ನವದೆಹಲಿ: ನ್ಯಾಯಶಾಸ್ತ್ರದಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಮೂಡಿಸುವ ಮಹತ್ವದ ಬಗ್ಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್, ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳ ಬದ್ಧತೆಯನ್ನು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಪೂರ್ವ ವಲಯ II ಪ್ರಾದೇಶಿಕ ಸಮ್ಮೇಳನದ 2 ನೇ ದಿನ ಮಾತನಾಡಿರುವ ಸಿಜೆಐ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ತಾಂತ್ರಿಕ ಪ್ರಗತಿಗಳ ಪ್ರಾಮುಖ್ಯತೆಯ ಮೇಲೆ ತಮ್ಮ ಮಾತುಗಳನ್ನು ಕೇಂದ್ರೀಕರಿಸಿದರು.
ಜನತೆ ಕೋರ್ಟ್ ಗಳನ್ನು ನ್ಯಾಯದ ದೇಗುಲವೆಂದು ಕರೆಯುತ್ತಾರೆ. ಅಂದರೆ ನ್ಯಾಯಾಧೀಶರು ದೇವರೆಂಬ ಅರ್ಥ ಬರುತ್ತದೆ. ಆದರೆ ನಾವು ಸಹಾನುಭೂತಿಯಿಂದ ನ್ಯಾಯ ಒದಗಿಸುವ ಜನತೆಯ ಸೇವಕರು ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಧೀಶರುಗಳು ಸಂವಿಧಾನದ ಒಡೆಯರಲ್ಲ (masters) ನಾವು ಸಂವಿಧಾನದ ಸೇವಕರಷ್ಟೇ ಎಂದು ಹೇಳಿರುವ ಸಿಜೆಐ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ವಿರುದ್ಧವಾದ ತೀರ್ಪುಗಳಲ್ಲಿ ಮಧ್ಯಪ್ರವೇಶಿಸುವ ನ್ಯಾಯಾಧೀಶರ ವೈಯಕ್ತಿಕ ಮೌಲ್ಯಗಳು ಮತ್ತು ನಂಬಿಕೆಯ ವ್ಯವಸ್ಥೆಗಳ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
"ನಾವು ಸಾಂವಿಧಾನಿಕ ವ್ಯಾಖ್ಯಾನದ ಪಂಡಿತರಾಗಿರಬಹುದು ಆಗಿರಬಹುದು, ಆದರೆ ಸಾಂವಿಧಾನಿಕ ನೈತಿಕತೆಯ ನ್ಯಾಯಾಲಯದ ದೃಷ್ಟಿಯೊಂದಿಗೆ ನ್ಯಾಯಯುತ ಸಮಾಜವನ್ನು ಸ್ಥಾಪಿಸಲಾಗಿದೆ" ಎಂದು ಅವರು ಹೇಳಿದರು.