ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಗುಜರಾತ್​ನಲ್ಲಿ 3.4 ತೀವ್ರತೆಯ ಭೂಕಂಪನ

ಭೂಕಂಪನದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
Manjula VN
Updated On : 3 Nov 2024, 10:08 am

ಅಹ್ಮದಾಬಾದ್ (ಗುಜರಾತ್​): ಗುಜರಾತ್ ರಾಜ್ಯದ ಕಚ್ ಜಿಲ್ಲೆ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಭೂಕಂಪನದ ಅನುಭವವಾಗಿದೆ. ಇಂದು ಬೆಳಿಗ್ಗೆ ಭೂ ಕಂಪನದ ಅನುಭವವಾದ ತಕ್ಷಣ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಭೂಕಂಪನದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನವು ಇಂದು ಮುಂಜಾನೆ 3.58 ಕ್ಕೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು ಲಖ್ಪತ್‌ನ ಉತ್ತರ-ಈಶಾನ್ಯಕ್ಕೆ 53 ಕಿಮೀ ದೂರದಲ್ಲಿದೆ ಎಂದು ತಿಳಿದ್ದಾರೆ.

Advertisement

Advertisement

ಇದಕ್ಕೂ ಮೊದಲು ಅಕ್ಟೋಬರ್ 27 ರಂದು, ಅಮ್ರೇಲಿ ಜಿಲ್ಲೆಯ ಸವರ್ ಕುಂಡ್ಲಾ ಮತ್ತು ಸಮೀಪದ ಗ್ರಾಮಗಳಲ್ಲಿ 3.7 ತೀವ್ರತೆಯ ಭೂಕಂಪನದ ಸಂಭವಿಸಿತ್ತು.

Also Read

ಗುಜರಾತ್: ಕಚ್ ನಲ್ಲಿ 3.3 ತೀವ್ರತೆಯ ಭೂಕಂಪನ! ಯಾವುದೇ ಹಾನಿ ಇಲ್ಲ

ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (GSDMA) ನೀಡಿರುವ ಮಾಹಿತಿಯ ಪ್ರಕಾರ, ಕಳೆದ 200 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು ಒಂಬತ್ತು ಪ್ರಮುಖ ಭೂಕಂಪಗಳು ಎದುರಾಗಿತ್ತು ಎಂದು ತಿಳಿಸಿದೆ.

2001 ರಲ್ಲಿ ಕಚ್'ನಸ್ಸಿ ಸಂಭವಿಸಿದ್ದ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿ ಭೂಕಂಪವಾಗಿದೆ ಎಂದು ಅದು ಹೇಳಿದೆ.

ಜನವರಿ 26, 2001 ರಂದು, ಗುಜರಾತ್ ಕಚ್‌ನ ಭಚೌ ಬಳಿ 6.9 ತೀವ್ರತೆಯ ಭೂಕಂಪನವಾಗಿತ್ತು, ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿತ್ತು. ಜಿಎಸ್‌ಡಿಎಂಎ ಅಂಕಿಅಂಶಗಳ ಪ್ರಕಾರ ಈ ಭೂಕಂಪದಲ್ಲಿ 13,800 ಜನರು ಬಲಿಯಾಗಿದ್ದರು. ಅಳ್ಲದೆ, 1.67 ಲಕ್ಷ ಜನರು ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement