ಹೆರಿಗೆ ರಜೆ (ಸಾಂಕೇತಿಕ ಚಿತ್ರ) 
ದೇಶ

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳಾ ಸಿಬ್ಬಂದಿಗೂ 6 ತಿಂಗಳ ಹೆರಿಗೆ ರಜೆ

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೂ ಯಾವುದೇ ನಿಯಮವಿರಲಿಲ್ಲ.

ನವದೆಹಲಿ: ಕೇಂದ್ರ ಸರ್ಕಾರ 50 ವರ್ಷಗಳ ಹಿಂದಿನ ನಿಯಮಕ್ಕೆ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ನಂತರ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಕೇಂದ್ರ ನಾಗರಿಕ ಸೇವೆಗಳ(ರಜೆ) ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ, "ಕಮಿಷನಿಂಗ್ ತಾಯಿ" (ಸರೊಗಸಿ ಮೂಲಕ ಜನಿಸಿದ ಮಗುವಿನ ಉದ್ದೇಶಿತ ತಾಯಿ) "ಕಮಿಷನಿಂಗ್ ಫಾದರ್" ಗೆ 15 ದಿನಗಳ ಪಿತೃತ್ವ ರಜೆ ಜೊತೆಗೆ ಮಕ್ಕಳ ಆರೈಕೆ ರಜೆಯನ್ನು ಸಹ ಇದು ಅನುಮತಿಸಿದೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೂ ಯಾವುದೇ ನಿಯಮವಿರಲಿಲ್ಲ.

ಬಾಡಿಗೆ ತಾಯ್ತನದ ಮೂಲಕ ಪಡೆಯುವ ಪುರುಷ ಸರ್ಕಾರಿ ನೌಕರನಾಗಿರುವ ತಂದೆಗೆ ಮಗುವಿನ ಹೆರಿಗೆಯ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ 15 ದಿನಗಳ ಪಿತೃತ್ವ ರಜೆ ನೀಡಬಹುದು" ಎಂದು ಹೊಸ ನಿಯಮ ಹೇಳುತ್ತಿದೆ.

ಬಾಡಿಗೆ ತಾಯ್ತನ ಎಂದರೆ ಮಕ್ಕಳಾಗದ ದಂಪತಿಗಾಗಿ ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಕ್ಕಳಾಗದವರಿಗೆ ಮಗುವನ್ನು ಹೆತ್ತುಕೊಡುವ ಪ್ರಕ್ರಿಯೆಯನ್ನೇ ಬಾಡಿಗೆ ತಾಯ್ತನ ಎಂದು ಕರೆಯುತ್ತಾರೆ.

ಬಾಡಿಗೆ ತಾಯಿಯ ಅಂಡಾಣು, ಮಗುವನ್ನು ಪಡೆಯಲು ಬಯಸಿದ ವ್ಯಕ್ತಿ ಅಥವಾ ವೀರ್ಯ ದಾನಿಯಿಂದ ಪಡೆದ ವೀರ್ಯವನ್ನು ಬಳಸಿ ಮಗುವನ್ನು ಪಡೆಯುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