ಕೋಲ್ಕತಾ: ಬೈಕ್ ನಲ್ಲಿ ತೆರಳುತ್ತಿದ್ದ ವಿಕೃತ ಕಾಮಿಯೋರ್ವ ರಸ್ತೆಯಲ್ಲಿ ನಡೆದು ಬರುತ್ತಿದ್ದ ಯುವತಿಯ ನೋಡಿ ಆಕೆಯ ಎದುರೇ ಹಸ್ತಮೈಥುನ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.
ಪಶ್ಚಿಮ ಬಂಗಾಳದ ಬಸಿರ್ಹತ್ ನಲ್ಲಿ ಈ ಘಟನೆ ವರದಿಯಾಗಿದ್ದು, ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬೈಕ್ ನಲ್ಲಿ ಸಂಚರಿಸುವ ವ್ಯಕ್ತಿ ಇದ್ದಕ್ಕಿಂದ್ದಂತೆ ಎದುರುಗಡೆ ಬರುತ್ತಿದ್ದ ಯುವತಿಯ ನೋಡಿ ಬೈಕ್ ನಿಲ್ಲಿಸುತ್ತಾನೆ ಹಾಗೂ ಹಿಂತಿರುಗಿ ನೋಡುತ್ತಾನೆ. ಈ ವೇಳೆ ಇನ್ನೊಂದು ಬೈಕ್ ಅವನ ಹತ್ತಿರದಿಂದ ಹಾದು ಹೋಗುತ್ತದೆ. ಬಳಿಕ ಇನ್ನಾವುದೇ ವಾಹನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಆತ ತನ್ನ ಖಾಸಗಿ ಅಂಗವನ್ನು ಪದೇಪದೇ ಮುಟ್ಟಿಕೊಳ್ಳುತ್ತ ಹಸ್ತಮೈಥುನ ಆರಂಭಿಸುತ್ತಾನೆ.
ಆಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅದೇ ದಾರಿಯಲ್ಲಿ ತೆರಳುತ್ತಾಳೆ. ಆಗ ಬೈಕ್ ಬಿಟ್ಟು ಹುಡುಗಿಯನ್ನೇ ನೋಡಿಕೊಳ್ಳುತ್ತಾ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆತನ ವರ್ತನೆ ನೋಡಿ ಅಸಹ್ಯದಿಂದ ಯುವತಿ ಅಲ್ಲಿಂದ ಕಾಲ್ಕೀಳುತ್ತಾಳೆ. ಒಂದು ಹಂತದಲ್ಲಿ ಆಕೆಯನ್ನು ಆತ ಬೆನ್ನಟ್ಟಲು ಪ್ರಯತ್ನಿಸಿ, ಇನ್ನೊಂದು ವಾಹನ ಕಣ್ಣಿಗೆ ಬೀಳುತ್ತಿದ್ದಂತೆ ತನ್ನ ಬೈಕ್ ಏರಿ ಓಡಿ ಹೋಗುತ್ತಾನೆ.