ಶಶಿ ತರೂರ್ 
ದೇಶ

ಅಮೆರಿಕದ ಸರಕುಗಳ ಮೇಲೂ ಶೇ.50 ರಷ್ಟು ಸುಂಕ ವಿಧಿಸಿ: ಮೋದಿಗೆ ಶಶಿ ತರೂರ್ ಆಗ್ರಹ; Video

ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ.

ನವದೆಹಲಿ: ಭಾರತದ ರಫ್ತಿನ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಆಗ್ರಹಿಸಿದ್ದಾರೆ.

ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಅಮೆರಿಕದ ಇಂತಹ ಕ್ರಮಗಳಿಂದ ದೇಶವು ಬೆದರಬಾರದು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಯಾವುದೇ ದೇಶವು ಈ ರೀತಿ ಭಾರತಕ್ಕೆ ಬೆದರಿಕೆ ಹಾಕಲು ಬಿಡಬಾರದು ಎಂದು ಅವರು ಶಶಿ ತರೂರ್ ಹೇಳಿದ್ದಾರೆ.

"ನಮ್ಮೊಂದಿಗೆ 90 ಶತಕೋಟಿ ಡಾಲರ್‌ಗಳ ವ್ಯಾಪಾರ ಇರುವುದರಿಂದ. ಅಮೆರಿಕದ ಈ ಕ್ರಮ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಮತ್ತು ಎಲ್ಲವೂ ಶೇ. 50 ರಷ್ಟು ಹೆಚ್ಚು ದುಬಾರಿಯಾದರೆ, ಖರೀದಿದಾರರು ಭಾರತೀಯ ವಸ್ತುಗಳನ್ನು ಏಕೆ ಖರೀದಿಸಬೇಕು ಎಂದು ಯೋಚಿಸುತ್ತಾರೆ?... ಅವರು ಹೀಗೆ ಮಾಡಿದರೆ, ನಾವು ಅಮೆರಿಕದ ರಫ್ತಿನ ಮೇಲೆ ಶೇ 50 ರಷ್ಟು ಸುಂಕ ವಿಧಿಸಬೇಕು... ಯಾವುದೇ ದೇಶವು ನಮ್ಮನ್ನು ಈ ರೀತಿ ಬೆದರಿಸಬಾರದು" ಎಂದು ಹೇಳಿದ್ದಾರೆ.

"ಅಮೆರಿಕನ್ ಸರಕುಗಳ ಮೇಲಿನ ನಮ್ಮ ಸರಾಸರಿ ಶೇ. 17 ರಷ್ಟು ಸುಂಕವನ್ನು ಏಕೆ ಮುಂದುವರೆಸಬೇಕು? ನಾವು ಅದನ್ನು ಶೇ. 50ಕ್ಕೆ ಹೆಚ್ಚಿಸಬೇಕು... ನಾವು ಅವರನ್ನು ಕೇಳಬೇಕು, ಅವರು ನಮ್ಮ ಸಂಬಂಧವನ್ನು ಗೌರವಿಸುವುದಿಲ್ಲವೇ? ಭಾರತ ಅವರಿಗೆ ಮುಖ್ಯವಲ್ಲದಿದ್ದರೆ, ಅವರು ನಮಗೂ ಮುಖ್ಯವಲ್ಲ" ಎಂದು ಶಶಿ ತರೂರ್ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video