ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ಲೋಕಸಭೆ ಚುನಾವಣೆ: ಪಂಜಾಬ್‌ಗೆ ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 5 ಸಚಿವರು ಕಣಕ್ಕೆ

Lingaraj Badiger

ನವದೆಹಲಿ: ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಗುರುವಾರ ಪಂಜಾಬ್‌ಗೆ ಎಂಟು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಐದು ಕ್ಯಾಬಿನೆಟ್ ಸಚಿವರನ್ನು ಕಣಕ್ಕಿಳಿಸಿದೆ.

ಪಂಜಾಬ್ ಆಡಳಿತ ಪಕ್ಷ ಎಎಪಿ, ಮಾಜಿ ಕಾಂಗ್ರೆಸ್ ಶಾಸಕ ಮತ್ತು ಪಂಜಾಬಿ ನಟನನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಭಾಗವಾಗಿರುವ AAP, ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದೆ.

ಆಮ್ ಆದ್ಮಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಗೆ ಪಂಜಾಬ್‌ನ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಪಕ್ಷವು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಅಮೃತಸರದಿಂದ ಎನ್‌ಆರ್‌ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್, ಖದೂರ್ ಸಾಹಿಬ್‌ನಿಂದ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲಾರ್, ಬಟಿಂಡಾದಿಂದ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡಿಯಾನ್, ಸಂಗ್ರೂರ್ ನಿಂದ ಕ್ರೀಡಾ ಸಚಿವ ಮತ್ತು ಎರಡು ಬಾರಿ ಶಾಸಕ ಗುರ್ಮೀತ್ ಸಿಂಗ್ ಮೀತ್ ಹಯರ್ ಅವರನ್ನು ಕಣಕ್ಕಿಳಿಸಲಾಗಿದೆ. ಪಟಿಯಾಲದಿಂದ ಆರೋಗ್ಯ ಸಚಿವ ಡಾ.ಬಲ್ಬೀರ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.

SCROLL FOR NEXT