ಊಟ ಬಡಿಸಿದ ಪ್ರಧಾನಿ ಮೋದಿ 
ದೇಶ

Video: ಟರ್ಬನ್ ಧರಿಸಿ, ಚಪಾತಿ ಮಾಡಿ ಗುರುದ್ವಾರದಲ್ಲಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ!

ಬಿಹಾರದಲ್ಲಿರುವ ಪ್ರಧಾನಿ ಮೋದಿ ಇಂದು ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ತಾವೇ ಖುದ್ದು ಚಪಾತಿ ಮಾಡಿ ಭಕ್ತರಿಗೆ ಊಟ ಬಡಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಪಾಟ್ನಾ: ಬಿಹಾರದಲ್ಲಿರುವ ಪ್ರಧಾನಿ ಮೋದಿ ಇಂದು ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ತಾವೇ ಖುದ್ದು ಚಪಾತಿ ಮಾಡಿ ಭಕ್ತರಿಗೆ ಊಟ ಬಡಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಹೌದು.. ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಸೋಮವಾರ ಭೇಟಿ ನೀಡಿದ್ದರು. ಬೆಳಿಗ್ಗೆ ಅವರು ಗುರುದ್ವಾರದಲ್ಲಿದ್ದ ಸಿಖ್ ಸಮುದಾಯದ ಜನರಿಗೆ ಆಹಾರ ಬಡಿಸುವ ಸೇವಾ ಕಾರ್ಯ ನಡೆಸಿದರು.

ಬಿಹಾರದ ಪಾಟ್ನಾದಲ್ಲಿರುವ ಐತಿಹಾಸಿಕ ಗುರುದ್ವಾರ ಪಾಟ್ನಾ ಸಾಹಿಬ್‍ಗೆ ಭೇಟಿ ನೀಡಿದ ಪಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಬಳಿಕ ಹರಿಮಂದಿರ್ ಜಿ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು. ಕಿತ್ತಳೆ ಬಣ್ಣದ ಸಿಖ್ ಪೇಟ ಧರಿಸಿದ್ದ ಪ್ರಧಾನಿ ಮೋದಿ, ಮೊದಲು ರಾಜಧಾನಿಯಲ್ಲಿ ರೋಡ್ ಶೋ ಬಳಿಕ ಐತಹಾಸಿಕವಾಗಿ ಪ್ರಾಮುಖ್ಯವಾಗಿರುವ ಗುರುದ್ವಾರಕ್ಕೆ ತೆರಳಿದರು.

ಅಲ್ಲಿನ ಲ್ಯಾಂಗರ್ ನಲ್ಲಿ ಭಕ್ತರಿಗೆ ಅನ್ನ ಸಂಪರ್ತಣೆ ಮಾಡಿದ್ದಾರೆ. ಅಲ್ಲಿ ಸ್ವತಃ ಅಡುಗೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರಧಾನಿ ಮೋದಿ ಬಳಿಕ ಅಲ್ಲಿನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆ ಬಿಹಾರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರು ಸಿಖ್ ಪೇಟವನ್ನು ಧರಿಸಿ ಸೋಮವಾರ ಸಾಹಿಬ್ ಗುರುದ್ವಾರದಲ್ಲಿ ಆಹಾರ ಸೇವೆಯಲ್ಲಿ ಪಾಲ್ಗೊಂಡರು. ಮೋದಿ ಅವರು ಸ್ಟೀಲ್ ಬಕೆಟ್ ಹಿಡಿದು ಸಿಖ್ಖರಿಗೆ ಆಹಾರ ಬಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಚಪಾತಿ ಲಟ್ಟಿಸಿದ ಮೋದಿ

ಗುರುದ್ವಾರದ ಸಿಖ್ ಸಮುದಾಯದ ಅಡುಗೆ ಹಾಲ್‌ಗೆ ತೆರಳಿದ ಅವರು ಸ್ಟೀಲ್ ಬಕೆಟ್‌ನಲ್ಲಿದ್ದ ಆಹಾರವನ್ನು ಸಾಲಿನಲ್ಲಿ ಕುಳಿತಿದ್ದ ಜನರಿಗೆ ಬಡಿಸಿದರು. ಅಲ್ಲದೆ ಅಡುಗೆ ಕೋಣೆಯಲ್ಲಿ ದಾಲ್ ಹಾಗೂ ಇತರೆ ಖಾದ್ಯ ತಯಾರಿಸುವ ಕಾರ್ಯದಲ್ಲಿಯೂ ನೆರವಾದರು. ಚಪಾತಿ ಕೂಡ ಲಟ್ಟಿಸಿ ಗಮನ ಸೆಳೆದರು. ಮಕ್ಕಳು ಸೇರಿದಂತೆ ಗುರುದ್ವಾರದಲ್ಲಿ ನೆರೆದಿದ್ದ ಜನರ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡರು. ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾದ ದರ್ಬಾರ್ ಸಾಹಿಬ್‌ನಲ್ಲಿ ವಂದನೆ ಸಲ್ಲಿಸಿದರು. ಅಲ್ಲಿ ಕೀರ್ತನೆಯನ್ನು ಆಲಿಸಿದರು. ನಂತರ ಶ್ರೀ ಗುರು ಗೋವಿಂದ್ ಸಿಂಗ್ ಅವರು ಬಳಸುತ್ತಿದ್ದ ಅಪರೂಪದ ಶಸ್ತ್ರಗಳ ದರ್ಶನ ಪಡೆದರು.

ಗುರುದ್ವಾರದಲ್ಲಿ 'ಕರಾಹ್ ಪ್ರಸಾದ' ಸ್ವೀಕರಿಸಿದ ಅವರು, ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಸಿದರು. ಗುರುದ್ವಾರ ಸಮಿತಿಯು ಮೋದಿ ಅವರಿಗೆ 'ಸನ್ಮಾನ ಪತ್ರ' ನೀಡಿದರೆ, ಸಿಖ್ ಬೀಬಿಯರು ಮಾತಾ ಗುಜ್ರಿ ಅವರ ಭಾವಚಿತ್ರ ನೀಡಿದರು.

ಅಂದಹಾಗೆ ಬಿಹಾರ ಪ್ರವಾಸದಲ್ಲಿರುವ ಮೋದಿ ಅವರು, ಇಂದು ಹಾಜಿಪುರ, ಮುಜಾಫರ್‍ಪುರ, ಮತ್ತು ಸರನ್ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!