ಆತ್ಮಹತ್ಯೆ
ಆತ್ಮಹತ್ಯೆ 
ದೇಶ

ಕೋಟಾದಲ್ಲಿ NEET ಆಕಾಂಕ್ಷಿ ನೇಣಿಗೆ ಶರಣು: ಜನವರಿಯಿಂದ 6ನೇ ಪ್ರಕರಣ

Srinivas Rao BV

ಕೋಟಾ: 20 ವರ್ಷದ ಎನ್ಇಇಟಿ ಆಕಾಂಕ್ಷಿ ಕೋಟಾದಲ್ಲಿ ನೇಣಿಗೆ ಶರಣಾಗಿದ್ದಾರೆ. ಜನವರಿ ತಿಂಗಳಿನಿಂದ ವರದಿಯಾಗುತ್ತಿರುವ 6 ನೇ ಪ್ರಕರಣ ಇದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ನಿವಾಸಿ ಮೊಹಮ್ಮದ್ ಉರೂಜ್ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಜ್ಞಾನ ನಗರ ಪ್ರದೇಶದಲ್ಲಿರುವ ಕೊಠಡಿಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಈ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ಗೆ ಆತ್ಮಹತ್ಯೆ ನಿರೋಧಕ ಉಪಕರಣವನ್ನು ಅಳವಡಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023 ರಲ್ಲಿ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 26 ಇತ್ತು. ಎಸ್‌ಎಚ್‌ಒ ಪ್ರಕಾರ, ಯುಪಿಯ ಕನೌಜ್ ಜಿಲ್ಲೆಯವರಾದ ಉರೂಜ್ ಕಳೆದ ಒಂದೂವರೆ ವರ್ಷದಿಂದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಮಂಗಳವಾರ ಬೆಳಿಗ್ಗೆ ತಮ್ಮ ಕರೆಗಳಿಗೆ ಸ್ಪಂದಿಸದ ಕಾರಣ ವಿದ್ಯಾರ್ಥಿಯ ಪೋಷಕರು ಆತಂಕಕ್ಕೊಳಗಾದರು ಮತ್ತು ಅವರು ತಮ್ಮ ಸ್ನೇಹಿತರು ಮತ್ತು ವಸತಿ ನಿಲಯದ ಸಿಬ್ಬಂದಿಗೆ ಮಾಹಿತಿ ನೀಡಿದರು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT