ಮಲ್ಲಿಕಾರ್ಜುನ ಖರ್ಗೆ 
ದೇಶ

CPWD, CISF ಮತ್ತು TATA ಪ್ರಾಜೆಕ್ಟ್‌ ಅಧಿಕಾರಿಗಳು ನನ್ನ ಕೊಠಡಿಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯಸಭಾಧ್ಯಕ್ಷರಾಗಿರುವ ಧನ್ ಖರ್ ಅವರಿಗೆ ಒತ್ತಾಯಿಸಿದ್ದಾರೆ.

ನವದೆಹಲಿ: ಕೇಂದ್ರ ಲೋಕೋಪಯೋಗಿ ಇಲಾಖೆ (CPWD), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ತಮಗೆ ಮಾಹಿತಿ ನೀಡದೆ ಸಂಸತ್ತಿನ ಕೊಠಡಿಗೆ ಪ್ರವೇಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಖರ್ ಅವರಿಗೆ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್ 28, 2024 ರಂದು, ಸಂಸತ್ ಭವನದಲ್ಲಿ ನನ್ನ ಚೇಂಬರ್ ಕೊಠಡಿ ಸಂಖ್ಯೆ ಜಿ-19 ನ್ನು CPWD, CISF ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ನನಗೆ ಅಥವಾ ನನ್ನ ಕಚೇರಿಗೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಪ್ರವೇಶಿಸಿದ್ದಾರೆ ಎಂದು ತಿಳಿದು ನನಗೆ ತುಂಬಾ ಆಘಾತವಾಗಿದೆ ಎಂದು ಪತ್ರದಲ್ಲಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿರುವ ಖರ್ಗೆ ಹೇಳಿದ್ದಾರೆ.

ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ತಮ್ಮ ದೂರಿಗೆ ಸೂಕ್ತ ಮಹತ್ವ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೊಂದು ಅಸಾಧಾರಣ ಬೆಳವಣಿಗೆ. ಇದು ಸಂಸತ್ತಿನ ಸದಸ್ಯನಾಗಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ನನ್ನ ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕ್ರಮವಾಗಿದೆ, ಈ ಅಕ್ರಮ ಪ್ರವೇಶ ನನಗೆ ಮತ್ತು ನನ್ನ ಸ್ಥಾನಕ್ಕೆ ಅಗೌರವವಾಗಿದ್ದು, ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯಸಭಾಧ್ಯಕ್ಷರಾಗಿರುವ ಧನ್ ಖರ್ ಅವರಿಗೆ ಒತ್ತಾಯಿಸಿದ್ದಾರೆ.

ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ತಮ್ಮ ದೂರಿಗೆ ಸೂಕ್ತ ಮಹತ್ವ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೊಂದು ಅಸಾಧಾರಣ ಬೆಳವಣಿಗೆ. ಇದು ಸಂಸತ್ತಿನ ಸದಸ್ಯನಾಗಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ನನ್ನ ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕ್ರಮವಾಗಿದೆ, ಈ ಅಕ್ರಮ ಪ್ರವೇಶ ನನಗೆ ಮತ್ತು ನನ್ನ ಸ್ಥಾನಕ್ಕೆ ಅಗೌರವವಾಗಿದ್ದು, ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯಸಭಾಧ್ಯಕ್ಷರಾಗಿರುವ ಧನ್ ಖರ್ ಅವರಿಗೆ ಒತ್ತಾಯಿಸಿದ್ದಾರೆ.

ಪ್ರತಿಪಕ್ಷದ ನಾಯಕನ ಘನತೆಗೆ ಧಕ್ಕೆ ತರುವ ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಕ್ರಮಕೈಗೊಳ್ಳಲಾಗುವುದು ಎಂಬ ನಂಬಿಕೆ ಇದೆ. ಇಂತಹ ಪ್ರವೇಶದ ಅಗತ್ಯವಿದ್ದರೆ, ನನ್ನ ಅನುಮತಿಯನ್ನು ಪಡೆಯಬೇಕಿತ್ತು ಮತ್ತು ಪ್ರಸ್ತುತ ನನ್ನ ಕಚೇರಿಯಿಂದ ಯಾರನ್ನಾದರೂ ಸಂಪರ್ಕಿಸಬೇಕಿತ್ತು, ಈ ವಿಷಯದ ಬಗ್ಗೆ ನಿಮ್ಮ ತ್ವರಿತ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇನ್ನೊಂದೆಡೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಇಸ್ರೇಲ್‌ನಲ್ಲಿ ಭಾರತೀಯ ಕಾರ್ಮಿಕರ ನೇಮಕಾತಿಗೆ ಸರ್ಕಾರವು ಅನುಕೂಲ ಮಾಡಿಕೊಟ್ಟಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಸುಮಾರು 15,000 ಭಾರತೀಯ ಉದ್ಯೋಗಿಗಳನ್ನು ಇಸ್ರೇಲ್‌ಗೆ ಕಳುಹಿಸಲಾಗುತ್ತಿದೆ. ಈ ಹಿಂದೆ, ಅನೇಕ ಭಾರತೀಯ ಯುವಕರು ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೋಗಲು ಹಲವು ಏಜೆಂಟ್ ಗಳಿಂದ ವಂಚನೆಗೊಳಗಾಗಿದ್ದರು. ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು ಮೋದಿ ಸರ್ಕಾರದ ಯುವ ವಿರೋಧಿ ನೀತಿಗಳಾಗಿವೆ ಎಂದು ಆರೋಪಿಸಿದ್ದಾರೆ.

ಪ್ರೆಸ್ ಕೌನ್ಸಿಲ್ ಕಾನೂನನ್ನು ಪರಿಶೀಲಿಸಲು ದುಬೆ ಸಮಿತಿ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂವಹನ ಮತ್ತು ಐಟಿ ಸಂಸದೀಯ ಸ್ಥಾಯಿ ಸಮಿತಿಯು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆಯನ್ನು ಪರಿಶೀಲಿಸುತ್ತದೆ ಮತ್ತು ಪ್ರಸಾರ ಕಾನೂನುಗಳು ಮತ್ತು ಸೆನ್ಸಾರ್ ಮಂಡಳಿಯನ್ನು ಪರಿಶೀಲಿಸುತ್ತದೆ. ಸೆಪ್ಟೆಂಬರ್ 26 ರಂದು ಮರುಸಂಘಟಿಸಲಾಯಿತು ಮತ್ತು ದುಬೆ ಅದರ ಅಧ್ಯಕ್ಷರಾಗಿ ನೇಮಕಗೊಂಡರು. ಈ ಸಮಿತಿಯು ನಕಲಿ ಸುದ್ದಿ, ಪತ್ರಕರ್ತರ ಸ್ಥಿತಿ, ಬ್ರಿಟಿಷ್ ಮತ್ತು ಯುರೋಪಿಯನ್ ಒಕ್ಕೂಟದ ಹೊಸ ಆನ್‌ಲೈನ್ ಮಾಧ್ಯಮ ಕಾನೂನುಗಳು, ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದದಿಂದ ಐಟಿಗೆ ಉಂಟಾದ ನಷ್ಟ, ಪತ್ರಿಕೆಗಳ ಸ್ಥಿತಿ, ಪ್ರಸಾರದ ಕಾನೂನುಗಳು, ಹಕ್ಕುಸ್ವಾಮ್ಯ ಕಾಯಿದೆಗಳನ್ನು ಪರಿಶೀಲಿಸುತ್ತದೆ. ಸೆನ್ಸಾರ್ ಮಂಡಳಿ, ಚಲನಚಿತ್ರ ಕಲಾವಿದರ ಸ್ಥಿತಿಗತಿ, ನಮ್ಮ ಸಮಿತಿಯು ಪ್ರೆಸ್ ಕೌನ್ಸಿಲ್ ಆಕ್ಟ್ ಅನ್ನು ಸಹ ಪರಿಶೀಲಿಸುತ್ತದೆ ಎಂದು ದುಬೆ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT