ಎನ್ ಟಿಎ ಸುದ್ದಿಗೋಷ್ಠಿ 
ದೇಶ

1,600 NEET ಅಭ್ಯರ್ಥಿಗಳ ಫಲಿತಾಂಶ ಮರುಪರಿಶೀಲಿಸಲು ಸಮಿತಿ ರಚನೆ; ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ: NTA ಸ್ಪಷ್ಟನೆ

NEET-UG ಫಲಿತಾಂಶಗಳಲ್ಲಿನ ಅಕ್ರಮಗಳ ಕುರಿತಾದ ವಿವಾದವು ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಶನಿವಾರ ಆರು ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕಗಳನ್ನು ಪಡೆದವರ 1,600 ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದೆ.

ನವದೆಹಲಿ: NEET-UG ಫಲಿತಾಂಶಗಳಲ್ಲಿನ ಅಕ್ರಮಗಳ ಕುರಿತಾದ ವಿವಾದವು ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಶನಿವಾರ ಆರು ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕಗಳನ್ನು ಪಡೆದವರ 1,600 ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದೆ.

ನೀಟ್ ವಿವಾದದ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್, ''ಮರುಪರೀಕ್ಷೆ ನಡೆಸಬೇಕೆಂದು ದೂರು ನಿವಾರಣ ಸಮಿತಿಗೆ ಅನಿಸಿದರೆ, ಅದನ್ನು ನಡೆಸಲಾಗುವುದು.

ಹೊಸದಾಗಿ ರಚಿಸಲಾದ ಸಮಿತಿಯ ಶಿಫಾರಸುಗಳಂತೆಯೇ ಯಾವುದಾದರೂ ನಿರ್ಧಾರ ಕೈಗೊಳ್ಳಲಾಗುವುದು, ಪ್ರಕ್ರಿಯೆ ನ್ಯಾಯಯುತ ಮತ್ತು ಪಾರದರ್ಶಕವಾಗಿರಲಿದೆ. ಈ ವರ್ಷ ಹಲವಾರು ಅಗ್ರ ಶ್ರೇಯಾಂಕಿತ ಅಭ್ಯರ್ಥಿಗಳಿರುವುದು ಅಂಕಗಳ ಹೆಚ್ಚಳದಿಂದ ಸಂಭವಿಸಿದೆ ಎಂಬ ಆರೋಪಗಳಿವೆ. ಹರ್ಯಾಣದ ಒಂದೇ ಕೇಂದ್ರದ ಆರು ಮಂದಿ ಅಗ್ರ ರ್ಯಾಂಕ್‌ ಪಡೆದಿರುವುದೂ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ಆದರೆ ಎನ್‌ಟಿಎ ನಿರ್ದೇಶಕರು ಈ ಅವ್ಯವಹಾರಗಳನ್ನು ನಿರಾಕರಿಸಿದ್ದಾರೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳನ್ನೂ ಎನ್‌ಟಿಎ ನಿರಾಕರಿಸಿದ್ದು, ಗ್ರೇಸ್‌ ಅಂಕಗಳನ್ನು ನೀಡಿರುವುದು ಒಟ್ಟಾರೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರವೇಶಾತಿ ಪ್ರಕ್ರಿಯೆ ಮೇಲೆ ಪರಿಣಾಮ ಇಲ್ಲ

ಇದೇ ವೇಳೆ ಹಾಲಿ ವಿವಾದ ಅಥವಾ ಪರಿಶೀಲನೆಯಲ್ಲಿರುವ 1,600 ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮರುಬಿಡುಗಡೆಗೊಳಿಸುವುದು ಪ್ರವೇಶಾತಿ ಪ್ರಕ್ರಿಯೆಯನ್ನು ಬಾಧಿಸದು. ಯುಪಿಎಸ್‌ಸಿ ಮಾಜಿ ಅಧ್ಯಕ್ಷರ ನೇತೃತ್ವದ ಸಮಿತಿಯು ಒಂದು ವಾರದಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಎನ್‌ಟಿಎ ನಿರ್ದೇಶಕರು ಹೇಳಿದ್ದಾರೆ.

