ಉದಯನಿಧಿ ಸ್ಟಾಲಿನ್ 
ದೇಶ

DMK ಇತಿಹಾಸದಲ್ಲೇ ಮೊದಲು: ಸಂಪ್ರದಾಯ ಮುರಿದು ದೀಪಾವಳಿ ಹಬ್ಬದ ಶುಭಾಶಯ ಕೋರಿದ Udhayanidhi Stalin

ದಿವಂಗತ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯಿಂದ ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವರೆಗೂ ಯಾವುದೇ ಡಿಎಂಕೆ ನಾಯಕ ಕೂಡ ಹಬ್ಬಕ್ಕೆ ಶುಭ ಕೋರಿರಲಿಲ್ಲ.

ಚೆನ್ನೈ: ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ 'ದೀಪಾವಳಿ ಹಬ್ಬದ ಶುಭಾಶಯ' ಕೋರುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ತಮಿಳುನಾಡಿನ ಆಡಳಿತರಾಢ DMK ಪಕ್ಷದ ಇತಿಹಾಸದಲ್ಲೇ ಮೊದಲು ಎಂಬಂತೆ ಪಕ್ಷದ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ 'ದೀಪಾವಳಿ ಹಬ್ಬದ ಶುಭಾಶಯ' ಕೋರಿದ್ದಾರೆ.

ಹಬ್ಬಕ್ಕೆ ಶುಭ ಕೋರುವುದು ಎಲ್ಲ ರಾಜಕೀಯ ನಾಯಕರ ಸಾಮಾನ್ಯ ನಡೆಯೇ ಆದರೂ, ಇದು ಡಿಎಂಕೆ ಪಕ್ಷದಲ್ಲಿ ಅತಿ ಅಪರೂಪದ ನಡೆಯಾಗಿದೆ.

ಕಾರಣ ದಿವಂಗತ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯಿಂದ ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವರೆಗೂ ಯಾವುದೇ ಡಿಎಂಕೆ ನಾಯಕ ಕೂಡ ಹಬ್ಬಕ್ಕೆ ಶುಭ ಕೋರಿರಲಿಲ್ಲ. ಡಿಎಂಕೆಯ ದಿವಂಗತ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಸೇರಿದಂತೆ ಡಿಎಂಕೆ ನಾಯಕರು ತಮ್ಮ ವೈಚಾರಿಕ ನಂಬಿಕೆಗಳಿಗೆ ಅನುಗುಣವಾಗಿ ಈವರೆಗೂ ದೀಪಾವಳಿಯಂದು ಜನರಿಗೆ ಶುಭಾಶಯ ಕೋರಿರಲಿಲ್ಲ.

ಡಿಎಂಕೆ ನಾಯಕರು ಕರುಣಾನಿಧಿ ಅವರು ಆರಂಭಿಸಿದ್ದ ಈ ನಿಯಮವನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದರು. ಇದೀಗ ಈ ಸಂಪ್ರದಾಯನ್ನು ಉದಯನಿಧಿ ಸ್ಟಾಲಿನ್ ಮುರಿದಿದ್ದಾರೆ.

ಶನಿವಾರದಂದು ಚೆನ್ನೈನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ, ಪಕ್ಷದ ಪ್ಲಾಟಿನಂ ಜುಬಿಲಿ ಆಚರಣೆ ಸಂದರ್ಭದಲ್ಲಿ ಬೆಂಬಲಿಗರಿಗೆ ತಮ್ಮ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ, ಉದಯನಿಧಿ ಅವರು "ದೀಪ ಒಲಿ ತಿರುನಾಳ್" ಗಾಗಿ ಜನರಿಗೆ ಶುಭಾಶಯ ಕೋರಿದ್ದು, "ನಮ್ಮ (ಡಿಎಂಕೆ) ಪ್ಲಾಟಿನಂ ಜುಬಿಲಿ ಆಚರಣೆಗಳಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ; ಅಂತೆಯೇ ನಂಬುವ ಮತ್ತು ಆಚರಿಸುವವರಿಗೆ ದೀಪ ಒಲಿ ತಿರುನಾಳ್ ಶುಭಾಶಯಗಳು" ಎಂದು ಅವರು ಹೇಳಿದರು.

'ದ್ರಾವಿಡವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ತಮಿಳುನಾಡು ತಮಿಳುನಾಡು ಆಗಿಯೇ ಉಳಿಯುತ್ತದೆ. ನಮ್ಮ ಕಪ್ಪು ಮತ್ತು ಕೆಂಪು (ಡಿಎಂಕೆ) ಧ್ವಜ ಮತ್ತು ಡಿಎಂಕೆ ಕಾರ್ಯಕರ್ತರು ಇರುವವರೆಗೂ ಯಾರೂ ತಮಿಳುನಾಡು ಮತ್ತು ದ್ರಾವಿಡಂ ಅನ್ನು ಮುಟ್ಟಲೂ ಸಾಧ್ಯವಿಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ಶುಭ ಕೋರುವುದರಲ್ಲೂ ವ್ಯಂಗ್ಯ

ಇನ್ನು ಸ್ಟಾಲಿನ್ ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದಾರೆಯಾದರೂ ಅದರಲ್ಲೂ ವ್ಯಂಗ್ಯ ಮಾಡಿದ್ದಾರೆ. "ನಂಬಿಕೆ ಹೊಂದಿರುವವರಿಗೆ" ದೀಪಾವಳಿ ಶುಭಾಶಯಗಳು ಎಂದು ಹೇಳುವ ಮೂಲಕ ಮತ್ತೆ ಬಿಜೆಪಿಯ ಕಾಲೆಳೆದಿದ್ದಾರೆ. ಇದು ವಿರೋಧ ಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ದೀಪಾವಳಿ ಮತ್ತು ವಿನಾಯಕ ಚತುರ್ಥಿ ಸೇರಿದಂತೆ ಹಿಂದೂ ಹಬ್ಬಗಳಂದು ಜನರಿಗೆ ಶುಭ ಹಾರೈಸುತ್ತಿರಲಿಲ್ಲ. ಡಿಎಂಕೆಯನ್ನು ಬಿಜೆಪಿ ಗುರಿಯಾಗಿಸುತ್ತಿದೆ.

ಬಿಜೆಪಿ ಆಕ್ರೋಶ

ಇನ್ನು ಉದಯನಿಧಿ ಸ್ಟಾಲಿನ್ ಶುಭ ಕೋರಿರುವ ವಿಚಾರಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ನಾರಯಣನ್ ತಿರುಪತಿ, 'ನಂಬಿಕೆ ಇಲ್ಲದವರಿಗೆ ನರಕಾಸುರನಂತೆ ಬಾಳಲು ಶುಭಾಶಯಗಳು' ಎಂದು ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT