ನವದೆಹಲಿ: 10 ವರ್ಷಗಳ ಹಿಂದೆ ಮಾಡಿಸಿದ್ದ ಆಧಾರ್ ಕಾರ್ಡ್ ಗಳ ಅವಧಿ ಸೆ.14 ರಂದು ಮುಕ್ತಾಯಗೊಳ್ಳಲಿದ್ದು, ಮರುನವೀಕರಣ ಮಾಡಿಸಬೇಕಾಗುತ್ತದೆ.
ಮರುನವೀಕರಣ ಮಾಡಿಸದೇ 10 ವರ್ಷಗಳಾಗಿದ್ದಲ್ಲಿ, ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳ ಪುರಾವೆಗಳನ್ನು ನೀಡಿ ಆಧಾರ್ ನ್ನು ಮರು ನವೀಕರಣ ಮಾಡಿಸಬೇಕಾಗುತ್ತದೆ. ಇದಕ್ಕಾಗಿ UIDAI ಸೆ.14 ವರೆಗೆ ಗಡುವು ನೀಡಿದೆ. ಸೆ.14 ರ ಬಳಿಕ ಆಧಾರ್ ಮರುನವೀಕರಣಕ್ಕೆ 50 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆಧಾರ್ ದೃಢೀಕರಣವು ಜನಸಂಖ್ಯಾ ಮಾಹಿತಿ ಅಥವಾ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆಯನ್ನು ಅದರ ಪರಿಶೀಲನೆಗಾಗಿ UIDAI ನ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿ (CIDR) ಗೆ ಸಲ್ಲಿಸುವ ಪ್ರಕ್ರಿಯೆಯಾಗಿದೆ. UIDAI ತನ್ನೊಂದಿಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಲ್ಲಿಸಿದ ವಿವರಗಳ ನಿಖರತೆಯನ್ನು ಪರಿಶೀಲಿಸುತ್ತದೆ.
ಉಚಿತವಾಗಿ ಆಧಾರ್ ಮರುನವೀಕರಣದ ಹಂತಗಳ ಬಗ್ಗೆ ಮಾಹಿತಿ ಹೀಗಿದೆ...
ಹಂತ 1: myaadhaar.uidai.gov.in ಗೆ ಹೋಗಿ ಮತ್ತು ನಿಮ್ಮ ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಬಳಸಿಕೊಂಡು ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಪ್ರೊಫೈಲ್‌ನಲ್ಲಿ ಪ್ರದರ್ಶಿಸಲಾದ ಗುರುತು ಮತ್ತು ವಿಳಾಸ ವಿವರಗಳನ್ನು ಪರಿಶೀಲಿಸಿ.
ಹಂತ 3: ವಿವರಗಳು ಸರಿಯಾಗಿದ್ದರೆ, 'ಮೇಲಿನ ವಿವರಗಳು ಸರಿಯಾಗಿವೆ ಎಂದು ನಾನು ದೃಢೀಕರಿಸುತ್ತೇನೆ ಎಂಬ' ಟ್ಯಾಬ್ ನ್ನು ಕ್ಲಿಕ್ ಮಾಡಿ.
ಹಂತ 4: ಡ್ರಾಪ್-ಡೌನ್ ಮೆನುಗಳಿಂದ ನೀವು ಸಲ್ಲಿಸಲು ಬಯಸುವ ಗುರುತು ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆಮಾಡಿ.
ಹಂತ 5: ಪ್ರತಿ ಫೈಲ್ 2 MB ಗಿಂತ ಕಡಿಮೆ ಗಾತ್ರದಲ್ಲಿರುವುದನ್ನು ಮತ್ತು JPEG, PNG ಅಥವಾ PDF ಫಾರ್ಮ್ಯಾಟ್‌ನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡು, ಆಯ್ದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
ಹಂತ 6: ನಿಮ್ಮ ಆಧಾರ್ ವಿವರಗಳನ್ನು ನವೀಕರಿಸಲು ಪರಿಶೀಲಿಸಿ ಮತ್ತು ಸಲ್ಲಿಸಿ.