ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಪುಟ್ಟ ಅತಿಥಿಯ ಆಗಮನವಾಗಿದೆ. ಅದನ್ನು ಪ್ರಧಾನಿಯವರು ಪ್ರೀತಿಯಿಂದ ಅಪ್ಪಿ ಮುದ್ದಾಡಿ ಕೊರಳಿಗೆ ಹೂವಿನ ಹಾರ, ಪೂಜೆ ಮಾಡಿ ಶಾಲು ಹಾಕಿ ಬರಮಾಡಿಕೊಂಡಿದ್ದಾರೆ.
ಅದು ಬೇರೆ ಯಾರೂ ಅಲ್ಲ, ಪುಟ್ಟ ಕರು, ಅದನ್ನು ನೋಡಿದರೆ ಎಂಥವರಿಗೂ ಒಂದು ಸಾರಿ ಅಪ್ಪಿ ಮುದ್ದಾಡಬೇಕು ಎನಿಸಬಹುದು.
ದೆಹಲಿಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿದ್ದ ಹಸು ಕರು ಹಾಕಿದ್ದು ಕಂದು ಬಣ್ಣದ ಕರುವಿನ ಹಣೆಯ ಮೇಲೆ ಬಿಳಿಯ ಬೆಳಕಿನ ಗುರುತು ಇದೆ. ಹೀಗಾಗಿ ಪ್ರಧಾನಿಯವರು ಕರುವಿಗೆ ಪ್ರೀತಿಯಿಂದ 'ದೀಪಜ್ಯೋತಿ' ಎಂದು ಹೆಸರಿಟ್ಟಿದ್ದಾರೆ.