ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿ ಮನ್ ಕಿ ಬಾತ್ ನಿಂದ 34.13 ಕೋಟಿ ರೂ ಆದಾಯ

ಈ ಕುರಿತು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್, ಮನ್ ಕಿ ಬಾತ್ ಕಾರ್ಯಕ್ರಮವು ಹಲವು ಸಾಂಪ್ರದಾಯಿಕ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಹೇಳಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಆರಂಭವಾದಾಗಿನಿಂದ ಇಲ್ಲಿಯವರೆಗೆ 34.13 ಕೋಟಿ ರೂ. ಆದಾಯ ಗಳಿಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

ಈ ಕುರಿತು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್, ಮನ್ ಕಿ ಬಾತ್ ಕಾರ್ಯಕ್ರಮವು ಹಲವು ಸಾಂಪ್ರದಾಯಿಕ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಹೇಳಿದರು.

"ಮನ್ ಕಿ ಬಾತ್ ಕಾರ್ಯಕ್ರಮವನ್ನು ಹೆಚ್ಚುವರಿ ವೆಚ್ಚವಿಲ್ಲದೆ ಅಸ್ತಿತ್ವದಲ್ಲಿರುವ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಕಾಶವಾಣಿಯು ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ ಮತ್ತು ಆರಂಭದಿಂದ ಇಲ್ಲಿಯವರೆಗೆ 34.13 ಕೋಟಿ ರೂ. ಆದಾಯ ಗಳಿಸಿದೆ" ಎಂದು ಅವರು ತಿಳಿಸಿದರು.

ಮನ್ ಕಿ ಬಾತ್ ಅನ್ನು ಮೊದಲು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು ಮತ್ತು ಇದು ರಾಷ್ಟ್ರೀಯ ಮತ್ತು ಪ್ರಾದೇಶಿಕ ಜಾಲದಾದ್ಯಂತ ನೇರ ಪ್ರಸಾರವಾಗುತ್ತದೆ.

ಏಕಕಾಲದಲ್ಲಿ, ಈ ಕಾರ್ಯಕ್ರಮವನ್ನು ದೂರದರ್ಶನದ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಭಾಷಾ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಪಿಯೂಷ್ ಗೋಯಲ್ ಅವರೇ, ಸುಳ್ಳು ಹೇಳಬೇಡಿ, ಈ ಒಪ್ಪಂದ ಸರೆಂಡರ್ ಅಷ್ಟೆ’: ರಾಹುಲ್–ವಾಣಿಜ್ಯ ಸಚಿವರ ನಡುವೆ ವಾಗ್ವಾದ-Video

ಈಶಾನ್ಯ ಭಾರತದ ಮೊಟ್ಟಮೊದಲ ವಿಮಾನ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಭೂಸ್ಪರ್ಶ: ಪ್ರಧಾನಿ ಮೋದಿ ಭೇಟಿ, ವಾಯುಪ್ರದರ್ಶನ ವೀಕ್ಷಣೆ-Video

'ನಿಮ್ಮಿಂದ ಆಗದಿದ್ದರೆ ಎದ್ದು ಹೊರ ಹೋಗಿ': ಆದೇಶ ನಿರಾಕರಿಸಿದ SP ಮೇಲೆ ಹೌಹಾರಿದ ಸಚಿವ, ಸಾರ್ವಜನಿಕ ಸಭೆಯಲ್ಲೇ ಹೈಡ್ರಾಮಾ..! Video

T20 World Cup 2026: ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್‌ಗೆ ಹೃದಯಾಘಾತ!

ಡಿಜಿಟಲ್ ಗೀಳು ಭವಿಷ್ಯ ಹಾಳು (ಕುಶಲವೇ ಕ್ಷೇಮವೇ)

SCROLL FOR NEXT