ರಫೇಲ್ ಫೈಟರ್ ಜೆಟ್ 
ದೇಶ

26 Rafale Marine fighter jet ಖರೀದಿ: ಫ್ರಾನ್ಸ್ ಜೊತೆಗಿನ ಒಪ್ಪಂದಕ್ಕೆ ಭಾರತ ಅನುಮೋದನೆ

ಒಪ್ಪಂದವು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಒಳಗೊಂಡಿರುತ್ತದೆ.

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಭದ್ರತಾ ಕುರಿತ ಸಂಪುಟ ಸಮಿತಿ (CCS) ಭಾರತದ ಅತಿದೊಡ್ಡ ಯುದ್ಧ ವಿಮಾನ ಒಪ್ಪಂದಕ್ಕೆ ಅನುಮೋದನೆ ನೀಡಿದ್ದು, ಫ್ರಾನ್ಸ್‌ನಿಂದ 63,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 26 ರಫೇಲ್ ಸಾಗರ ಯುದ್ಧ ವಿಮಾನ ಖರೀದಿಸಲು ಭಾರತ ಮಹತ್ವದ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಈ ಒಪ್ಪಂದವನ್ನು ಫ್ರಾನ್ಸ್‌ನೊಂದಿಗಿನ ಸರ್ಕಾರ ಒಪ್ಪಂದದಡಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಸರ್ಕಾರಿ ಮೂಲಗಳು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿವೆ. ಒಪ್ಪಂದವು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಒಳಗೊಂಡಿರುತ್ತದೆ.

ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ ಮತ್ತು ಹೊಣೆಗಾರಿಕೆಯನ್ನು ಸರಿದೂಗಿಸುವ ಬಾಧ್ಯತೆಗಳ ಅಡಿಯಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್ ನ್ನು ಸಹ ಒಳಗೊಂಡಿದೆ.

ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಐದು ವರ್ಷಗಳ ನಂತರ ರಫೇಲ್ ಎಂ ಜೆಟ್‌ಗಳ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಫೈಟರ್‌ಗಳನ್ನು ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ ಎಸ್ ವಿಕ್ರಾಂತ್‌ನಲ್ಲಿ ನಿಯೋಜಿಸಲಾಗುವುದು ಮತ್ತು ನೌಕಾಪಡೆಯ ಅಸ್ತಿತ್ವದಲ್ಲಿರುವ ಮಿಗ್-29ಕೆ ಯುದ್ಧ ವಿಮಾನಗಳಿಗೆ ಪೂರಕವಾಗಿರುತ್ತವೆ. ಭಾರತೀಯ ವಾಯುಪಡೆ (IAF) ಈಗಾಗಲೇ ಅಂಬಾಲಾ ಮತ್ತು ಹಶಿಮಾರಾದಲ್ಲಿರುವ ತನ್ನ ನೆಲೆಗಳಲ್ಲಿ 36 ರಫೇಲ್ ಜೆಟ್‌ಗಳನ್ನು ನಿರ್ವಹಿಸುತ್ತಿದೆ.

ಹೊಸ ರಫೇಲ್ ಮೆರೈನ್ ಒಪ್ಪಂದವು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಲ್ಲಿ ವೈಮಾನಿಕ ಇಂಧನ ತುಂಬುವ ವ್ಯವಸ್ಥೆಯನ್ನು ನವೀಕರಿಸುವುದು ಸೇರಿದೆ. ಸುಮಾರು 10 ಭಾರತೀಯ ವಾಯುಪಡೆಯ ರಫೇಲ್ ವಿಮಾನಗಳು ಇತರ ವಿಮಾನಗಳಿಗೆ ಮಧ್ಯ-ಗಾಳಿಯಲ್ಲಿ ಇಂಧನ ತುಂಬಲು ಅವಕಾಶವಿರುತ್ತದೆ, ಹೀಗಾಗಿ ಅವುಗಳ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT