ಸಂಗ್ರಹ ಚಿತ್ರ 
ದೇಶ

ಉಗ್ರ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ತಾಯಿ ಸೇರಿ ಕಾಶ್ಮೀರದ ಪಾಕಿಸ್ತಾನಿ ಮಹಿಳೆಯರು ಗಡಿಪಾರು!

ಗಡೀಪಾರು ಮಾಡಲಾದವರಲ್ಲಿ ಹೆಚ್ಚಿನವರು ಮಾಜಿ ಉಗ್ರರ ಪತ್ನಿಯರು ಮತ್ತು ಮಕ್ಕಳಾಗಿದ್ದು, ಅವರು 2010 ರ ಮಾಜಿ ಉಗ್ರರಿಗೆ ಪುನರ್ವಸತಿ ನೀತಿಯಡಿಯಲ್ಲಿ ಕಣಿವೆಗೆ ಮರಳಿದ್ದರು.

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರದಾಳಿ ಬೆನ್ನಲ್ಲೇ ಭಾರತ ಸರ್ಕಾರ ಕೈಗೊಂಡಿರುವ ಗಡಿಪಾರು ನಿರ್ಧಾರದಿಂದಾಗಿ ಪಾಕಿಸ್ತಾನ ಮೂಲದ ಪ್ರಜೆಗಳನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಮಂಗಳವಾರ 60 ಪಾಕಿಸ್ತಾನಿ ಪ್ರಜೆಗಳ ಗಡೀಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ಥಳೀಯರಾಗಿದ್ದು, ಅವರಲ್ಲಿ ಒಬ್ಬರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪೊಲೀಸ್ ಅಧಿಕಾರಿಯ ತಾಯಿ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರೆಲ್ಲರನ್ನೂ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿ ಪಂಜಾಬ್‌ಗೆ ಬಸ್‌ಗಳಲ್ಲಿ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ವಾಘಾ ಗಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.

ಗಡೀಪಾರು ಮಾಡಲಾದವರಲ್ಲಿ ಹೆಚ್ಚಿನವರು ಮಾಜಿ ಉಗ್ರರ ಪತ್ನಿಯರು ಮತ್ತು ಮಕ್ಕಳಾಗಿದ್ದು, ಅವರು 2010 ರ ಮಾಜಿ ಉಗ್ರರಿಗೆ ಪುನರ್ವಸತಿ ನೀತಿಯಡಿಯಲ್ಲಿ ಕಣಿವೆಗೆ ಮರಳಿದ್ದರು. ಈ ಪೈಕಿ 36 ಜನರು ಶ್ರೀನಗರ, ಬಾರಾಮುಲ್ಲಾ ಮತ್ತು ಕುಪ್ವಾರಾದಲ್ಲಿ ತಲಾ ಒಂಬತ್ತು ಜನರು ವಾಸಿಸುತ್ತಿದ್ದಾರೆ. ಅಲ್ಲದೆ ಬುಡ್ಗಾಮ್‌ನಲ್ಲಿ ನಾಲ್ವರು ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 2022 ರಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಿಧನರಾದ ವಿಶೇಷ ಪೊಲೀಸ್ ಅಧಿಕಾರಿ ಮುದಾಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಕೂಡ ಗಡಿಪಾರು ಮಾಡಲ್ಪಟ್ಟವರಲ್ಲಿ ಒಬ್ಬರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಂದಹಾಗೆ ಮುದಾಸಿರ್ ಅವರು ವಿದೇಶಿ ಭಯೋತ್ಪಾದಕರ ಗುಂಪನ್ನು ತಡೆದ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಹಸ್ಯ ಕಾರ್ಯಕರ್ತರ ತಂಡದ ಭಾಗವಾಗಿದ್ದರು. ಮುದಾಸಿರ್ ಶೇಖ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ನೀಡಲಾಗಿತ್ತು. ಮುದಸಿರ್ ಪತ್ನಿ ಶಮೀಮಾ, ಅವರು ಮೇ 2023 ರಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಮುಖ್ಯ ಬಾರಾಮುಲ್ಲಾ ಪಟ್ಟಣದ ಚೌಕವನ್ನು ಪೊಲೀಸ್ ಅಧಿಕಾರಿಯ ನೆನಪಿಗಾಗಿ ಶಹೀದ್ ಮುದಾಸಿರ್ ಚೌಕ್ ಎಂದು ಹೆಸರಿಸಲಾಗಿದೆ.

ಮುದಾಸಿರ್ ಅವರ ಮರಣದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಟುಂಬವನ್ನು ಭೇಟಿ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡ ಎರಡು ಬಾರಿ ಭೇಟಿ ನೀಡಿದ್ದರು ಎಂದು ಮುದಸಿರ್ ಚಿಕ್ಕಪ್ಪ ಮಹಮದ್ ಯೂನಸ್ ಹೇಳಿದ್ದಾರೆ.

"ನನ್ನ ಅತ್ತಿಗೆ ಇಲ್ಲಿಗೆ ಬಂದಾಗ 20 ವರ್ಷ ವಯಸ್ಸಿನವಳಾಗಿದ್ದಳು ಮತ್ತು ಈಗ 45 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನನ್ನ ಮನವಿ ಏನೆಂದರೆ ಅವರು ಗಡಿಪಾರು ಮಾಡಬಾರದು" ಎಂದು ಯೂನಸ್ ಹೇಳಿದರು.

ನವವಿವಾಹಿತರೂ ಗಡಿಪಾರು

ಏತನ್ಮಧ್ಯೆ, ಭಾರತೀಯ ಪ್ರಜೆಗಳನ್ನು ವಿವಾಹವಾದ ಮತ್ತು LTV (ದೀರ್ಘಾವಧಿಯ ವೀಸಾ) ಜೊತೆಗೆ ನೀಡಲಾದ NORI (ಭಾರತಕ್ಕೆ ಮರಳಲು ಯಾವುದೇ ಬಾಧ್ಯತೆ ಇಲ್ಲ) ಪ್ರಮಾಣಪತ್ರಗಳನ್ನು ಹೊಂದಿರುವ 70 ಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ಕೂಡ ಮಂಗಳವಾರ ಅಟ್ಟಾರಿ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಮೂಲಕ ಪಾಕಿಸ್ತಾನಕ್ಕೆ ವಾಪಸ್ ತೆರಳಿದ್ದಾರೆ. ಪಾಕಿಸ್ತಾನಕ್ಕೆ ಸಂಕ್ಷಿಪ್ತ ಭೇಟಿಗಾಗಿ ವಿದೇಶಾಂಗ ಸಚಿವಾಲಯ (MEA) NORI ಪ್ರಮಾಣಪತ್ರಗಳನ್ನು ನೀಡುತ್ತದೆ. ಇದನ್ನು ಹೊಂದಿರುವವರು ಯಾವುದೇ ನಿರ್ಬಂಧಗಳಿಲ್ಲದೆ ಭಾರತಕ್ಕೆ ಮರಳಲು ಅನುಮತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

SCROLL FOR NEXT