ಶಾಸಕ ಜಯೇಶ್ ರಾಡಾಡಿಯಾ-ಬಿಪಿನ್ ಪಟೇಲ್  online desk
ದೇಶ

ಮೋದಿ ತವರಿನಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತದ ಬೇಗೆ: ಅಮಿತ್ ಶಾ ಆಪ್ತನಿಗೆ ಸೋಲು!

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಆಂತರಿಕ ಭಿನ್ನಮತದ ಬೇಗೆಯನ್ನು ಎದುರಿಸುತ್ತಿದೆ.

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಆಂತರಿಕ ಭಿನ್ನಮತದ ಬೇಗೆಯನ್ನು ಎದುರಿಸುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಐಎಫ್ಎಫ್ ಸಿಒ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಭಿನ್ನಮತ ಸ್ಪಷ್ಟವಾಗಿ ತಲೆದೋರಿದ್ದು, ಅಮಿತ್ ಶಾ ಆಪ್ತ ಸೋಲು ಕಂಡಿದ್ದಾರೆ.

ಗುಜರಾತ್ ನ ಮಾಜಿ ಸಚಿವ, ಶಾಸಕ ಜಯೇಶ್ ರಾಡಾಡಿಯಾ- ಪಕ್ಷದ ಸಹಕಾರ ವಿಭಾಗದ ಸಂಯೋಜಕರು ಹಾಗೂ ಗುಜರಾತ್ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ (ಗುಜ್ಕೊಮಾಸೋಲ್) ಉಪಾಧ್ಯಕ್ಷ ಬಿಪಿನ್ ಪಟೇಲ್ ಅಲಿಯಾಸ್ ಬಿಪಿನ್ ಗೋಟಾ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ.

ಅಮೇರ್ಲಿಯಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಾರಾಯಣ ಕಚಿದಾ ಈ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಮತ್ತು ಎಎಪಿ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಜ್ಯದ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಅವರು ಅಮಿತ್ ಶಾ ಅವರ ಆಪ್ತರಾಗಿದ್ದ ಗೋಟಾ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಅನುಮೋದಿಸಿದರೂ, ರಾಡಾಡಿಯಾ ಅವರು ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಪಕ್ಷದ ಆದೇಶವನ್ನು ಧಿಕ್ಕರಿಸಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.

ಅಮಿತ್ ಶಾ ರಾಡಾಡಿಯಾ ನಿವಾಸಕ್ಕೆ ಭೇಟಿ ನೀಡಿದರೂ ರಾಡಾಡಿಯಾ ಅವರು ಗೋಟಾ ವಿರುದ್ಧ ನಾಮಪತ್ರ ಹಿಂಪಡೆಯುವುದಕ್ಕೆ ಒಪ್ಪಿಗೆ ನೀಡಲಿಲ್ಲ. ಬಿಜೆಪಿಯವರೇ ಆದ ಇಫ್ಕೋ (ಐಎಫ್ಎಫ್ ಸಿಒ ) ಮುಖ್ಯಸ್ಥರಾಗಿ ಪ್ರಮುಖ ಪಾತ್ರವನ್ನು ಹೊಂದಿರುವ ದಿಲೀಪ್ ಸಂಘಾನಿಯಂತಹ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ರಾಡಾಡಿಯಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಗುಜರಾತಿನ ಮಹತ್ವದ ಕೃಷಿ ಪ್ರದೇಶವಾದ ಸೌರಾಷ್ಟ್ರದ ರೈತ ಸಮುದಾಯದ ಬೆಂಬಲವೂ ರಾಡಾಡಿಯಾ ಅವರಿಗೆ ಲಭಿಸಿತ್ತು. ರಾಡಾಡಿಯಾ ಅವರು ಚುನಾವಣೆಯಲ್ಲಿ 113 ಮತಗಳನ್ನು ಪಡೆದರು, ಇದು ಗೋಟಾ ಅವರ 64 ಮತಗಳಿಗೆ ಹೋಲಿಸಿದರೆ ಗಮನಾರ್ಹ ಸಂಖ್ಯೆಯ ಮತಗಳಾಗಿವೆ. ಈ ಅನಿರೀಕ್ಷಿತ ಫಲಿತಾಂಶದ ನಂತರ, ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರು ಇತರ ಪಕ್ಷದ ನಾಯಕರೊಂದಿಗೆ ರಾಜಿ ಮಾಡಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, IFFCO ಅಧ್ಯಕ್ಷ ಮತ್ತು ಹಿರಿಯ ಬಿಜೆಪಿ ವ್ಯಕ್ತಿ ದಿಲೀಪ್ ಸಂಘಾನಿ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತ್ವರಿತವಾಗಿ ಟಿಕೆಟ್ ನೀಡಿದ ಉದಾಹರಣೆಗಳನ್ನು ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಗೆಲುವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಾಟೀಲ್, “ಕೆಲವು ವ್ಯಕ್ತಿಗಳು ಸಹಕಾರಿ ಚುನಾವಣೆಯ ನೆಪದಲ್ಲಿ ‘ಬೇರೆ ಪಕ್ಷದವರನ್ನು ಅಪ್ಪಿಕೊಳ್ಳುವುದರಲ್ಲಿ ತೊಡಗಿದ್ದರು. ಆದ್ದರಿಂದ ಪಕ್ಷಕ್ಕೆ ಹಾನಿಯಾಗುವ ಸಂದರ್ಭವನ್ನು ನಿಭಾಯಿಸಲು ಬಿಜೆಪಿ ಜನಾದೇಶ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಪಾಟೀಲರ ವಿರುದ್ಧ ಮುಸುಕಿನ ಗುದ್ದಾಟದ ಮೂಲಕ ಪ್ರತೀಕಾರ ತೀರಿಸಿಕೊಂಡ ಸಂಘನಿ, “ಸಹಕಾರಿ ನಾಯಕರು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಗೆಲುವು ಸಾಧಿಸಿದ್ದಾರೆ. ಒಂದು ದಿನದೊಳಗೆ ವ್ಯಕ್ತಿಗಳು ಕಾಂಗ್ರೆಸ್‌ನಿಂದ ನಮ್ಮ ಪಕ್ಷಕ್ಕೆ ಬದಲಾದಾಗ ಮತ್ತು ಟಿಕೆಟ್ ಪಡೆದರೆ, ಅದು ಕಾರ್ಯಕರ್ತರನ್ನು ನಿರಾಶೆಗೊಳಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT