ರಷ್ಯಾ ಸೇನೆಯಲ್ಲಿ ಭಾರತೀಯರು 
ದೇಶ

ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ: 7 ನಗರಗಳಲ್ಲಿ ಏಜೆಂಟರ ಮೇಲೆ ಸಿಬಿಐ ದಾಳಿ

ರಷ್ಯಾದಲ್ಲಿ ಭಾರತೀಯರ ಸಾವು ಪ್ರಕರಣದ ಬೆನ್ನಲ್ಲೇ ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ 7 ನಗರಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ನವದೆಹಲಿ: ರಷ್ಯಾದಲ್ಲಿ ಭಾರತೀಯರ ಸಾವು ಪ್ರಕರಣದ ಬೆನ್ನಲ್ಲೇ ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ 7 ನಗರಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ರಷ್ಯಾದಲ್ಲಿ ಭದ್ರತಾ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಭಾರತೀಯರನ್ನು ರಷ್ಯಾದ ಯುದ್ಧ ವಲಯಕ್ಕೆ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ 7 ನಗರಗಳಲ್ಲಿನ ವೀಸಾ ಏಜೆಂಟ್‌ಗಳು, ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಮೂಲಗಳ ಪ್ರಕಾರ ರಷ್ಯಾ ಉದ್ಯೋಗದ ವಂಚನೆಗೊಳಗಾಗಿ ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಬಲವಂತವಾಗಿ ಸೇರ್ಪಡೆಯಾಗಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ಒಂದು ದಿನದ ಬಳಿಕ, ಗುರುವಾರ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತು ಎಂದು ತಿಳಿದು ಬಂದಿದೆ. ರಷ್ಯಾಕ್ಕೆ ಭಾರತೀಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್‌ಗಳು ಮತ್ತು ಸಂಸ್ಥೆಗಳ ದಾಳಿ ಮಾಡಿದೆ ಎನ್ನಲಾಗಿದೆ.

ರಷ್ಯಾದಲಿ ಹೆಚ್ಚಿನ ಸಂಬಳದ ಉದ್ಯೋಗ ದೊರಕಿಸುವ ಆಮಿಷವೊಡ್ಡಿ, ಅಲ್ಲಿಗೆ ಹೋಗುವಂತೆ ಏಜೆಂಟ್ಗಳು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಏಜೆಂಟ್ ಗಳಿಂದ ವಂಚನೆಗೊಳಗಾದ ಸುಮಾರು 20ಕ್ಕೂ ಹೆಚ್ಚು ಭಾರತೀಯರು ರಷ್ಯಾ ಪರವಾಗಿ ಯುಕ್ರೇನ್ ವಿರುದ್ಧ ಹೋರಾಡಲು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಪೈಕಿ ಇದೀಗ ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, ಮಹಮದ್ ಅಸ್ಫಾನ್ ಎಂಬ ತೆಲಂಗಾಣ ಯುವಕ ವ್ಯಾಗ್ನರ್ ಗ್ರೂಪ್ ನೊಂದಿಗೆ ಕೆಲಸ ಮಾಡುತ್ತಿದ್ದಾಗ ಉಕ್ರೇನ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT