ರಾಜನಂದಗಾಂವ್: ಸೋಮವಾರದಿಂದ ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಛತ್ತೀಸ್‌ಗಢದ ರಾಜನಂದಗಾಂವ್ ಮೂಲದ ಹದಿನೇಳು ವರ್ಷದ ಬಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹುಸಿ ಬಾಂಬ್ ಬೆದರಿಕೆಯಿಂದಾಗಿ
ಶಾಲೆ ಬಿಟ್ಟ ಬಾಲಕ, ತನ್ನ ಸ್ನೇಹಿತನ ಹೆಸರಿನಲ್ಲಿದ್ದ ವಿವಾದಿತ ನಕಲಿ ಎಕ್ಸ್ ಖಾತೆ ಮೂಲಕ ಬೆದರಿಕೆ ಹಾಕಿದ್ದಾನೆ.
ಮುಂಬೈ ಪೊಲೀಸರು ಬಾಲಕ ಮತ್ತು ಆತನ ತಂದೆಯನ್ನು ಬುಧವಾರ ವಿಚಾರಣೆಗೆ ಕರೆದಿದ್ದರು. ಬಾಲಕನನ್ನು ವಶಕ್ಕೆ ತೆಗೆದುಕೊಂಡು ರಿಮ್ಯಾಂಡ್ ಹೋಮ್‌ಗೆ ಕರೆದೊಯ್ಯಲಾಗಿದೆ. ಆತನ ತಂದೆಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಕಳೆದ ಮೂರು ದಿನಗಳಲ್ಲಿ ಸುಮಾರು 19 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಇದು ಕೆಲವು ವಿಮಾನಗಳ ವಿಳಂಬಕ್ಕೆ, ಡೈವೆರ್ಟ್ ಗೆ ಮತ್ತು ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿತ್ತು.
ಬುಧವಾರ ನಾಲ್ಕು ಇಂಡಿಗೋ ವಿಮಾನಗಳು, ಎರಡು ಸ್ಪೈಸ್‌ಜೆಟ್ ವಿಮಾನಗಳು ಮತ್ತು ಆಕಾಶ ಏರ್‌ನ ಒಂದು ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಹುಸಿ ಬಾಂಬ್ ಬೆದರಿಕೆಯಿಂದಾಗಿ ರಿಯಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿತ್ತು.