ಅಡ್ವೊಕೇಟ್ ಅಭಿಷೇಕ್ ಮನು ಸಿಂಘ್ವಿ online desk
ದೇಶ

ಬೀದಿ ನಾಯಿಗಳ ಕೇಸ್ ವಿಚಾರಣೆ: 'ತಲೆ ಇಲ್ಲದೇ' ವಾದ ಮಂಡಿಸಿದ ಅಡ್ವೊಕೇಟ್ ಅಭಿಷೇಕ್ ಮನು ಸಿಂಘ್ವಿ!

ಪರದೆಯ ಮೇಲೆ ಅಭಿಷೇಕ್ ಮನು ಸಿಂಘ್ವಿ ಅವರ ತಲೆ ಭಾಗಶಃ ಕಾಣೆಯಾಗಿತ್ತು. ವರ್ಚುವಲ್ ಯಡವಟ್ಟಿನ ಪರಿಣಾಮ ನ್ಯಾಯಾಲಯದಲ್ಲಿ ಕೆಲ ಕಾಲ ಹಾಸ್ಯದ ವಾತಾವರಣ ಮೂಡಿತ್ತು.

ನವದೆಹಲಿ: ಈ ಸುದ್ದಿಯ ಶೀರ್ಷಿಕೆ ಓದಿ ಇದೆಂಥಾ ವಿಚಿತ್ರ, ವಿಲಕ್ಷಣ ಘಟನೆ ಎಂದುಕೊಳ್ಳಬೇಡಿ. ಇದು ನಿಜವಾಗಿಯೂ ನಡೆದಿರುವ ಘಟನೆ ಹಾಗೂ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಮೀಮ್ ಗಳಿಗೆ ಕಾರಣವಾಗಿರುವ ತಾಜಾ ಘಟನೆ.

ಆಗಿದ್ದು ಇಷ್ಟು... ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆಯಲ್ಲಿ, ಹಿರಿಯ ವಕೀಲ ಎ.ಎಂ. ಸಿಂಗ್ವಿ ಅವರು ಆನ್ ಲೈನ್ ಮೂಲಕ ವಾದ ಮಂಡನೆ ಮಾಡುತ್ತಿದ್ದರು.

ಪರದೆಯ ಮೇಲೆ ಅಭಿಷೇಕ್ ಮನು ಸಿಂಘ್ವಿ ಅವರ ತಲೆ ಭಾಗಶಃ ಕಾಣೆಯಾಗಿತ್ತು. ವರ್ಚುವಲ್ ಯಡವಟ್ಟಿನ ಪರಿಣಾಮ ನ್ಯಾಯಾಲಯದಲ್ಲಿ ಕೆಲ ಕಾಲ ಹಾಸ್ಯದ ವಾತಾವರಣ ಮೂಡಿತ್ತು.

ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿಆರ್) ನಲ್ಲಿ ಯಾವುದೇ ಬೀದಿ ಪ್ರಾಣಿಗಳು ಮುಕ್ತವಾಗಿ ಓಡಾಡಬಾರದು ಎಂದು ನಿರ್ದೇಶಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರ ಪೀಠವು ಈ ವಾರದ ಆರಂಭದಲ್ಲಿ ಹೊರಡಿಸಿದ ಸ್ವಯಂಪ್ರೇರಿತ ಆದೇಶಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿತ್ತು.

ವರ್ಚುವಲ್ ಹಾಜರಿಯ ಸಮಯದಲ್ಲಿ, ನ್ಯಾಯಮೂರ್ತಿ ನಾಥ್ ಅವರು ವಿಚಿತ್ರವಾದ ಪರದೆಯ ಪರಿಣಾಮವನ್ನು ಗಮನಿಸಿದ್ದು "ಮಿಸ್ಟರ್ ಸಿಂಘ್ವಿ, ನಿಮ್ಮ ತಲೆಯನ್ನು ಏಕೆ ಕತ್ತರಿಸಲಾಗಿದೆ?" ಎಂದು ಕೇಳಿದರು, ಇದರಿಂದಾಗಿ ವಿಚಾರಣೆಯ ಅವಧಿಯಲ್ಲಿ ಸ್ವಲ್ಪ ಸಮಯದವರೆಗೆ ಲಘು ವಾತಾವರಣ ನಿರ್ಮಾಣವಾಗಿತ್ತು.

ತಾಂತ್ರಿಕ ದೋಷದಿಂದಾಗಿ ಅಭಿಷೇಕ್ ಮನು ಸಿಂಘ್ವಿ ಅವರ ತಲೆ ಭಾಗಶಃ ಪರದೆಯ ಮೇಲೆ ಕಾಣಿಸಿದ್ದು

ನ್ಯಾಯಾಧೀಶರ ಪ್ರಶ್ನೆಗೆ ನಕ್ಕ ಸಿಂಘ್ವಿ, "ಇದು ತಂತ್ರಜ್ಞಾನದ ಯಡವಟ್ಟು, ಮೈಲಾರ್ಡ್!" ಎಂದು ಉತ್ತರಿಸಿದರು. ಈ ದೋಷ ಬಹುಶಃ ವರ್ಚುವಲ್ ಫಿಲ್ಟರ್‌ನಿಂದ ಉಂಟಾಗಿರಬಹುದು, ಅದು ಅವರ ತಲೆಯ ಮೇಲ್ಭಾಗವನ್ನು ಕಣ್ಮರೆ ಮಾಡಿ ಪರದೆಯ ಮೇಲೆ ವಿಲಕ್ಷಣವಾದ "ತಲೆಯಿಲ್ಲದ" ನೋಟವನ್ನು ಸೃಷ್ಟಿಸಿತು.

ಈ ಘಟನೆ ಅತ್ಯಂತ ಗಂಭೀರವಾದ ನ್ಯಾಯಾಲಯದ ವಿಚಾರಣೆಗಳಲ್ಲಿಯೂ ಸಹ, ತಂತ್ರಜ್ಞಾನವು ಕೆಲವು ಅನಿರೀಕ್ಷಿತ - ಮತ್ತು ಸ್ವಲ್ಪ ಹಾಸ್ಯಮಯ - ಕ್ಷಣಗಳನ್ನು ಉಂಟುಮಾಡಬಹುದು ಎಂಬುದನ್ನು ನೆನಪಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT