ಜಾಕ್ವೆಲಿನ್ ಫರ್ನಾಂಡಿಸ್ 
ದೇಶ

ಮಹಿಳಾ ದಿನಾಚರಣೆ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್ ಚಂದ್ರಶೇಖರ್

200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ನವದೆಹಲಿ: 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಚಂದ್ರಶೇಖರ್ ತಮ್ಮ ಪತ್ರದಲ್ಲಿ ಜಾಕ್ವೆಲಿನ್ ತಮ್ಮ ಲೈಫ್‌ಲೈನ್ ಎಂದಿದ್ದು, ಪುರುಷರು ತಮ್ಮ ಜೀವನದಲ್ಲಿ ಮಹಿಳೆಯರಿಂದ ತಮ್ಮ ನಿಜವಾದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಅವರ ಉಪಸ್ಥಿತಿಯಿಲ್ಲದೆ ಜಗತ್ತು ಅಪೂರ್ಣಗೊಳ್ಳುತ್ತದೆ' ಎಂದು ಹೇಳಿದ್ದಾರೆ.

ಫರ್ನಾಂಡಿಸ್ ಅವರನ್ನು ತನ್ನ ಶಕ್ತಿ ಮತ್ತು ಶಕ್ತಿಯ ಮೂಲ ಎಂದು ಕರೆದ ಸುಕೇಶ್, 'ವಿರೋಧ ಮತ್ತು ಋಣಾತ್ಮಕತೆಯ ವಿರುದ್ಧ ಹೋರಾಡಿ ವಿಜಯಶಾಲಿಯಾಗಿ ಹೊರಹೊಮ್ಮಲು ಎಲ್ಲೆಡೆ ಮಹಿಳೆಯರಿಗೆ ಸ್ಫೂರ್ತಿ' ಎಂದಿದ್ದಾರೆ.

ಜಾಕ್ವೆಲಿನ್ ತನ್ನ 'ರಾಕ್‌ಸ್ಟಾರ್', 'ಸೂಪರ್‌ಸ್ಟಾರ್' ಮತ್ತು 'ಹೀರೋ' ಆಗಿದ್ದು, ಅವರು ಅಸಾಧಾರಣ ಪ್ರತಿಭಾವಂತರು, ಅವರ ಸಾಧನೆಗಳು ಪ್ರಶಂಸನೀಯ ಮತ್ತು ಅವರ ನೆಚ್ಚಿನ ಬೆಕ್ಕಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಕ್ವೆಲಿನ್ ಅವರ ಹೊಸ ಹಾಡಿನ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಮತ್ತು ಅವರ ಕಟ್ಟಡದಲ್ಲಿ ಬೆಂಕಿ ಅವಘಡದ ಘಟನೆಯ ನಂತರ ಅವರ ಸುರಕ್ಷತೆಯ ಬಗ್ಗೆ ಸುಕೇಶ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ತಮ್ಮ ಪತ್ರವನ್ನು ಮುಕ್ತಾಯಗೊಳಿಸುತ್ತಾ, 'ಹರ ಹರ ಮಹಾದೇವ್' ನಮಸ್ಕಾರದೊಂದಿಗೆ ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು ಮತ್ತು ಫರ್ನಾಂಡಿಸ್ ಅವರೆಡೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT