ಜೈಪುರ: 'I Love you ಹೇಳಿದ್ರೆ ಮಾತ್ರ ರೀಚಾರ್ಜ್ ಮಾಡ್ತೇನೆ' ಎಂದ ಅಂಗಡಿ ಮಾಲೀಕನಿಗೆ ವಿದ್ಯಾರ್ಥಿನಿಯರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ದಿದ್ವಾನಾದಲ್ಲಿ ಈ ಘಟನೆ ನಡೆದಿದ್ದು, ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡುವುದಾಗಿ ಹೇಳಿದ ಅಂಗಡಿ ಮಾಲೀಕನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಹುಡುಗಿಯರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಶಾಲಾ ವಿದ್ಯಾರ್ಥಿನಿಯರು ಮೊಬೈಲ್ ರೀಚಾರ್ಜ್ ಮಾಡಿಸಲೆಂದು ಇಲ್ಲಿನ ಮೊಬೈಲ್ ಶಾಪ್‌ಗೆ ಹೋಗಿದ್ದು, ಈ ವೇಳೆ ಅಂಗಡಿ ಮಾಲೀಕ 'ಐ ಲವ್ ಯು' ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡಿಕೊಡುವುದಾಗಿ ಅವರನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ಹುಡುಗಿಯರು, ಆತನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸ್ಥಳೀಯರು ಈ ಘಟನೆಯ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೆಪ್ಟೆಂಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.