ಸಚಿವ ಪೆರಿಯಸಾಮಿ ಮನೆ 
ದೇಶ

ತಮಿಳುನಾಡು ಸಚಿವ ಪೆರಿಯಸಾಮಿ, ಅವರ ಪುತ್ರ ಡಿಎಂಕೆ ಶಾಸಕ ಸೆಂಥಿಲ್ ಕುಮಾರ್ ಮನೆ ಸೇರಿ ಹಲವು ಕಡೆ ED ದಾಳಿ

ಮಧುರೈ ನಗರದ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ತಂಡ, ಇಂದು ದಿಂಡಿಗಲ್‌ನ ದುರೈರಾಜ್ ನಗರದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಅವರ ಮನೆಯಲ್ಲಿ ತೀವ್ರ ಶೋಧ ನಡೆಸಿದೆ.

ದಿಂಡಿಗಲ್: ತಮಿಳುನಾಡು ಸಚಿವ ಐ ಪೆರಿಯಸಾಮಿ, ಅವರ ಪುತ್ರ ಡಿಎಂಕೆ ಶಾಸಕ ಐ ಪಿ ಸೆಂಥಿಲ್ ಕುಮಾರ್ ಮತ್ತು ಪುತ್ರಿ ಇಂದ್ರಾಣಿ ಅವರಿಗೆ ಸಂಬಂಧಿಸಿದ ದಿಂಡಿಗಲ್‌ನ ಮನೆ ಸೇರಿದಂತೆ ಹಲವು ಕಡೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಶನಿವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಮಧುರೈ ನಗರದ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ತಂಡ, ಇಂದು ದಿಂಡಿಗಲ್‌ನ ದುರೈರಾಜ್ ನಗರದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಅವರ ಮನೆಯಲ್ಲಿ ತೀವ್ರ ಶೋಧ ನಡೆಸಿದೆ.

ಇದಲ್ಲದೆ, ಸಚಿವರ ಪುತ್ರ ಮತ್ತು ಪಳನಿ ಶಾಸಕ ಐ ಪಿ ಸೆಂಥಿಲ್ ಕುಮಾರ್ ಅವರ ಸೀಲಪಾಡಿಯಲ್ಲಿರುವ ಮನೆ ಮತ್ತು ದಿಂಡಿಗಲ್‌ನ ವಲ್ಲಾಲರ್ ನಗರದಲ್ಲಿರುವ ಸಚಿವರ ಪುತ್ರಿ ಇಂದ್ರಾಣಿ ಅವರ ಮನೆಯ ಮೇಲೆಯೂ ಎರಡು ತಂಡಗಳು ದಾಳಿ ನಡೆಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಡಿ ಕ್ರಮದ ಬಗ್ಗೆ ಪೆರಿಯಸಾಮಿ ಅಥವಾ ಡಿಎಂಕೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮದ್ರಾಸ್ ಹೈಕೋರ್ಟ್ ಏಪ್ರಿಲ್ 29, 2025 ರಂದು ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ(ಡಿಎ) ಪ್ರಕರಣವನ್ನು ಪರಿಶೀಲಿಸಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ.. ಸುಳ್ಳು ಸುದ್ದಿ ಹರಡಿದ್ರೆ ಕೇಸ್ ಹಾಕ್ತೀವಿ': ಸಿಎಂ ಸಿದ್ದರಾಮಯ್ಯ ಘೋಷಣೆ

KL Rahulರನ್ನು ಹೀಗೆ ನಡೆಸಿಕೊಂಡಿದ್ದು ನಿಜಕ್ಕೂ ಹಾಸ್ಯಾಸ್ಪದ: ಮೂರ್ಖತನದ ನಿರ್ಧಾರ ಎಂದು ಟೀಕಿಸಿದ ಮಾಜಿ ನಾಯಕ

ಕಾಂಗ್ರೆಸ್-ಆರ್‌ಜೆಡಿಯಿಂದ 'ಪಿತೂರಿ'; ಬಿಹಾರ ಚುನಾವಣೆಯಿಂದ ಹಿಂದೆ ಸರಿದ ಜೆಎಂಎಂ

ದೀಪಾವಳಿ ಹಬ್ಬದಂದೆ ಘೋರ ಘಟನೆ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

ರಾಜ್ಯ ಸರ್ಕಾರಕ್ಕೆ ಸೆಡ್ಡು: ಕಲಬುರಗಿಯಲ್ಲಿ ನಡೆದ RSS ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ವೈದ್ಯ, Congress ಕಾರ್ಯಕರ್ತರು!

SCROLL FOR NEXT