ಏರ್ ಇಂಡಿಯಾ (ಸಾಂಕೇತಿಕ ಚಿತ್ರ)
ಏರ್ ಇಂಡಿಯಾ (ಸಾಂಕೇತಿಕ ಚಿತ್ರ) online Desk
ದೇಶ

ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಪ್ರಯಾಣಕಿಯನ್ನು ಇಳಿಸಿದ ಏರ್ ಇಂಡಿಯಾ ವಿಮಾನ

Srinivas Rao BV

ನವದೆಹಲಿ: ಲಂಡನ್ ಗೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ವಿಮಾನ ಸಂಸ್ಥೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಪರಿಣಾಮ ಆಕೆಯನ್ನು ದೆಹಲಿಯಲ್ಲಿ ವಿಮಾನದಿಂದ ಇಳಿಸಲಾಗಿದೆ. AI 161 ಏರ್ ಇಂಡಿಯಾ ವಿಮಾನದಲ್ಲಿ ಮಾ.05 ರಂದು ಈ ಘಟನೆ ನಡೆದಿದ್ದು, ವಾಗ್ವಾದ ನಡೆಸಿದ ಮಹಿಳೆ ಹಿರಿಯ ಕಾರ್ಪೊರೇಟ್ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಏರ್ ಇಂಡಿಯಾ ವಕ್ತಾರರ ಹೇಳಿಕೆಯ ಪ್ರಕಾರ, ಸಿಬ್ಬಂದಿ ಸದಸ್ಯರೊಂದಿಗೆ ವಾಗ್ವಾದ ನಡೆಸಿದ, ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕ್ಯಾಪ್ಟನ್‌ನ ಸಲಹೆಯ ಮೇರೆಗೆ ವಿಮಾನದಿಂದ ಕೆಳಗೆ ಇಳಿಸಲಾಯಿತು. ಈಕೆಯನ್ನು ಕೆಳಗಿಳಿಸಿದ ಪರಿಣಾಮ ವಿಮಾನ ನಿಗದಿಗಿಂತಲೂ ಒಂದು ಗಂಟೆ ವಿಳಂಬವಾಯಿತು ಎಂದು ತಿಳಿದುಬಂದಿದೆ.

ಮಹಿಳೆ ಕೆಲವು ಬಲವಾದ ಕಾರಣಗಳಿಗಾಗಿ ಪ್ರಯಾಣಿಸುತ್ತಿದ್ದರು ಮತ್ತು ಲಿಖಿತ ಭರವಸೆಯ ನಂತರ ಅವರನ್ನು ಮುಂದಿನ ವಿಮಾನದಲ್ಲಿ ಕಳಿಸಲಾಯಿತು ”ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು ವಿಮಾನಯಾನ ನಿಯಂತ್ರಕ DGCA ಯ ಮಾಹಿತಿಯ ಪ್ರಕಾರ, ಜನವರಿಯಲ್ಲಿ 894 ಪ್ರಯಾಣಿಕರಿಗೆ ಏರ್ ಇಂಡಿಯಾದಿಂದ ಬೋರ್ಡಿಂಗ್ ನಿರಾಕರಿಸಲಾಗಿದೆ ಮತ್ತು ಇದಕ್ಕಾಗಿ ಪರಿಹಾರ ರೂಪವಾಗಿ ಸುಮಾರು 98 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ.

SCROLL FOR NEXT