ಬಾಂಗ್ಲಾದೇಶ ಸಂಸದ ಅಜೀಂ ಹತ್ಯೆ 
ದೇಶ

Bangladesh MP Anwarul Azim Anar: ಕೋಲ್ಕತಾದಲ್ಲಿ ಬಾಂಗ್ಲಾದೇಶ ಸಂಸದನ ಭೀಕರ ಹತ್ಯೆ: ಚರ್ಮ ಸುಲಿದು, ಮಾಂಸ ಕಿತ್ತ ಕ್ರೂರಿಗಳು!

ವೈದ್ಯಕೀಯ ಚಿಕಿತ್ಸೆ ಸಲುವಾಗಿ ಕೋಲ್ಕತಾಗೆ ಆಗಮಿಸಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನರ್ ಅವರ ಹತ್ಯಾ ಪ್ರಕರಣದಲ್ಲಿ ಆಘಾಕರಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಅವರನ್ನು ಹತ್ಯೆ ಮಾಡಿದ ಹಂತಕರು ಅವರ ಚರ್ಮ ಸುಲಿದು, ಮಾಂಸ ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೋಲ್ಕತಾ: ವೈದ್ಯಕೀಯ ಚಿಕಿತ್ಸೆ ಸಲುವಾಗಿ ಕೋಲ್ಕತಾಗೆ ಆಗಮಿಸಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನರ್ ಅವರ ಹತ್ಯಾ ಪ್ರಕರಣದಲ್ಲಿ ಆಘಾಕರಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಅವರನ್ನು ಹತ್ಯೆ ಮಾಡಿದ ಹಂತಕರು ಅವರ ಚರ್ಮ ಸುಲಿದು, ಮಾಂಸ ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.

ಅನ್ವರುಲ್ ಅವರ ದೇಹವನ್ನು ಅಪಾರ್ಟ್‌ಮೆಂಟ್‌ನಲ್ಲಿ ತುಂಡು ತುಂಡಾಗಿ ಕತ್ತರಿಸಿ, ಚರ್ಮ ಸುಲಿಯಲಾಗಿತ್ತು. ಬಳಿಕ ಅನೇಕ ಪ್ಲಾಸ್ಟಿಕ್ ಕವರ್‌ಗಳಲ್ಲಿ ನಗರದಾದ್ಯಂತ ಎಸೆಯಲಾಗಿತ್ತು ಎಂಬುದನ್ನು ತನಿಖೆ ಬಹಿರಂಗಪಡಿಸಿದೆ. ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ, ಬಾಂಗ್ಲಾದೇಶದಿಂದ ವಲಸೆ ಬಂದವರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಮೇ 12ರಂದು ಕೋಲ್ಕತಾದಲ್ಲಿನ ತಮ್ಮ ಸ್ನೇಹಿತ ಗೋಪಾಲ್ ಬಿಸ್ವಾಸ್ ಮನೆಗೆ ಬಂದಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್, ಮೇ 14ರಂದು ನಾಪತ್ತೆಯಾಗಿದ್ದರು. ಬಳಿಕ ಭೀಕರವಾಗಿ ಹತ್ಯೆಯಾಗಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕೋಲ್ಕತಾದಲ್ಲಿ ಅವರ ಶವದ ತುಂಡುಗಳು ಪತ್ತೆಯಾಗಿತ್ತು.

ಸುಪಾರಿ ಹಂತಕರಿಂದ ಕೃತ್ಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ ಬಳಿಕ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಯಶ ಕಂಡಿದ್ದಾರೆ. ಮುಂಬಯಿಯಲ್ಲಿ ವಾಸವಿರುವ ಹವಾಲ್ದಾರ್, ಕೋಲ್ಕತಾದ ಅಪಾರ್ಟ್‌ಮೆಂಟ್‌ನಲ್ಲಿ ಅನ್ವರುಲ್ ಅವರನ್ನು ಕೊಂದು, ದೇಹವನ್ನು ಕತ್ತರಿಸಿದ ಕೃತ್ಯದಲ್ಲಿ ತನ್ನ ಕೈವಾಡದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈ ಭಯಾನಕ ಕೃತ್ಯವನ್ನು ಹೇಗೆ ವ್ಯವಸ್ಥಿತವಾಗಿ ರೂಪಿಸಿ, ಜಾರಿಗೊಳಿಸಲಾಗಿದೆ ಎಂಬ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಂದಿದೆ. ಬಾಂಗ್ಲಾದೇಶ ಮೂಲದ ಅಮೆರಿಕದ ಪ್ರಜೆ ಅಖ್ತರುಜಮಾನ್ ಈ ಹತ್ಯೆಯ ಮಾಸ್ಟರ್‌ಮೈಂಡ್ ಎಂದು ಹವಾಲ್ದಾರ್ ಬಹಿರಂಗಪಡಿಸಿದ್ದಾನೆ. ಅಖ್ತರುಜಮಾನ್ ಆದೇಶದಂತೆ ನಾಲ್ಕು ಮಂದಿ ಇತರೆ ಬಾಂಗ್ಲಾ ಪ್ರಜೆಗಳ ಜತೆ ಸೇರಿ ಸಂಸದನನ್ನು ಕೊಂದಿರುವುದಾಗಿ ಜಿಹಾದ್ ಹವಾಲ್ದಾರ್ ತಿಳಿಸಿದ್ದಾನೆ.

