ನವದೆಹಲಿ: ಅದಾನಿ ಗ್ರೂಪ್ ಮತ್ತು ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಭಾರತ ಯುನೈಟೆಡ್ ಸ್ಟೇಟ್ಸ್‌ನಿಂದ ಯಾವುದೇ ಪೂರ್ವ ಸಂವಹನವನ್ನು ಸ್ವೀಕರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ಸ್ಪಷ್ಟಪಡಿಸಿದೆ.
"ಇದು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಯುಎಸ್ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯವಾಗಿದೆ. ಸ್ಥಾಪಿತ ಕಾರ್ಯವಿಧಾನಗಳು ಮತ್ತು ಕಾನೂನು ಮಾರ್ಗಗಳನ್ನು ಅನುಸರಿಸುವ ನಿರೀಕ್ಷೆಯಿದೆ. ಈ ಕುರಿತ ಭಾರತ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿಲ್ಲ" ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.
“ನಾವು ಅಮೆರಿಕ ಸರ್ಕಾರದೊಂದಿಗೆ ಈ ನಿರ್ದಿಷ್ಟ ವಿಷಯದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.
ಸಮನ್ಸ್ ಅಥವಾ ಬಂಧನ ವಾರಂಟ್ ಸೇವೆಗಾಗಿ ವಿದೇಶಿ ಸರ್ಕಾರದ ಯಾವುದೇ ವಿನಂತಿಯು ಪರಸ್ಪರ ಕಾನೂನು ಸಹಾಯದ ಭಾಗವಾಗಿದೆ. ಅಂತಹ ವಿನಂತಿಗಳನ್ನು ಅರ್ಹತೆಯ ಮೇಲೆ ಪರಿಶೀಲಿಸಲಾಗುತ್ತದೆ. ಆದರೆ, ಈ ಪ್ರಕರಣದ ಕುರಿತು ನಾವು ಅಮೆರಿಕ ಕಡೆಯಿಂದ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ” ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.
ಏತನ್ಮಧ್ಯೆ, ಅದಾನಿ ಗ್ರೂಪ್ ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಯಾವುದೇ ಲಂಚದ ಆರೋಪಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.