ಸುಮಿ ಬೋರಾ 
ದೇಶ

2,200 ಕೋಟಿ ಆನ್‌ಲೈನ್ ಟ್ರೇಡಿಂಗ್ ಹಗರಣ: ಅಸ್ಸಾಂ ನಟಿ ಮತ್ತು ಅವರ ಪತಿ ಬಂಧನ

ಈ ಇಬ್ಬರೂ ದಂಪತಿಗಳು ಕಳೆದ 10 ದಿನಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಇದೀಗ, ಅವರು ದಿಬ್ರುಗಢದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಗುವಾಹಟಿ: 2,200 ಕೋಟಿ ರೂಪಾಯಿ ಬೃಹತ್ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಸ್ಸಾಂನ ನಟಿ ಮತ್ತು ನೃತ್ಯ ಸಂಯೋಜಕಿ ಸುಮಿ ಬೋರಾ ಹಾಗೂ ಅವರ ಪತಿ, ಛಾಯಾಗ್ರಾಹಕ ತಾರ್ಕಿಕ್ ಬೋರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

"ಈಗ ಅವರ ಆಟ ಮುಗಿದಿದೆ. ಎಸ್‌ಟಿಎಫ್ ತಂಡಕ್ಕೆ ಅಭಿನಂದನೆಗಳು” ಎಂದು ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅವರು ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಇಬ್ಬರೂ ದಂಪತಿಗಳು ಕಳೆದ 10 ದಿನಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಇದೀಗ, ಅವರು ದಿಬ್ರುಗಢದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅವರನ್ನು ಎಸ್‌ಟಿಎಫ್ ವಶಕ್ಕೆ ಪಡೆದುಕೊಂಡಿದೆ.

ಪೊಲೀಸರು ಆರಂಭದಲ್ಲಿ 22 ವರ್ಷದ ಕಿಂಗ್‌ಪಿನ್ ಬಿಶಾಲ್ ಫುಕನ್ ಮತ್ತು ಅವರ ಸಹಚರ ಸ್ವಪ್ನನಿಲ್ ದಾಸ್ ಅವರನ್ನು ಬಂಧಿಸುವ ಮೂಲಕ ಹಗರಣವನ್ನು ಭೇದಿಸಿದ್ದರು. ನಂತರ, ತಾರ್ಕಿಕ್ ಅವರ ಸಹೋದರ ಅಮ್ಲಾನ್ ಬೋರಾಹ್ ಸೇರಿದಂತೆ ಅನೇಕರನ್ನು ಸಹ ಬಂಧಿಸಲಾಯಿತು.

ರಾಜಸ್ಥಾನದಲ್ಲಿ ನಡೆದ ತನ್ನ ಅದ್ದೂರಿ ಮದುವೆಯಲ್ಲಿ ಸುಮಿ ಬೋರಾ ಅವರು ಫುಕನ್‌ನಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಫುಕನ್ ಬಂಧನದ ಬಳಿಕ ಸುಮಿ ಬೋರಾ ಮತ್ತು ಅವರ ಪತಿ ತಾರ್ಕಿಕ್ ಬೋರಾ ತಲೆಮರೆಸಿಕೊಂಡಿದ್ದರು. ಬುಧವಾರ, ತಾವು ಪೊಲೀಸರಿಗೆ ಶರಣಾಗುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಸುಮಿ ಬೋರಾ ಘೋಷಿಸಿದ್ದರು. “ತಾವು ಯಾವುದೇ ಹಣಕಾಸಿನ ವಂಚನೆಯಲ್ಲಿ ಭಾಗಿಯಾಗಿಲ್ಲ. ಮಾಧ್ಯಮಗಳ ಪ್ರಯೋಗಕ್ಕೆ ತಾವು ಬಲಿಪಶುಗಳಾಗಿದ್ದೇವೆ” ಎಂದು ಸುಮಿ ಬೋರಾ ಹೇಳಿಕೊಂಡಿದ್ದಾರೆ.

“ಫುಕನ್ ಮತ್ತು ಆತನ ಸಹಚರರು 60 ದಿನಗಳಲ್ಲಿ 30% ಲಾಭ ಬರುವಂತೆ ಮಾಡಿಕೊಡುತ್ತೇವೆಂದು ಅಮಿಷವೊಡ್ಡಿ ತಮ್ಮ ನಕಲಿ ಷೇರು ಮಾರುಕಟ್ಟೆಯಲ್ಲಿ ಜನರು ಹೂಡಿಕೆ ಮಾಡುವಂತೆ ಮಾಡಿದ್ದರು. ಆರಮಭದಲ್ಲಿ ಸಣ್ಣ ಪ್ರಮಾಣದ ಹೂಡಿಕೆಗಳಿಗೆ ಲಾಭ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದರು. ದೊಡ್ಡ ಮೊತ್ತದ ಹೂಡಿಕೆಗಳನ್ನು ಪಡೆದಿಕೊಂಡು, ಸುಮಾರು 1,500ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ. ಅವರಾರಿಗೂ ಹಣವನ್ನು ಹಿಂದುರುಗಿಸಿಲ್ಲ. ಬರೋಬ್ಬರಿ 2,200 ಕೋಟಿ ರೂ. ಹಣವನ್ನು ವಂಚಿಸಲಾಗಿದೆ” ಎಂಬುದು ತನಿಖೆ ಸಮಯದಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT