ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ TNIE
ದೇಶ

ಭೂಕಬಳಿಕೆ ಪ್ರಕರಣದಲ್ಲಿ ಶಹಜಹಾನ್‌ ಶೇಖ್ ಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ED ದಾಳಿ

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ಭೂಕಬಳಿಕೆ ಪ್ರಕರಣದ ಆರೋಪಿ ಶಹಜಹಾನ್‌ ಶೇಖ್ ಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಶಾಸಕ ಶೇಖ್ ಶಹಜಹಾನ್‌ ಬಂಧನಕ್ಕೊಳಗಾಗಿದ್ದು, ಟಿಎಂಸಿಯಿಂದ ಉಚ್ಚಾಟನೆಗೊಂಡಿದ್ದಾರೆ.

ಕೇಂದ್ರದ ಭದ್ರತಾಪಡೆಗಳ ನೆರವು ಪಡೆದು ಜಾರಿ ನಿರ್ದೇಶನಾಲಯ ದಾಳಿಯನ್ನು ಮುಂದುವರೆಸಿದೆ. ದಾಳಿ ನಡೆಸುತ್ತಿರುವ ಸ್ಥಳಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರ ವಸತಿ ಸ್ಥಳಗಳು ಸೇರಿವೆ. ಹಜಹಾನ್‌ನನ್ನು ಬಂಧಿಸಿದ ಕೆಲವು ದಿನಗಳ ನಂತರ ಏಜೆನ್ಸಿ ಈ ದಾಳಿಗಳನ್ನು ನಡೆಸಿತು. ಸಂದೇಶ್‌ಖಾಲಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪಿ ಶಹಜಹಾನ್‌ನನ್ನು ಫೆಬ್ರವರಿ 29 ರಂದು ಬೆಳಿಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಅವರು ಅಡಗಿಕೊಂಡಿದ್ದ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಮಿನಾಖಾನ್‌ನಲ್ಲಿರುವ ಮನೆಯಿಂದ ಬಂಧಿಸಿದ್ದರು.

ಫೆಬ್ರವರಿ 23 ರಂದು, ಇದೇ ಭೂಕಬಳಿಕೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸುಮಾರು 6 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು. ಷಹಜಹಾನ್ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಜನವರಿ ತಿಂಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ದಿನಾಂಕಗಳಲ್ಲಿ ಅನೇಕ ಸ್ಥಳಗಳಲ್ಲಿ ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿತ್ತು.

ಜನವರಿ 5 ರಂದು ನಡೆಸಲಾದ ಇದೇ ರೀತಿಯ ಶೋಧ ಕಾರ್ಯಾಚರಣೆಯಲ್ಲಿ, ಉತ್ತರ 24 ಪರಗಣ ಜಿಲ್ಲೆಯ ಶಹಜಹಾನ್ ಮತ್ತು ಇತರ ಟಿಎಂಸಿ ನಾಯಕ ಶಂಕರ್ ಆಧ್ಯ ಅವರ ನಿವಾಸಗಳ ಮೇಲೆ ದಾಳಿ ನಡೆಸಲು ಇಡಿ ಅಧಿಕಾರಿಗಳು ತೆರಳುತ್ತಿದ್ದಾಗ ಅಧಿಕಾರಿಗಳ ವಿರುದ್ಧ ದಾಳಿ ನಡೆಸಲಾಯಿತು. TMC ನಾಯಕನ ಬೆಂಬಲಿಗರು ಎಂದು ನಂಬಲಾದ ಸುಮಾರು 200 ಸ್ಥಳೀಯರು ಅಧಿಕಾರಿಗಳು ಮತ್ತು ಸಶಸ್ತ್ರ ಅರೆಸೇನಾ ಪಡೆಗಳನ್ನು ಸುತ್ತುವರೆದರು, ಷಹಜಹಾನ್ ಅವರ ನಿವಾಸದ ಮೇಲೆ ದಾಳಿ ಮಾಡದಂತೆ ತಡೆಯುತ್ತಾರೆ. ಘಟನೆಯಲ್ಲಿ ಇಬ್ಬರು ಇಡಿ ಅಧಿಕಾರಿಗಳು ಗಾಯಗೊಂಡಿದ್ದಾರೆ.

SCROLL FOR NEXT