ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ
ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ 
ದೇಶ

Kosi Bridge Collapse: ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, 1 ಸಾವು, 9 ಮಂದಿಗೆ ಗಾಯ

Srinivasamurthy VN

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತಗೊಂಡಿದ್ದು, ದುರ್ಘಟನೆಯಲ್ಲಿ ಕನಿಷ್ಠ 1 ಸಾವಾಗಿ, 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರದ ಕೋಸಿ ನದಿಗೆ ನಿರ್ಮಿಸಲಾಗುತ್ತಿದ್ದ ದೇಶದ ಅತೀದೊಡ್ಡ ಸೇತುವೆ ಇದಾಗಿದ್ದು, ಆದರೆ ದುರಾದೃಷ್ಟವಶಾತ್ ಸೇತುವೆ ನಿರ್ಮಾಣ ಹಂತದಲ್ಲೇ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವಾರು ಮಂದಿ ಸೇತುವೆಯ ಅವಶೇಷದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.

ಬಿಹಾರದ ಸುಪೌಲ್‌ನ ಬಾಕೂರ್ ಮತ್ತು ಭೇಜಘಾಟ್ ಮಧುಬನಿ ನಡುವೆ ನಿರ್ಮಾಣವಾಗುತ್ತಿರುವ ಈ ಸೇತುವೆಯ 50, 51 ಮತ್ತು 52 ಪಿಲ್ಲರ್‌ಗಳ ಗಾರ್ಟರ್‌ಗಳು ಕುಸಿದು ಬಿದ್ದಿವೆ. ಸುಪಾಲ್ ಡಿಎಂ ಕೌಶಲ್ ಕುಮಾರ್ ಅವರು ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಪರ್ಯಾಸ ಅಂದ್ರೆ ದುರ್ಘಟನೆ ಸಂಭವಿಸಿ ಗಂಟೆಗಳು ಕಳೆದರೂ ಇನ್ನೂ ರಕ್ಷಣಾ ಕಾರ್ಯ ಪ್ರಾರಂಭವಾಗಿಲ್ಲ. ಆದರೆ, ಡಿಎಂ ಮತ್ತು ಎಸ್ಪಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಅಂತೆಯೇ 20ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ದುರ್ಘಟನೆಯ ನಂತರ ಸ್ಥಳೀಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಬಾಕೂರ್ ಮತ್ತು ಭಾಜ್ ನಡುವಿನ ಸೇತುವೆಯ ಗಾರ್ಟರ್ ಕುಸಿದ ನಂತರ ಇನ್ನೂ ರಕ್ಷಣಾ ಕಾರ್ಯ ಪ್ರಾರಂಭವಾಗಿಲ್ಲ. ಆದರೆ ಇಲ್ಲಿ ಅಧಿಕಾರಿಗಳ ತಂಡ ಮೊಕ್ಕಾಂ ಹೂಡಿದೆ.

ಆದರೆ ಸೇತುವೆ ಕುಸಿದ ಭಾಗ ಕೋಸಿ ನದಿಯ ಮಧ್ಯದಲ್ಲಿ ಇರುವುದರಿಂದ ಸಾಕಷ್ಟು ಉಪಕರಣಗಳು ಘಟನಾ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಇಂತಹ ಪರಿಸ್ಥಿತಿಯಲ್ಲಿ, ಪರಿಹಾರ ಮತ್ತು ರಕ್ಷಣೆಗೆ ಸಾಕಷ್ಟು ತೊಂದರೆಗಳನ್ನು ಉಂಟಾಗುತ್ತಿದೆ ಎಂದು. 3 ಅಡಿ ಆಳಕ್ಕೆ ಗಾರೆ ಬಿದ್ದಿದ್ದು, ಸೇತುವೆ ನಿರ್ಮಾಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪವೂ ಕೇಳಿಬಂದಿದ್ದು, ಜನರು ಇದನ್ನು ಆರಂಭದಲ್ಲೇ ವಿರೋಧಿಸಿದ್ದರೂ ಈ ಬಗ್ಗೆ ಯಾವುದೇ ವಿಚಾರಣೆ ನಡೆದಿಲ್ಲ. ಸದ್ಯ ಗ್ರಾಮಸ್ಥರ ನೆರವಿನಿಂದ 20 ಮಂದಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

ಯಾವುದು ಈ ಮಹಾ ಸೇತುವೆ?

ಸುಪೌಲ್ ಜಿಲ್ಲೆಯ ಬಾಕೂರ್ ಮತ್ತು ಮಧುಬನಿ ಜಿಲ್ಲೆಯ ಭೇಜಾ ನಡುವೆ ದೇಶದ ಅತಿ ಉದ್ದದ (10.2 ಕಿಮೀ) ಮಹಾಸೇತುವೆ ನಿರ್ಮಾಣವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಆದರೆ ಇದರ ನಿರ್ಮಾಣ ಮಾತ್ರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ. ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 1199 ಕೋಟಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮಹಾಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಕೇವಲ 1051.3 ಕೋಟಿ ರೂಪಾಯಿಗಳಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಏಜೆನ್ಸಿಯೊಂದು ಪ್ಲಾನ್ ಸಿದ್ಧಪಡಿಸುತ್ತಿದೆ.

ಇದರಲ್ಲಿ ಗ್ಯಾಮನ್ ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು M/s ಟ್ರಾನ್ಸ್ ರೈಲ್ ಲೈಟಿಂಗ್ ಪ್ರೈವೇಟ್ ಲಿಮಿಟೆಡ್ (ಜಂಟಿ ವೆಂಚರ್) ಸೇರಿವೆ. ಭಾರತ್ ಮಾಲಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಈ ಸೇತುವೆಯು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ದೇಶದ ಅತಿ ಉದ್ದದ ಸೇತುವೆಯನ್ನು ಇಲ್ಲಿ ನಿರ್ಮಿಸಲಾಗುತ್ತಿದ್ದು, ಇದನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.

SCROLL FOR NEXT