'ಎನ್‌ಟಿಎ ಮುಚ್ಚಿಡಲು ಏನೂ ಇಲ್ಲ ಮತ್ತು ಅವರು ಎಲ್ಲವನ್ನೂ ಪಾರದರ್ಶಕವಾಗಿ ವಿಶ್ಲೇಷಿಸಿದ್ದಾರೆ ಮತ್ತು ಫಲಿತಾಂಶಗಳನ್ನು ಘೋಷಿಸಿದ್ದಾರೆ. ದೇಶದಾದ್ಯಂತ ಈ ಪರೀಕ್ಷೆಯ ಸಮಗ್ರತೆಗೆ ಧಕ್ಕೆಯಾಗಲಿಲ್ಲ. ನಾವು ನಮ್ಮ ವ್ಯವಸ್ಥೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಯಾವುದೇ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. 4,750 ಕೇಂದ್ರಗಳ ಪೈಕಿ ಆರು ಕೇಂದ್ರಗಳಿಗೆ ಸಮಸ್ಯೆ ಸೀಮಿತವಾಗಿದೆ. 24 ಲಕ್ಷ ಅಭ್ಯರ್ಥಿಗಳಲ್ಲಿ 1,600 ಅಭ್ಯರ್ಥಿಗಳ ವಿಚಾರ ಮಾತ್ರ ಸಮಸ್ಯೆಗೆ ಕಾರಣವಾಗಿದೆ.

ಸಮಿತಿಯು ಈ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮಾತ್ರ ಮರು ಪರಿಶೀಲಿಸುತ್ತದೆ. ಗ್ರೇಸ್ ಅಂಕಗಳನ್ನು ನೀಡುವಿಕೆಯು ಪರೀಕ್ಷೆಯ ಅರ್ಹತಾ ಮಾನದಂಡಗಳ ಮೇಲೆ ಪರಿಣಾಮ ಬೀರಿಲ್ಲ ಮತ್ತು ಅಭ್ಯರ್ಥಿಗಳ ಫಲಿತಾಂಶಗಳ ಪರಿಶೀಲನೆಯು ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸಂಪೂರ್ಣ ಪರೀಕ್ಷೆಯ ನಂತರ, ಸಮಿತಿಯು ಪ್ರಭಾವಿತರಿಗೆ ಮರುಪರೀಕ್ಷೆಯನ್ನು ನೀಡಬೇಕೆ ಅಥವಾ ಗ್ರೇಸ್ ಮಾರ್ಕಿಂಗ್‌ಗಾಗಿ ವಿಸ್ತೃತ ಸೂತ್ರವನ್ನು ಅಭಿವೃದ್ಧಿಪಡಿಸಬೇಕೆ ಎಂದು ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದರು.

“ಇದು ವಿಶ್ವ ಅಥವಾ ದೇಶದಲ್ಲಿಯೇ ಅತಿ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಮತ್ತು 4,750 ಕೇಂದ್ರಗಳೊಂದಿಗೆ ಒಂದೇ ಪಾಳಿಯಲ್ಲಿ ನಡೆಯುತ್ತದೆ. ಈ ಪರೀಕ್ಷೆಯ ಪ್ರಮಾಣವು ದೊಡ್ಡದಾಗಿದೆ. ಸುಮಾರು ಆರು ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ತಪ್ಪಾಗಿ ವಿತರಿಸಿದ್ದರಿಂದ ಸುಮಾರು 16,000 ಅಭ್ಯರ್ಥಿಗಳಿಗೆ ತೊಂದರೆಯಾಗಿದೆ...

ಅಭ್ಯರ್ಥಿಗಳು ತಮಗೆ ಸಮಯ ಕಡಿಮೆಯಾಗಿದೆ ಎಂದು ಆರೋಪಿಸಿದರು. ಕುಂದುಕೊರತೆ ನಿವಾರಣೆಗೆ ತಜ್ಞರ ಸಮಿತಿ ರಚಿಸಿದ್ದೇವೆ ಎಂದು ಹೈಕೋರ್ಟ್‌ನಲ್ಲಿ ಉತ್ತರ ನೀಡಿದ್ದೇವೆ. ಈ (ಹೊಸ) ಸಮಿತಿಯು ಕೇಂದ್ರದ ವರದಿಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಒಳಗೊಂಡಂತೆ ಈ ಹಿಂದಿನ ವಿವರಗಳನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT