ಸೋನಿಯಾ ಗಾಂಧಿ 
ದೇಶ

ಗಣರಾಜ್ಯವನ್ನು ದೇವಪ್ರಭುತ್ವ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಸೈದ್ಧಾಂತಿಕ ದಂಗೆ: ಸೋನಿಯಾ ಗಾಂಧಿ

ಬಿಜೆಪಿಯು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಕೆಲವು ಪ್ರಬಲರಿಗೆ ಸೇವೆ ಸಲ್ಲಿಸುವ ದೇವಪ್ರಭುತ್ವಾತ್ಮಕ ಕಾರ್ಪೊರೇಟ್ ರಾಜ್ಯವನ್ನಾಗಿ ಬದಲಾಯಿಸುವ ಮೂಲಕ "ಸೈದ್ಧಾಂತಿಕ ದಂಗೆ" ನಡೆಸಲು ಪ್ರಯತ್ನಿಸುತ್ತಿದೆ.

ನವದೆಹಲಿ: ಆಡಳಿತಾರೂಢ ಬಿಜೆಪಿ ಪಕ್ಷವು ತಾನು ಬಹಳ ದಿನಗಳಿಂದ ವಿರೋಧಿಸುತ್ತಿದ್ದ ಚೌಕಟ್ಟನ್ನೇ ಕೆಡವಲು ತನ್ನ ಅಧಿಕಾರವನ್ನು ಬಳಸಿ ಸಂವಿಧಾನವನ್ನು "ಮುತ್ತಿಗೆಯಲ್ಲಿಟ್ಟಿದೆ" ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.

ಬಿಜೆಪಿಯು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಕೆಲವು ಪ್ರಬಲರಿಗೆ ಸೇವೆ ಸಲ್ಲಿಸುವ ದೇವಪ್ರಭುತ್ವಾತ್ಮಕ ಕಾರ್ಪೊರೇಟ್ ರಾಜ್ಯವನ್ನಾಗಿ ಬದಲಾಯಿಸುವ ಮೂಲಕ "ಸೈದ್ಧಾಂತಿಕ ದಂಗೆ" ನಡೆಸಲು ಪ್ರಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

'ಸಾಂವಿಧಾನಿಕ ಸವಾಲುಗಳು - ದೃಷ್ಟಿಕೋನಗಳು ಮತ್ತು ಮಾರ್ಗಗಳು' ಎಂಬ ದಿನವಿಡೀ ನಡೆದ ರಾಷ್ಟ್ರೀಯ ಕಾನೂನು ಸಮಾವೇಶದಲ್ಲಿ ಓದಿದ ತಮ್ಮ ವಿಶೇಷ ಸಂದೇಶದಲ್ಲಿ, ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ ಮತ್ತು ಬೀದಿಗಳಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರತಿಯೊಂದು ಪ್ರಯತ್ನವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು. ಇದು ಕೇವಲ ರಾಜಕೀಯವಲ್ಲ, ಆದರೆ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ರಕ್ಷಿಸುವ ಸೈದ್ಧಾಂತಿಕ ಬದ್ಧತೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

"ಇಂದು, ಸಂವಿಧಾನವು ಮುತ್ತಿಗೆಯಲ್ಲಿದೆ. ಸ್ವಾತಂತ್ರ್ಯಕ್ಕಾಗಿ ಎಂದಿಗೂ ಹೋರಾಡದ ಅಥವಾ ಸಮಾನತೆಯನ್ನು ಎತ್ತಿಹಿಡಿಯದ ಬಿಜೆಪಿ-ಆರ್‌ಎಸ್‌ಎಸ್, ಈಗ ಬಹಳ ದಿನಗಳಿಂದ ವಿರೋಧಿಸುತ್ತಿದ್ದ ಚೌಕಟ್ಟನ್ನೇ ಕೆಡವಲು ತನ್ನ ಅಧಿಕಾರ ಬಳಸುತ್ತದೆ" ಎಂದು ಅವರು ಹೇಳಿದರು.

"ಅವರ ಸೈದ್ಧಾಂತಿಕ ಪೂರ್ವಜರು ಮನುಸ್ಮೃತಿಯನ್ನು ವೈಭವೀಕರಿಸಿದರು. ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದರು ಮತ್ತು ಪ್ರಜಾಪ್ರಭುತ್ವ ಟೊಳ್ಳು, ತಾರತಮ್ಯವೇ ಕಾನೂನು ಎಂಬ ಹಿಂದೂ ರಾಷ್ಟ್ರವನ್ನು ಕಲ್ಪಿಸಿಕೊಂಡಿದ್ದರು. ಅಧಿಕಾರದಲ್ಲಿದ್ದಾಗ, ಅವರು ಸಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸಿದ್ದಾರೆ. ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಿದ್ದಾರೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ದಲಿತರು, ಆದಿವಾಸಿಗಳು, ಒಬಿಸಿಗಳು ಹಾಗೂ ದುಡಿಯುವ ಬಡವರಿಗೆ ದ್ರೋಹ ಮಾಡಿದ್ದಾರೆ" ಎಂದು ಟೀಕಿಸಿದರು.

"ಈಗ ಅವರು ಅಂಬೇಡ್ಕರ್ ಅವರ ಸಮಾನ ಪೌರತ್ವದ ದೃಷ್ಟಿಕೋನದ ಆಧಾರಸ್ತಂಭಗಳಾದ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಸುಧಾರಣೆಯಲ್ಲ, ಆದರೆ ನಮ್ಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಕೆಲವು ಪ್ರಬಲರಿಗೆ ಸೇವೆ ಸಲ್ಲಿಸುವ ದೇವಪ್ರಭುತ್ವದ ಕಾರ್ಪೊರೇಟ್ ರಾಜ್ಯದೊಂದಿಗೆ ಬದಲಾಯಿಸುವ ಸೈದ್ಧಾಂತಿಕ ದಂಗೆಯಾಗಿದೆ" ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT