಗಿ ತಿಳಿಸಿದ ಸೋನಿಯಾ, ನಿರೀಕ್ಷೆಗಿಂತ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ರಾಜ್ಯಗಳಲ್ಲಿ ತನ್ನ ಸ್ಥಾನವನ್ನು ಸುಧಾರಿಸಲು ಏನು ಮಾಡಬೇಕೆಂಬುದನ್ನು ಸಂಸದರಿಗೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್