ಸುನಿಲ್ ಶರ್ಮಾ 
ದೇಶ

ಜೈಪುರ್ ಡೈಲಾಗ್ ಜೊತೆ ಸಂಪರ್ಕ: ಸುನಿಲ್ ಶರ್ಮಾ ಗೆ ನೀಡಿದ್ದ ಟಿಕೆಟ್ ವಾಪಸ್ ಪಡೆದ ಕಾಂಗ್ರೆಸ್!

ದೇಶಾದ್ಯಂತ ಲೋಕಸಭಾ ಚುನಾವಣೆ 2024 ರ ತಯಾರಿ ಭರ್ಜರಿಯಾಗಿ ನಡೆದಿದ್ದು, ಕಾಂಗ್ರೆಸ್ ಜೈಪುರದ ತನ್ನ ಅಭ್ಯರ್ಥಿಯನ್ನು ಏಕಾ ಏಕಿ ಬದಲಾವಣೆ ಮಾಡಿದೆ.

ಜೈಪುರ: ದೇಶಾದ್ಯಂತ ಲೋಕಸಭಾ ಚುನಾವಣೆ 2024 ರ ತಯಾರಿ ಭರ್ಜರಿಯಾಗಿ ನಡೆದಿದ್ದು, ಕಾಂಗ್ರೆಸ್ ಜೈಪುರದ ತನ್ನ ಅಭ್ಯರ್ಥಿಯನ್ನು ಏಕಾ ಏಕಿ ಬದಲಾವಣೆ ಮಾಡಿದೆ.

ಈ ಕ್ಷೇತ್ರದಿಂದ ರಾಜಸ್ಥಾನದ ಮಾಜಿ ಸಚಿವ ಪ್ರತಾಪ್ ಸಿಂಗ್ ಕಚಾರಿಯಾವಾಸ್ ಅವರನ್ನು ಕಣಕ್ಕೆ ಇಳಿಸಿದೆ. ಸುನಿಲ್ ಶರ್ಮಾ ಉಮೇದುವಾರಿಕೆಗೆ ಪಕ್ಷದ ಆಂತರಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಸುನಿಲ್ ಶರ್ಮಾ ಅವರು ಜೈಪುರ ಡೈಲಾಗ್ (ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಬಗ್ಗೆ ಕಟು ಟೀಕೆ ಮಾಡುವ ವೇದಿಕೆ) ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರ ಹಿನ್ನೆಲೆಯಲ್ಲಿ ಅವರನ್ನು ಕಣದಿಂದ ಹಿಂದೆಸರಿಯುವಂತೆ ಮಾಡಲಾಗಿದೆ.

ಆದರೆ ಶರ್ಮಾ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿದ್ದು, ಈ ವೇದಿಕೆ ತಮ್ಮನ್ನು ಕಾಂಗ್ರೆಸ್ ನ ನಿಲುವುಗಳನ್ನು ಪ್ರಸ್ತುತಪಡಿಸಲು ಆಹ್ವಾನಿಸಿತ್ತು ಅಷ್ಟೇ ಎಂಬ ಸಮರ್ಥನೆ ನೀಡಿದ್ದಾರೆ. ಸ್ಥಳೀಯರ ವಿರೋಧದ ಪರಿಣಾಮ ಸುನಿಲ್ ಶರ್ಮಾ ಗೆ ಟಿಕೆಟ್ ಕೈತಪ್ಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'Digital arrest' ವಂಚನೆ ತಡೆಗೆ ಸಿಮ್ ಕಾರ್ಡ್ ವಿತರಣೆ ಬಿಗಿಗೊಳಿಸಲಿದೆ ಸರ್ಕಾರ; ಇನ್ಮುಂದೆ ಖರೀದಿಗೆ ನಿರ್ಬಂಧ, ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ!

ದೆಹಲಿಯಲ್ಲಿ ಸಿಎನ್‌ಜಿ ಸಿಲಿಂಡರ್ ಸ್ಫೋಟ: ಒಬ್ಬರ ಸಾವು, ಆರು ಮಂದಿಗೆ ಗಂಭೀರ ಗಾಯ!

ಹಗಲು ರಾತ್ರಿ ನೀರಿನಲ್ಲೇ ವಾಸ: ಇಕ್ಬಾಲ್ ನೆರವಿಗೆ ಅನಂತ್ ಅಂಬಾನಿ, ಮುಂಬೈಗೆ ಏರ್‌ಲಿಫ್ಟ್!