ಚರ್ಮ ಸುಲಿದು ಎದೆ ಬಗೆದ ಕಿರಾತಕರು

ಅನ್ವರುಲ್ ಅವರ ಹತ್ಯೆ ನಂತರದ ಕೃತ್ಯಗಳು ಎದೆನಡುಗಿಸುವಂತಿದ್ದು, ಈ ಬಗ್ಗೆ ಬಂಧಿತ ಆರೋಪಿ ಜಿಹಾದ್ ಹವಾಲ್ದಾರ್ ಮಾಹಿತಿ ನೀಡಿದ್ದಾನೆ. ಅನ್ವರುಲ್ ಅವರನ್ನು ಕೊಂದ ಬಳಿಕ, ತಮ್ಮ ಗುಂಪು ಅವರ ದೇಹದ ಚರ್ಮವನ್ನು ಸುಲಿದು, ಎಲ್ಲ ಮಾಂಸವನ್ನು ಹೊರಗೆ ತೆಗೆದಿತ್ತು. ಅವರ ಗುರುತು ಸಿಗುವ ಯಾವ ಸಾಧ್ಯತೆಯೂ ಇಲ್ಲದಂತೆ ಮಾಡಲು ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಮೂಳೆಗಳನ್ನು ಸಹ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗಿತ್ತು. ಈ ಪ್ಯಾಕೆಟ್‌ಗಳನ್ನು ಅಲ್ಲಿಂದ ಸಾಗಿಸಿ, ಕೋಲ್ಕತಾ ನಗರದ ತುಂಬಾ ಎಸೆಯಲಾಗಿತ್ತು ಎಂದು ಆರೋಪಿ ಜಿಹಾದ್ ಹವಾಲ್ದಾರ್ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಉಸಿರುಗಟ್ಟಿಸಿ ಕೊಲೆ: ಆರೋಪಿ ಮಾಹಿತಿ ನೀಡಿದ ಪೊಲೀಸರು

ಬಾಂಗ್ಲಾ ಸಂಸದನನ್ನು ಮೊದಲು ಉಸಿರುಗಟ್ಟಿಸಿ ಕೊಂದು, ಬಳಿಕ ದೇಹವನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂ ಟೌನ್‌ನ ಖಾಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ರಕ್ತದ ಕಲೆಗಳನ್ನು ಕಂಡಿದ್ದ ಪೊಲೀಸರು, ಒಳಗೆ ಅನೇಕ ಪ್ಲಾಸ್ಟಿಕ್ ತೊಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಇವು ದೇಹದ ಭಾಗಗಳನ್ನು ಎಸೆಯಲು ಬಳಸಿದ್ದ ಬ್ಯಾಗ್‌ಗಳು ಎನ್ನಲಾಗಿದೆ.

ಈಗ ಶವದ ಭಾಗಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಂತೆಯೇ ಬಂಧಿತ ಆರೋಪಿ ಹವಾಲ್ದಾರ್, ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯವನಾಗಿದ್ದು, ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಮುಂಬಯಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆತ, ಎರಡು ತಿಂಗಳ ಹಿಂದೆ ಕೋಲ್ಕತಾಕ್ಕೆ ಬಂದಿದ್ದ. ಏರ್‌ಪೋರ್ಟ್ ಸಮೀಪದ ಹೋಟೆಲ್ ಒಂದರಲ್ಲಿ ವಾಸವಿದ್ದ. ಅನ್ವರುಲ್ ಹತ್ಯೆಗೆ ಅಖ್ತರುಜಮಾನ್ ಐದು ಕೋಟಿ ರೂ ವ್ಯಯಿಸಿದ್ದು, ಅದರಲ್ಲಿ ಸ್ವಲ್ಪ ಭಾಗ ಹವಾಲ್ದಾರ್‌ಗೆ ಸಿಕ್ಕಿತ್ತು ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸ್‌ನ ಹೆಚ್ಚುವರಿ ಕಮಿಷನರ್ (ಡಿಬಿ) ಹರುನ್ ಓರ್ ರಶೀದ್ ತಿಳಿಸಿದ್ದಾರೆ.

ಚಿನ್ನ ಕಳ್ಳಸಾಗಣೆ ಅವ್ಯವಹಾರ; ಪಾರ್ಟರ್ ನಿಂದಲೇ ಸ್ನೇಹಿತನ ಹತ್ಯೆಗೆ ಸುಪಾರಿ?

ಪೊಲೀಸ್ ಮೂಲಗಳ ಸಂಸದ ಅನ್ವರುಲ್ ಅಜೀಂ ಅನರ್ ಮತ್ತು ಅಕ್ತರುಝಾಮಾನ್ ಎಂಬುವವರು ಚಿನ್ನ ಕಳ್ಳ ಸಾಗಣೆ ಮಾಫಿಯಾದಲ್ಲಿ ತೊಡಗಿದ್ದರು. ಅಕ್ತರುಝಾಮಾನ್ ದುಬೈನಿಂದ ಬಾಂಗ್ಲಾದೇಶಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈ ಚಿನ್ನವನ್ನು ಆಡಳಿತಾರೂಢ ಅವಾಮಿ ಲೀಗ್ ಸಂಸದ ಅಜೀಮ್ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಸರಿಯಾದ ಜನರ ಕೈಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದ. ಕಳೆದ ವರ್ಷ ಈ ಚಿನ್ನ ಸಾಗಣೆ ವಿಚಾರದಲ್ಲಿ ಈ ಇಬ್ಬರಿಗೂ ಸಂಘರ್ಷ ಏರ್ಪಟ್ಟಿದ್ದು, ಸಂಸದ ಅನ್ವರುಲ್ ಅಜೀಂ ಅನರ್ ತನಗೆ ದೊಡ್ಡ ಮಟ್ಟದಲ್ಲಿ ಪಾಲು ಬೇಕು ಎಂದು ಕೇಳಿದ್ದ.

ಇದಕ್ಕೆ ಅಕ್ತರುಜ್ಜಮಾನ್ ವಿರೋಧ ವ್ಯಕ್ತಪಡಿಸಿದ್ದ. ಈ ಬೆಳವಣಿಗೆ ಬಳಿಕ ಇಬ್ಹರ ನಡುವೆ ಬಿರುಕು ಮೂಡಿತ್ತು. ಬಳಿಕ ಅನ್ವರುಲ್ ಅಜೀಂ ಅನರ್ ಸುಮಾರು 100 ಕೋಟಿ ರೂ ಮೌಲ್ಯದ ಚಿನ್ನವನ್ನು ಅಕ್ತರುಝಾಮಾನ್ ದುಬೈನಿಂದ ರವಾನೆ ಮಾಡಿದ್ದ. ಆದರೆ ಚಿನ್ನ ಪಡೆದ ಸಂಸದ ಅನ್ವರುಲ್ ಅಜೀಂ ಅನರ್ ಹಣ ಪಾವತಿ ಮಾಡಿರಲಿಲ್ಲ. ಪದೇ ಪದೇ ಕೇಳಿದರೂ ಆತ ಹಣ ನೀಡಿರಲಿಲ್ಲ. ಇದರಿಂದ ಬೇಸತ್ತಿದ್ದ ಅಕ್ತರುಝಾಮಾನ್ ಭಾರತದಲ್ಲಿನ ಕಾರ್ಯಾಚರಣೆಗೆ ಇತರರನ್ನು ನೇಮಿಸಿಕೊಂಡಿದ್ದ. ಅಂತೆಯೇ ಹಣ ನೀಡದ ಅಜೀಂ ವಿರುದ್ಧ ಆಕ್ರೋಶಗೊಂಡಿದ್ದ ಆತ ಕೊಲೆಗೆ ಮುಂದಾಗಿದ್ದ ಎಂದು ತನಿಖಾ ಅಧಿಕಾರಿ ಶಂಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT