ಎಸಿ ನೀರನ್ನು ಪವಿತ್ರ ಜಲ ಎಂದು ಭಾವಿಸಿ ಕುಡಿಯುತ್ತಿರುವ ಭಕ್ತರು online desk
ದೇಶ

ದೇವಾಲಯದ ಸಿಬ್ಬಂದಿ ಎಚ್ಚರಿಕೆಗೂ ಡೋನ್ಟ್ ಕೇರ್: ಪವಿತ್ರ ಜಲವೆಂದು ಭಾವಿಸಿ AC ನೀರು ಕುಡಿದ ಭಕ್ತರು!

ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಎಸಿ ನೀರನ್ನು ಪವಿತ್ರ ಜಲವೆಂದು ಭಾವಿಸಿ ಕುಡಿದಿದ್ದಾರೆ.

ಮಥುರಾ: ನಮ್ಮಲ್ಲಿ ಜನ ಮರುಳೋ, ಜಾತ್ರೆ ಮರುಳೋ ಎಂಬ ಮಾತಿದೆ. ಇಂಥಹ ಘಟನೆಗಳನ್ನು ನೋಡಿಯೇ ಈ ಮಾತನ್ನು ಹೇಳಿರಬಹುದು.

ಆಗಿದ್ದಿಷ್ಟು... ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಎಸಿ ನೀರನ್ನು ಪವಿತ್ರ ಜಲವೆಂದು ಭಾವಿಸಿ ಕುಡಿದಿದ್ದಾರೆ. ಈಗ ಅದರ ವಿಡಿಯೋ ವ್ಯಾಪಕವಾಗಿ ವೈರಲ್ ಆಗತೊಡಗಿದೆ. ಈ ವಿಡಿಯೊವನ್ನು ಕಂಡ ನೆಟ್ಟಿಗರು ಜನರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ಹೇಳಿದ್ದಾರೆ.

ಈ ನೀರು ಚರಣಾಮೃತ (ವಿಗ್ರಹದ ಅಭಿಷೇಕದಿಂದ ಬಂದ ನೀರು) ಅಲ್ಲ, ಇದು ಗರ್ಭಗೃಹದಲ್ಲಿ ಅಳವಡಿಸಲಾಗಿರುವ AC ಯಿಂದ ಹೊರಬಿಡಲಾಗುತ್ತಿರುವ ನೀರು ಇದನ್ನು ಯಾರೂ ಸೇವಿಸಬೇಡಿ ಎಂದು ಸ್ವತಃ ದೇವಾಲಯದ ಸಿಬ್ಬಂದಿಯೇ ಮನವಿ ಮಾಡುತ್ತಿದ್ದರೂ ಅದನ್ನು ಕೇಳದೇ ಜನರು AC ನೀರನ್ನು ಪವಿತ್ರ ಜಲವೆಂದು ಭಾವಿಸಿ ತೀರ್ಥದ ರೂಪದಲ್ಲಿ ಕುಡಿದ್ದಾರೆ.

ಇನ್ನೂ ಕೆಲವರು ತಾವು ಕುಡಿಯುವುದಷ್ಟೇ ಅಲ್ಲದೇ ಮನೆಗೆ ಕೊಂಡೊಯ್ಯುವುದಕ್ಕೂ ಹಿಡಿದಿಟ್ಟುಕೊಂಡಿದ್ದಾರೆ. ಇದು ಚರಣಾಮೃತವಲ್ಲ, ಚರಣಾಮೃತ ಬೇಕಾದಲ್ಲಿ ದೇವಾಲಯದ ಒಳಗೆ ನೀಡುತ್ತಾರೆ, ಕೇಳಿ ಅದನ್ನು ಪಡೆಯಿರಿ ಎಂದು ಹಲವು ಬಾರಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರೂ ಭಕ್ತಾದಿಗಳು ಅದಕ್ಕೆ ಕಿವಿಗೊಡದೇ AC ನೀರನ್ನು ಕುಡಿಯುತ್ತಿರುವುದನ್ನು ನೋಡಿ ಬೇಸತ್ತ ಸಿಬ್ಬಂದಿ ಸ್ವತಃ ಈ ದೃಶ್ಯವನ್ನು ಸೆರೆಹಿಡಿದಿದ್ದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆನೆಯ ರಚನೆಯಿಂದ ತೊಟ್ಟಿಕ್ಕುವ ನೀರು "ಚರಣ್ ಅಮೃತ" ಎಂದು ಜನರು ವದಂತಿಗಳನ್ನು ಹಬ್ಬಿಸಿದ್ದಾರೆ ಎಂದು ದೇವಸ್ಥಾನದ ಉಸ್ತುವಾರಿ ಆಶಿಶ್ ಗೋಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ತಪ್ಪು ಕಲ್ಪನೆಯನ್ನು ಜನರು ತಮ್ಮ ಮನಸ್ಸಿನಿಂದ ಹೋಗಲಾಡಿಸಬೇಕು. ಗರ್ಭಗುಡಿಯಲ್ಲಿ ಅಳವಡಿಸಿರುವ ಎಸಿಯಿಂದ ನೀರು ಜಿನುಗುತ್ತದೆ, ಇದು ‘ಚರಣ ಅಮೃತ’ ಅಲ್ಲವೇ ಅಲ್ಲ, ಇದನ್ನು ಜನರು ಅರಿಯಬೇಕು" ಎಂದು ಗೋಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT