ರಾಜ್ ಠಾಕ್ರೆ 
ದೇಶ

ಇನ್ನೂ ಸಿಗದ EC ಅನುಮತಿ; ಶಿವಾಜಿ ಪಾರ್ಕ್ ರ‍್ಯಾಲಿ ರದ್ದುಗೊಳಿಸಿದ MNS

ಶಿವಾಜಿ ಪಾರ್ಕ್ ರ‍್ಯಾಲಿ ಗೆ ಚುನಾವಣಾ ಆಯೋಗ ಇನ್ನೂ ಅನುಮತಿ ನೀಡದ ಹಿನ್ನೆಲೆಯಲ್ಲಿ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಅವರು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನವೆಂಬರ್ 17 ರಂದು ನಿಗದಿಯಾಗಿದ್ದ ರ‍್ಯಾಲಿಯನ್ನು ಶುಕ್ರವಾರ ರದ್ದುಗೊಳಿಸಿದ್ದಾರೆ.

ತಮ್ಮ ಶಿವಾಜಿ ಪಾರ್ಕ್ ರ‍್ಯಾಲಿಗೆ ಚುನಾವಣಾ ಆಯೋಗ ಇನ್ನೂ ಅನುಮತಿ ನೀಡದ ಹಿನ್ನೆಲೆಯಲ್ಲಿ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.

ರ‍್ಯಾಲಿ ಬದಲಾಗಿ, ಎಂಎನ್‌ಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮುಂಬೈ ಮತ್ತು ಥಾಣೆಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವುದಾಗಿ ಠಾಕ್ರೆ ಹೇಳಿದ್ದಾರೆ.

"ನನಗೆ ಇನ್ನೂ ಚುನಾವಣಾ ಆಯೋಗದ ಅನುಮತಿ ಸಿಕ್ಕಿಲ್ಲ ಮತ್ತು ರ‍್ಯಾಲಿಗೆ ಕೇವಲ ಒಂದೂವರೆ ದಿನ ಇದೆ. ಈ ಒಂದೂವರೆ ದಿನದಲ್ಲಿ ರ‍್ಯಾಲಿಗೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟಕರ. ಬದಲಿಗೆ, ನಾನು ಮುಂಬೈ ಮತ್ತು ಥಾಣೆಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ" ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆ(ಯುಬಿಟಿ) ಮತ್ತು ಎಂಎನ್‌ಎಸ್ ನವೆಂಬರ್ 17 ರಂದು ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ರ‍್ಯಾಲಿ ನಡೆಸಲು ಅನುಮತಿ ಕೋರಿದ್ದವು. ಉದ್ದೇಶಿತ ಕಾರ್ಯಕ್ರಮಕ್ಕೆ ಎರಡೂ ಪಕ್ಷಗಳು ಇನ್ನೂ EC ಅನುಮತಿ ಪಡೆದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

Bihar Horror: ಯಜಮಾನನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ, ಗುಪ್ತಾಂಗದಲ್ಲಿ ಜೀವಂತ ಬುಲೆಟ್, ಕಲ್ಲು, ಮರದ ತುಂಡು ಪತ್ತೆ!

SCROLL FOR NEXT