ಫಾರೂಕ್ ಅಬ್ದುಲ್ಲಾ-ರಾಜನಾಥ್ ಸಿಂಗ್ 
ದೇಶ

ತಾಕತ್ತಿದ್ದರೆ POK ವಾಪಸ್ ಪಡೆಯಲಿ, ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ.. ಅವರ ಬಳಿಯೂ ಅಣು ಬಾಂಬ್ ಇದೆ: ರಾಜನಾಥ್ ಸಿಂಗ್ ಗೆ Farooq Abdullah ಸವಾಲು!

ಪಾಕ್ ಆಕ್ರಮಿತ ಕಾಶ್ಮೀರ ಭಾಗ ಭಾರತದ ಪಾಲಾಗುತ್ತದೆ ಎಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಟಾಂಗ್ ನೀಡಿದ್ದು, ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಾಪಸ್ ಪಡೆಯಲಿದೆ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, 'ತಾಕತ್ತಿದ್ದರೆ POK ವಾಪಸ್ ಪಡೆಯಲಿ, ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ.. ಅವರ ಬಳಿಯೂ ಅಣು ಬಾಂಬ್ ಇದೆ' ಎಂದು ಕಿಡಿಕಾರಿದ್ದಾರೆ.

ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಪಿಒಕೆಯನ್ನು ಭಾರತ ಬಲಪೂರ್ವಕವಾಗಿ ವಶಪಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲಿನ ಜನರೇ ಭಾರತದ ಜೊತೆ ವಿಲೀನ ಮಾಡುತ್ತಾರೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗದ ಮೇಲಿನ ಹಕ್ಕನ್ನು ಭಾರತ ಎಂದಿಗೂ ಬಿಡುವುದಿಲ್ಲ. ಆದರೆ, ಆ ಭಾಗವನ್ನು ಭಾರತ ಬಲವಂತವಾಗಿ ವಶಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಯಾಕೆಂದರೆ ಭಾರತದ ಭಾಗದಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಂಡು ಜನರೇ ಪಿಒಕೆಯನ್ನು ಪಾಕಿಸ್ತಾನದಿಂದ ಮುಕ್ತಗೊಳಿಸುತ್ತಾರೆ ಎಂದು ಹೇಳಿದ್ದರು. ಅಂತೆಯೇ ‘ಪಿಒಕೆ ಅಂದಿಗೂ, ಇಂದಿಗೂ, ಎಂದಿಗೂ ಭಾರತದ ಭಾಗವಾಗಿಯೇ ಇದೆ. ಪಿಒಕೆ ಪಡೆಯಲು ನಾವು ಬಲಪ್ರಯೋಗ ಮಾಡುವುದಿಲ್ಲ. ಪಿಒಕೆ ಭಾರತದ ಜೊತೆ ವಿಲೀನ ಆಗಬೇಕೆಂದು ಜನರೇ ಹೇಳುತ್ತಿದ್ದಾರೆ. ಅಂತಹ ಬೇಡಿಕೆಗಳು ಈಗ ಬರತೊಡಗಿವೆ,’ ಎಂದು ಹೇಳಿದ್ದರು.

ಫಾರೂಕ್ ಅಬ್ದುಲ್ಲಾ ಆಕ್ರೋಶ

ಪಾಕ್ ಆಕ್ರಮಿತ ಕಾಶ್ಮೀರ ಭಾಗ ಭಾರತದ ಪಾಲಾಗುತ್ತದೆ ಎಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಟಾಂಗ್ ನೀಡಿದ್ದು, 'ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ. ಅವರ ಬಳಿ ಅಣು ಬಾಂಬ್​ಗಳಿವೆ. ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅಂತೆಯೇ ‘ರಕ್ಷಣಾ ಸಚಿವರು ಹೀಗೆ ಹೇಳುತ್ತಿದ್ದಾರೆಂದರೆ, ಮಾಡಿ ತೋರಿಸಲಿ. ನಾವ್ಯಾಕೆ ಅವರನ್ನು ತಡೆಯೋಣ. ಆದರೆ, ಪಾಕಿಸ್ತಾನೀಯರು ಕೈಗೆ ಬಳೆ ತೊಟ್ಟಿಕೊಂಡು ಇರುವುದಿಲ್ಲ. ಆ ದೇಶದಲ್ಲಿ ಅಟಂ ಬಾಂಬ್​ಗಳಿವೆ ಎಂಬುದು ಗೊತ್ತಿರಲಿ. ದುರದೃಷ್ಟ ಎಂದರೆ ಆ ಅಣು ಬಾಂಬ್ ಗಳು ನಮ್ಮ ಮೇಲೆಯೇ ಬೀಳುತ್ತದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT