ನವದೆಹಲಿ: ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಇಂದು ಆಯೋಜಿಸಲಾಗಿರುವ ಬೃಹತ್ ರ್‍ಯಾಲಿಗೆ ಪೊಲೀಸರು ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ರ್‍ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿ ಗೇಟ್‌ನಲ್ಲಿ ತಪಾಸಣೆ ಸೇರಿದಂತೆ ವೇದಿಕೆ ಸುತ್ತ ಸುತ್ತಮುತ್ತ ಅರೆಸೈನಿಕ ಪಡೆಗಳ ನಿಯೋಜಿಸಲಾಗಿದೆ.
ರ್‍ಯಾಲಿ ಹಿನ್ನೆಲೆಯಲ್ಲಿ ಯಾವುದೇ ಮೆರವಣಿಗೆ, ಟ್ರಾಕ್ಟರ್ ಟ್ರಾಲಿಗಳು ಮತ್ತು ಬಂದೂಕುಗಳನ್ನು ಸಾಗಿಸಬಾರದು ಮುಂತಾದ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ದೆಹಲಿ ಪೊಲೀಸರು ಆದೇಶಿಸಿದ್ದಾರೆ. ರ್‍ಯಾಲಿಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಚಾರಿ ಪೊಲೀಸರು ಕೆಲವೊಂದು ಮಾರ್ಗಗಳ ಬದಲಾವಣೆ ಮಾಡಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ರಾಜ್‌ಘಾಟ್ ಚೌಕ್, ಮಿಂಟೋ ರಸ್ತೆ, ಡಿಡಿಯು ಮಾರ್ಗ, ಮಿರ್ದಾರ್ಡ್ ಚೌಕ್, ಪಹರ್‌ಗಂಜ್ ಚೌಕ್, ಎ-ಪಾಯಿಂಟ್ ಮತ್ತು ದೆಹಲಿ ಗೇಟ್ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಬದಲಿಸಲಾಗಿದೆ. ಸಾರ್ವಜನಿಕ ಸಾರಿಗೆಯನ್ನು, ವಿಶೇಷವಾಗಿ ಮೆಟ್ರೋ ಸೇವೆಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಸಹಕರಿಸಲು ಸಂಚಾರ ಪೊಲೀಸರು ಪ್ರಯಾಣಿಕರನ್ನು ವಿನಂತಿಸಿದ್ದಾರೆ.