ಹಿಂದಿ ಬಿಗ್ ಬಾಸ್ 
ದೇಶ

Bigg Boss 18: ಕತ್ತೆಯನ್ನು ಹೊರಹಾಕುವಂತೆ ಸಲ್ಮಾನ್ ಖಾನ್ ಗೆ PETA ಆಗ್ರಹ!

ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 18ರ ಆವೃತ್ತಿಯಲ್ಲಿ 19ನೇ ಸ್ಪರ್ಧಿಯಾಗಿ ಗಧ್‌ರಾಜ್ ಆಗಿ ಕತ್ತೆಯನ್ನು ಪರಿಚಯಿಸಲಾಗಿದೆ.

ಮುಂಬೈ: ನಿಮ್ಮ ಪ್ರಭಾವ ಬಳಸಿ ಬಿಗ್ ಬಾಸ್ 18 ರ ಸೆಟ್‌ನಿಂದ ಕತ್ತೆಯನ್ನು ಹೊರಹಾಕುವಂತೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(PETA) ಇಂಡಿಯಾ ಬುಧವಾರ ಆಗ್ರಹಿಸಿದೆ.

ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 18 ರ ಆವೃತ್ತಿಯಲ್ಲಿ 19ನೇ ಸ್ಪರ್ಧಿಯಾಗಿ ಗಧ್‌ರಾಜ್ ಆಗಿ ಕತ್ತೆಯನ್ನು ಪರಿಚಯಿಸಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ PETA ಇಂಡಿಯಾ, ಸಲ್ಮಾನ್ ಖಾನ್‌ಗೆ ಪತ್ರ ಬರೆದು, ಕತ್ತೆಯ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕರ ಕಳವಳವನ್ನು ಎತ್ತಿ ತೋರಿಸಿದೆ.

"ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಸಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಅವರ ಕಳವಳಗಳನ್ನು ನಿರ್ಲಕ್ಷಿಸಬಾರದು" ಎಂದು ಪೇಟಾ ಹೇಳಿದೆ.

"ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ತಪ್ಪಿಸಲು, ತಮ್ಮ ಪ್ರಭಾವ ಬಳಿಸಿ, ಕತ್ತೆಯನ್ನು ಹೊರಹಾಕುವಂತೆ ಪ್ರದರ್ಶನದ ನಿರ್ಮಾಪಕರಿಗೆ ಹೇಳಿ ಎಂದು" ಪೇಟಾ ಪ್ರತಿನಿಧಿ ಶೌರ್ಯ ಅಗರವಾಲ್ ಅವರು ಸಲ್ಮಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

SCROLL FOR NEXT