ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ 12.7 ಲಕ್ಷ ರೂ. ವಂಚನೆ, ವ್ಯಕ್ತಿಯ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ ಹಲವಾರು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಂಚಕನು ಆನ್‌ಲೈನ್ ಸೇವೆ ಒದಗಿಸುವುದಾಗಿ ಲಕ್ಷಗಟ್ಟಲೆ ವಂಚಿಸಿದ್ದಾನೆ. ಈ ಕುರಿತು ಐಪಿಸಿ ಕಲಂ 419/420 ಅಡಿಯಲ್ಲಿ ಶಾಹದಾರ ಪೊಲೀಸ್ ಠಾಣೆ ಸೈಬರ್ ನಲ್ಲಿ ಪ್ರಕರಣ ದಾಖಲಾಗಿದೆ.

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ ಹಲವಾರು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಂಚಕನು ಆನ್‌ಲೈನ್ ಸೇವೆ ಒದಗಿಸುವುದಾಗಿ ಲಕ್ಷಗಟ್ಟಲೆ ವಂಚಿಸಿದ್ದಾನೆ. ಈ ಕುರಿತು ಐಪಿಸಿ ಕಲಂ 419/420 ಅಡಿಯಲ್ಲಿ ಶಾಹದಾರ ಪೊಲೀಸ್ ಠಾಣೆ ಸೈಬರ್ ನಲ್ಲಿ ಪ್ರಕರಣ ದಾಖಲಾಗಿದೆ.

ವಯಸ್ಕರ ಚಾಟಿಂಗ್ ಮತ್ತು ಆನ್‌ಲೈನ್ ಸೇವೆಗಳ ಕುರಿತು ಟೆಲಿಗ್ರಾಮ್‌ನಲ್ಲಿ ಶ್ರುತಿ ಶರ್ಮಾ ಹೆಸರಿನಲ್ಲಿ ಸಂದೇಶ ಬಂದಿತ್ತು. ಸೇವೆಗಾಗಿ ಆರಂಭದಲ್ಲಿ ಸ್ವಲ್ಪ ಹಣವನ್ನು ವರ್ಗಾಯಿಸಲಾಗಿತ್ತು. ಆದರೆ, ವಂಚಕ ಭಾವನಾತ್ಮಕವಾಗಿ ಆಮಿಷವೊಡ್ಡಿದ್ದರು. ಹೀಗಾಗಿ ಆರೋಪಿ ಬ್ಯಾಂಕ್ ಖಾತೆಗೆ ಒಟ್ಟು 12.7 ಲಕ್ಷ ರೂ. ವರ್ಗಾಯಿಸಿರುವುದಾಗಿ ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಸ್ವರೂಪವನ್ನು ಪರಿಗಣಿಸಿ ತಂಡವನ್ನು ರಚಿಸಲಾಗಿತ್ತು. ತಂಡವು ಘಟನೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಗ್ರಹಿಸಿದ್ದು, ಬ್ಯಾಂಕ್ ವಹಿವಾಟುಗಳನ್ನು ವಿಶ್ಲೇಷಿಸಿದೆ ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಆರೋಪಿ ಸೈನಿಯನ್ನು ಜೂನ್ 7 ರಂದು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಫಾರ್ಮಾ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 2 ವರ್ಷಗಳ ಹಿಂದೆ ಕೆಲಸವನ್ನು ತೊರೆದಿರುವುದಾಗಿ ಬಹಿರಂಗಪಡಿಸಿದರು. ನಿರುದ್ಯೋಗಿಯಾಗಿದ್ದ ಆತ ತನ್ನ ಹೆಂಡತಿಯ ಸಂಬಳದಲ್ಲಿ ದೈನಂದಿನ ಜೀವನೋಪಾಯವನ್ನು ಕಳೆಯುತ್ತಾ ಮನೆಯಲ್ಲಿಯೇ ಇದ್ದ ಎಂಬುದು ತಿಳಿದುಬಂದಿದೆ.

ಸೈನಿ ವಯಸ್ಕ ಚಾಟಿಂಗ್ ಮತ್ತು ಜೂಜಿನ ವ್ಯಸನಿಯಾಗಿದ್ದು,ಟೆಲಿಗ್ರಾಮ್‌ನಲ್ಲಿ ವಯಸ್ಕರ ಗುಂಪುಗಳಿಗೆ ಸೇರಿಕೊಂಡರು. ದೂರುದಾರರು ಕೂಡಾ ಟೆಲಿಗ್ರಾಮ್‌ನಲ್ಲಿ ಆ ಗುಂಪಿನ ಸದಸ್ಯರಾಗಿದ್ದರು. ಮಾರ್ಚ್ 2024 ರಲ್ಲಿ ಆರೋಪಿ ದೀಪಕ್ ಸೈನಿ ಶೃತಿ ಶರ್ಮಾ ಹೆಸರಿನಲ್ಲಿ ಟೆಲಿಗ್ರಾಮ್ ಮೂಲಕ ದೂರುದಾರರಿಗೆ ಸಂದೇಶ ಕಳುಹಿಸಿದ್ದರು. ಶೃತಿ ಶರ್ಮಾ ಎಂಬ ಹೆಸರಿನ ಆರೋಪಿಯೊಂದಿಗೆ ದೂರುದಾರರು ಚಾಟ್ ಮಾಡಲು ಪ್ರಾರಂಭಿಸಿದ್ದರು. ಆರೋಪಿಯ ಎರಡು ಖಾತೆಗಳಿಗೆ ಎರಡೂವರೆ ತಿಂಗಳ ಅವಧಿಯಲ್ಲಿ 12.7 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆವೆಸಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT