ಗುಜರಾತ್ ನ ಜಾಮ್ ನಗರದಲ್ಲಿ ತಮ್ಮ ವಿವಾಹ ಕಾರ್ಯಕ್ರಮ ಅಂಗವಾಗಿ ಗ್ರಾಮಸ್ಥರಿಗೆ ಅನ್ನಸೇವೆ ನೀಡಿದ ರಾಧಿಕಾ ಮರ್ಚೆಂಟ್-ಅನಂತ್ ಅಂಬಾನಿ ಜೋಡಿ  
ದೇಶ

ಅಂಬಾನಿ ಕುಟುಂಬದ ಸೊಸೆಯಾಗುತ್ತಿರುವ ರಾಧಿಕಾ ಮರ್ಚೆಂಟ್ ಯಾರು, ಆಕೆಯ ಹಿನ್ನೆಲೆಯೇನು?

ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಕಾರ್ಯಕ್ರಮ ಸಂಭ್ರಮಾಚರಣೆ ಈಗಾಗಲೇ ಗುಜರಾತ್ ನ ಜಾಮ್ ನಗರದಲ್ಲಿ ಆರಂಭವಾಗಿದೆ.

ಮುಂಬೈ: ಭಾರತದ ಆಗರ್ಭ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಕಾರ್ಯಕ್ರಮ ಸಂಭ್ರಮಾಚರಣೆ ಈಗಾಗಲೇ ಗುಜರಾತ್ ನ ಜಾಮ್ ನಗರದಲ್ಲಿ ಆರಂಭವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ದೇಶ ವಿದೇಶಗಳಿಂದ ಗಣ್ಯರು, ಕಲಾವಿದರು, ಸೆಲೆಬ್ರಿಟಿ ಆಹ್ವಾನಿತರು ಆಗಮಿಸುತ್ತಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಆಯೋಜಿಸಿರುವ ಮೂರು ದಿನಗಳ ಅದ್ದೂರಿ ಸಂಭ್ರಮಾಚರಣೆಯಲ್ಲಿ ಜಾಗತಿಕ ಟೆಕ್ ಸಿಇಒಗಳಿಂದ ಹಿಡಿದು ಉದ್ಯಮದ ಟೈಟನ್‌ಗಳವರೆಗೆ, ಎ-ಲಿಸ್ಟ್ ಪಾಪ್ ಗಾಯಕರಿಂದ ಬಿ-ಟೌನ್ ಸೆಲೆಬ್ರಿಟಿಗಳವರೆಗೆ ಅತಿಥಿಗಳ ದೊಡ್ಡ ದಂಡೇ ಹರಿದುಬರುತ್ತಿದೆ.

ರಿಲಯನ್ಸ್ ಒಡೆತನದ ಸಂಸ್ಥೆಗಳ ಮಂಡಳಿಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ 28 ವರ್ಷದ ಅನಂತ್, ಜುಲೈ 29 ವರ್ಷದ ಕೈಗಾರಿಕೋದ್ಯಮಿ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗುತ್ತಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕಳೆದ ವರ್ಷ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅಷ್ಟಕ್ಕೂ ಅಂಬಾನಿ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಈ ರಾಧಿಕಾ ಮರ್ಚೆಂಟ್ ಯಾರು?: ಉದ್ಯಮಿ ಎನ್ಕೋರ್ ಹೆಲ್ತ್‌ಕೇರ್‌ನ ಸಂಸ್ಥಾಪಕರು ಮತ್ತು ಮಾಲೀಕರಾಗಿರುವ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್. ರಾಧಿಕಾ ಅವರ ತಂದೆ ಎನ್‌ಕೋರ್ ಹೆಲ್ತ್ ಕೇರ್ ನ ಸಿಇಒ ಮತ್ತು ಎಪಿಎಲ್ ಅಪೊಲೊ ಟ್ಯೂಬ್ಸ್, ಸ್ಟೀಲ್ ಉತ್ಪಾದನಾ ಕಂಪನಿಯ ಮಂಡಳಿಯ ಸದಸ್ಯರಾಗಿದ್ದಾರೆ. ರಾಧಿಕಾರ ತಾಯಿ ಶೈಲಾ ಎನ್‌ಕೋರ್ ಹೆಲತ್‌ಕೇರ್‌ನ ನಿರ್ದೇಶಕರಾಗಿದ್ದಾರೆ.

ರಾಧಿಕಾ ಅವರ ಹಿರಿಯ ಸಹೋದರಿ, ಅಂಜಲಿ ಮರ್ಚೆಂಟ್ ಉದ್ಯಮಿ ಇವೈ ಸಂಸ್ಥೆಯ ಪಾಲುದಾರ ಆಕಾಶ್ ಮೆಹ್ತಾ ಅವರನ್ನು ವಿವಾಹವಾಗಿದ್ದಾರೆ.

ರಾಧಿಕಾ ಮರ್ಚೆಂಟ್ ತನ್ನ ಶಾಲಾ ಶಿಕ್ಷಣವನ್ನು ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಸ್ಕೂಲ್, ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಮಾಡಿದರು. ಬಿಡಿ ಸೋಮಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಇಂಟರ್‌ನ್ಯಾಶನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾವನ್ನೂ ಸಹ ಪಡೆದಿದ್ದಾರೆ. ನಂತರ ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಅಧ್ಯಯನ ಮುಗಿಸಿ ಭಾರತಕ್ಕೆ ಮರಳಿದ ನಂತರ, ರಾಧಿಕಾ ಮರ್ಚೆಂಟ್ ಐಷಾರಾಮಿ ರಿಯಲ್ ಎಸ್ಟೇಟ್ ಕಂಪನಿಯಾದ ಇಸ್ಪ್ರವಾವನ್ನು ಸೇರಿಕೊಂಡರು. ಒಂದು ವರ್ಷ ಅಲ್ಲಿ ಕೆಲಸ ಮಾಡಿದ ನಂತರ, ತಮ್ಮ ತಂದೆಯ ಉದ್ಯಮ ಎನ್ಕೋರ್ ಹೆಲ್ತ್‌ಕೇರ್‌ಗೆ ಸೇರಿಕೊಂಡರು.

ಭರತನಾಟ್ಯ ಕಲಾವಿದೆ: ಭರತನಾಟ್ಯ ನೃತ್ಯ ಪ್ರಕಾರದಲ್ಲಿ ತರಬೇತಿಯನ್ನೂ ಪಡೆದಿರುವ ರಾಧಿಕಾ ಜೂನ್ 2022 ರಲ್ಲಿ, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ತಮ್ಮ 'ಅರಗ್ರೇಟಂ' (ಮೊದಲ ಹಂತದ ಪ್ರದರ್ಶನ) ಪ್ರದರ್ಶಿಸಿದರು. ಆಕೆಯ ಆಸಕ್ತಿಯ ಕ್ಷೇತ್ರಗಳು ಪ್ರಾಣಿ ಕಲ್ಯಾಣ, ನಾಗರಿಕ ಹಕ್ಕುಗಳು, ಆರ್ಥಿಕ ಸಬಲೀಕರಣ, ಶಿಕ್ಷಣ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಸೇವೆಯನ್ನು ಒಳಗೊಂಡಿವೆ.

ಬಾಲ್ಯ ಸ್ನೇಹಿತರು: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಬಾಲ್ಯದ ಸ್ನೇಹಿತರು. ಅಂಬಾನಿ ನಿವಾಸಕ್ಕೆ ರಾಧಿಕಾ ಆಗಾಗ್ಗೆ ಬಂದು ಹೋಗುತ್ತಿದ್ದರು. 2018 ರಲ್ಲಿ ಆನಂದ್ ಪಿರಮಾಲ್ ಜೊತೆಗೆ ಇಶಾ ಅಂಬಾನಿ ವಿವಾಹ ಕಾರ್ಯಕ್ರಮದಲ್ಲಿ ಮತ್ತು 2019 ರಲ್ಲಿ ಆಕಾಶ್-ಶ್ಲೋಕಾ ಅವರ ವಿವಾಹದಲ್ಲಿ ಕೂಡ ರಾಧಿಕಾ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT